Featured

ಪಡುಬಿದ್ರಿ : ತಂದೆಯಿಂದಲೇ ಮಗಳ ಖಾಸಗಿ ವೀಡಿಯೋ  ವೈರಲ್‌ ; ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪುತ್ರಿ – vishwanews24

ಪಡುಬಿದ್ರಿ : ತಂದೆಯಿಂದಲೇ ಮಗಳ ಖಾಸಗಿ ವೀಡಿಯೋ  ವೈರಲ್‌ ; ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪುತ್ರಿ

ಪಡುಬಿದ್ರಿ : ತನ್ನ ಸ್ವಂತ ಮಗಳ ಖಾಸಗಿ ವಿಡಿಯೋಗಳನ್ನು ತಂದೆಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಇದರಿಂದ ಮನನೊಂದ ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ತಂದೆ ಆಸೀಫ್‌ ಯಾನೆ ಆಸೀಫ್‌ ಆಪದ್ಭಾಂದವನ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆಪದ್ಬಾಂಧವ ಆಸಿಫ್‌ ಎಂದೇ ಗುರುತಿಸಿಕೊಂಡಿರುವ ಪಡುಬಿದ್ರಿ ಸಮೀಪದ ಕಂಚಿನಟ್ಕ ನಿವಾಸಿ ಆಸಿಫ್‌ ಆರೋಪಿ. ಮಗಳ ವೀಡಿಯೊಗಳನ್ನು ವಾಟ್ಸಪ್‌ ಗ್ರೋಪ್‌ಗಳಲ್ಲಿ ಹಂಚಿಕೊಂಡಿರುವುದಕ್ಕೆ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಆಸಿಫ್‌ ಪುತ್ರಿ ತೀರ್ಥಹಳ್ಳಿಯ ಸಂಬಂಧಿಕನೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ಇದು ಆಸಿಫ್‌ಗೆ ಇಷ್ಟವಿರಲಿಲ್ಲ.ಈ ಹಿನ್ನಲೆ ಯುವಕನನ್ನು ಮನೆಗೆ ಕರೆಸಿ ಹಲ್ಲೆ ಮಾಡಿದ್ದಲ್ಲದೆ ಇಬ್ಬರ ಮೊಬೈಲ್‌ ಕಸಿದುಕೊಂಡು ಅದರಲ್ಲಿದ್ದ ವೀಡಿಯೊ ಮತ್ತು ಫೋಟೊಗಳನ್ನು ತನ್ನ ಮೊಬೈಲ್‌ಗೆ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಅವುಗಳನ್ನು ವಾಟ್ಸಪ್‌ ಗ್ರೂಪ್‌ಗಳು ಸೇರಿ ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದಕ್ಕೆ ಪತ್ನಿ ಆಕ್ಷೇಪಿಸಿದ್ದು, ಆಕೆಗೆ ಮತ್ತು ಪುತ್ರಿಗೆ ಹಲ್ಲೆಯನ್ನೂ ಮಾಡಿದ್ದಾನೆ. ಈ ಕುರಿತಾಗಿ ಪತ್ನಿಯು ಉಡುಪಿ ಸೆನ್‌ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪತ್ನಿಯು ಉಚ್ಚಿಲದ ತನ್ನ ತಾಯಿ ಮನೆಯಲ್ಲಿದ್ದಾಗ ಅಲ್ಲಿಗೂ ಹೋಗಿ ಗಲಾಟೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Vishwa News 24

Recent Posts

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ – vishwanews24

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…

2 hours ago

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ – vishwanews24

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…

2 hours ago

ದೇಣಿಗೆ ಕಳ್ಳತನ ವಿವಾದ: ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ – vishwanews24

ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…

2 hours ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ – vishwanews24

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ  ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…

2 hours ago

ರಾಮ ಮಂದಿರ ದೇಣಿಗೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್‌ ಎಚ್ಚರಿಕೆ – vishwanews24

ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್‌ ಲಕ್ನೋ: ರಾಮಭಕ್ತರ…

2 hours ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

4 hours ago