Featured

ಪಡುಬಿದ್ರಿ : ದಟ್ಟ ಆಲದ ಮರದ ಕೆಳಗೆ ಎರಡು ಬೃಹತ್ ಗಾತ್ರದ ವೀರಗಲ್ಲು – Vishwanews24

ಪಡುಬಿದ್ರಿ : ದಟ್ಟ ಆಲದ ಮರದ ಕೆಳಗೆ ಕಾಣಸಿಗುವ ಎರಡು ಬೃಹತ್ ಗಾತ್ರದ ವೀರಗಲ್ಲು

ಪಡುಬಿದ್ರಿ : ಉಡುಪಿ ಜಿಲ್ಲೆಯ ಪಡುಬಿದ್ರೆಯ ನಂದಿಕೂರುವಿನಿಂದ ಮುಂದೆ ಸಾಗಿ  ಕೆಲ್ಲಾರು ಪಲಿಮಾರುವಿನ ಅಸ್ತಪಡ್ವೆ ಎಂಬಲ್ಲಿ ಆಟದ ಮೈದಾನದ ಬಳಿ ಆಲದ ಮರದ ಕೆಳಗಡೆ ಎರಡು ಬೃಹತ್ ಗಾತ್ರದ ವೀರಗಲ್ಲು ಕಾಣಸಿಗುತ್ತದೆ.
ಸುಮಾರು ಒಂದು ಏಳು ಫೀಟು. ಮತ್ತೊಂದು ಎಂಟು ಫೀಟು ಎತ್ತರದ ಎರಡು ಫೀಟು ಆಗಲ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಎಂಬಂತೆ. ಉಬ್ಬಿಕೊಂಡ ಚಿತ್ರ  ಕಾಣಸಿಗುತ್ತದೆ. ತಲೆಬಾಗದಲ್ಲಿ ಸೂರ್ಯ ಚಂದ್ರ. ಕತ್ತಿ ಗುರಾಣಿ. ಸೂಡಿ ಹಾಕಿದಂತೆ ತಲೆಯ ಭಾಗ. ವೀರರು ಬಳಸುವಂತಹ ಮೈ ಹೊದಿಕೆಯ ಬಟ್ಟೆ ಹೊಂದಿರುತ್ತದೆ. ಬಲಕಾಲು ಮುಂದೆ ನಿಂತು. ಗುರಾಣಿ ಕತ್ತಿ ಹಿಡಿದು ‌ ಯುದ್ಧಕ್ಕೆ ಆಹ್ವಾನಿಸಿದಂತಿದೆ.
ಪುರುಷನ ಚಿತ್ರ ಇರುವ ಶಾಸನ ದಲ್ಲಿ ಬಾಲದಂತಿದೆ.. ಈ ಭಾಗದ ಜನರು ಇದನ್ನು ಕೋಟಿ ಚೆನ್ನೇರು ಅನ್ನುತ್ತಾರೆ. ಅನತಿ ದೂರದಲ್ಲಿ ದೈವರಾಜ ಕೊಡ್ದಬ್ಬುವಿನ ಸನ್ನಿಧಾನವಿದೆ.  ಪ್ರಮುಖ ರಸ್ತೆಯಲ್ಲಿ ಕೋಟಿ ಚೆನ್ನಯರ ಗರಡಿಯೂ ಇದೆ. ಈ ಶಾಸನಗಳು ಸರಕಾರಿ ಜಾಗದಲ್ಲಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗೋಳಿಮರದ (ಆಲದಮರ) ಕೆಳಗಡೆ ನಿರ್ಜನ ಪ್ರದೇಶವಾದ್ದರಿಂದ ಯಾರು ಇದರ ಕಡೆಗೆಹೋಗುವುದಿಲ್ಲ ಈಗಾಗಲೇ ಬೇಲಿ ಹಾಕಿದ್ದು. ಸ್ವಚ್ಛತೆ ಕಾಣುವುದಿಲ್ಲ. ಉಡುಪಿ ನಿಟ್ಟೂರಿನ ನಿವಾಸಿ ರಾಜೇಶ್ ಅವರ ಮಾಹಿತಿ ಮೇರೆಗೆ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಜಯಶೆಟ್ಟಿಬನ್ನಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಈ ಸಂದರ್ಭದಲ್ಲಿ ಸ್ಥಳೀಯರಾದ ಕೇಶವ ಶೆಟ್ಟಿ ಭಾಸ್ಕರ, ಪ್ರಕಾಶ, ರಮೇಶ,  ರಾಘವೇಂದ್ರ ಸತೀಶ್ ಮುಖಾರಿ ವಿಠಲ ಮೇಸ್ತ್ರಿ ಜೊತೆಗಿದ್ದು ಮಾಹಿತಿ ನೀಡಿ ಸಹಕರಿಸಿದರು.
Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

5 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

5 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

6 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

6 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

6 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

7 hours ago