ಪಡುಬಿದ್ರಿ: ಪಡುಬಿದ್ರಿ ನಡ್ಸಾಲ್ ಗ್ರಾಮದ ಸರ್ವೆ ನಂಬ್ರ77/37ರಲ್ಲಿ ಗೊತ್ತುಪಡಿಸಿದ್ದ 0.19 ಎಕರೆ ಸರಕಾರಿ ಜಮೀನಿನಲ್ಲಿನ ನಿರ್ಮಿಸಲು ಉದ್ದೇಶಿಸಿದ್ದ ಪಡುಬಿದ್ರಿ ಗ್ರಾ.ಪಂ.ನ ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆ ಘಟಕ ಕಾಮಗಾರಿಯನ್ನು ಅಬ್ಬೇಡಿ ಹಾಗೂ ಸುಜ್ಲಾನ್ ಆರ್. ಆರ್. ಕಾಲನಿ ನಿವಾಸಿಗಳ ತೀವ್ರ ವಿರೋಧದಿಂದಾಗಿ ತಾತ್ಕಾಲಿಕವಾಗಿ ಕೈಬಿಡಲಾಗಿದೆ.
ಜಿಲ್ಲಾಧಿಕಾರಿ ಆದೇಶದಂತೆ ಘಟಕ ನಿರ್ಮಾಣ ಕಾಮಗಾರಿಗೆ ಗ್ರಾ.ಪಂ.ನಿಂದ ಸೋಮವಾರ ಸಿದ್ಧತೆ ನಡೆಸಲಾಗಿತ್ತು. ಈ ವಿಷಯ ತಿಳಿದ ಅಬ್ಬೇಡಿ ಹಾಗೂ ಸುಜ್ಲಾನ್ ಆರ್.ಆರ್. ಕಾಲನಿ ನಿವಾಸಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಪ್ರತಿನಿಧಿಗಳು ಪಂಚಾಯತ್‌ಗೆ ಗ್ರಾಮಸ್ಥರನ್ನು ಆಹ್ವಾನಿಸಿ ಮಾತುಕತೆಗೆ ಮುಂದಾಗಿದ್ದರು. ಈ ವೇಳೆ ಪರಿಸರದಲ್ಲಿಯೇ ಇರುವ ಅಂಗನವಾಡಿಯ ಮಕ್ಕಳಿಗೆ, ಸಿಬಂದಿಗೆ, ಸುತ್ತಲಿನ 500 ನಿವಾಸಿಗಳಿಗೆ ಸಮಸ್ಯೆಯಾಗುವ ಸಾಧ್ಯತೆಯನ್ನು ಹೇಳಿ, ಘಟಕ ನಿರ್ಮಿಸಬಾರದು ಎಂದು ಆಗ್ರಹಿಸಿದರು.
ಪ್ರಸ್ತುತ ಗೊತ್ತುಪಡಿಸಿರುವ ಜಮೀನಿನಲ್ಲಿ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಸಾರ್ವಜನಿಕ ನೋಟಿಸ್ ಪ್ರಕಟಿಸಿದ್ದರೂ ಆಕ್ಷೇಪ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ನಡಾವಳಿಯಲ್ಲಿ ಉಲ್ಲೇಖೀಸಲಾಗಿದ್ದು ಖಂಡನಾರ್ಹ. ಈ ಬಗ್ಗೆ ಸಾರ್ವ ಜನಿಕರಿಗೆ ಯಾವುದೇ ನೋಟಿಸ್ ಅಥವಾ ಮಾಹಿತಿ ನೀಡದೆ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಆದೇಶ ಹೊರಡಿಸಲಾಗಿದೆ. ಆದೇಶವನ್ನು ತತ್‌ಕ್ಷಣ ಹಿಂಪಡೆದು ನಿರ್ಜನ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದರು.
ನಾರಾಯಣ ಶೆಟ್ಟಿ, ಭಾಸ್ಕರ್ ಪಡುಬಿದ್ರಿ, ಲೋಕೇಶ್ ಕಂಚಿನಡ್ಕ, ಮನೋಜ್ ಅಬ್ಬೇಡಿ, ಮೊಹಿಯುದ್ದೀನ್, ಉಮಾ ನಾಥ ಕೆ.ಆರ್., ನಿಜಾಮುದ್ದೀನ್, ಸದಾಶಿವ ಪಡುಬಿದ್ರಿ, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ದಲಿತ ಮುಖಂಡ ಲೋಕೇಶ್ ಕಂಚಿನಡ್ಕ, ಗ್ರಾಮ ಪಂಚಾಯತ್ ಸದರಾದ ಸಂಜೀವಿ ಪೂಜಾರ್ತಿ, ನವೀನ್ ಎನ್.ಶೆಟ್ಟಿ, ನಿಯಾಝ್, ಎಂ.ಎಸ್. ಶಫಿ, ಜ್ಯೂತಿ ಮೆನನ್, ನಾರಾಯಣ ಶೆಟ್ಟಿ, ಸದಾಶಿವ್ ಪಡುಬಿದ್ರಿ, ಭಾಸ್ಕರ್ ಪಡುಬಿದ್ರಿ, ನಿಝಾಮುದ್ದೀನ್, ಮನೋಜ್ ಅಬ್ಬೇಡಿ, ಮೊಹಿಯುದ್ದೀನ್, ಉಮಾನಾಥ ಕೆ.ಆರ್ ಮತ್ತು ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
ಇದನ್ನೂ ಓದಿ : ಪಾಣೆಮಂಗಳೂರು : ಗ್ಯಾಸ್ ಟ್ಯಾಂಕರ್ – ಕಾರು ಮಧ್ಯೆ ಮುಖಾಮುಖಿ ಢಿಕ್ಕಿ ; ಆರು ಮಂದಿ ಗಂಭೀರ -Vishwanews24
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…