ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ನವರಾತ್ರಿಯ ಹಿನ್ನೆಲೆಯಲ್ಲಿ ವೇಷಧಾರಿಗಳಿಬ್ಬರು ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷಧರಿಸಿದ್ದು, ಇದೀಗ ಈ ವೇಷ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.ವಿಡಿಯೋ ತುಣುಕಿನಲ್ಲಿ ರೇಣುಕಾ ಸ್ವಾಮಿ ಹಾಗೂ ಯಮರಾಜನ ವೇಷ ಧರಿಸಿದ ವೇಷಧಾರಿಗಳು ತುಳುವಿನಲ್ಲಿ ಮಾತನಾಡುವುದನ್ನು ನಾವಿಲ್ಲಿ ಕಾಣಬಹುದು.
https://x.com/vishwanews24/status/1845001702279107052
ಉಡುಪಿ ಭಾಗದಲ್ಲಿ ನವರಾತ್ರಿಯ ಸಂದರ್ಭ ವೇಷ ಧರಿಸಿ ಮನೆ ಮನೆಗೆ ತೆರಳುವ ಸಂಪ್ರದಾಯವಿದೆ. ಪ್ರತಿ ವರ್ಷವೂ ವಿಭಿನ್ನ ಮತ್ತು ವಿಶೇಷವಾಗಿರುವ ವೇಷಗಳೊಂದಿಗೆ ಮನೆಮನೆಗೆ ವೇಷಧಾರಿಗಳು ಬರುತ್ತಾರೆ. ಹಾಗೆಯೇ ಪ್ರಸ್ತುತ ವಿದ್ಯಮಾನಗಳನ್ನು ಇಟ್ಟುಕೊಂಡು ವೇಷಧಾರಿಗಳಿಬ್ಬರು ನವರಾತ್ರಿ ವೇಷ ಧರಿಸಿದ್ದಾರೆ. ರೇಣುಕಾ ಸ್ವಾಮಿಯ ಹತ್ಯೆಯ ಬಳಿಕ ಆತನ ಪ್ರೇತವನ್ನು ಕೊಂಡೊಯ್ಯಲು ಯಮರಾಜ ಬಂದಿದ್ದು, ಯಮರಾಜ ವೇಷಧಾರಿ ರೇಣುಕಾ ಸ್ವಾಮಿಯ ಪ್ರೇತವನ್ನು ಕೊಂಡೊಯ್ಯುವ ಹಾಸ್ಯ ಸನ್ನಿವೇಶವನ್ನು ಇಟ್ಟುಕೊಂಡು ವೇಷಧರಿಸಿದ್ದಾರೆ. ರೇಣುಕಾ ಸ್ವಾಮಿ ಪ್ರೇತ ಮತ್ತು ಯಮರಾಜ ವೇಷ ಗಮನ ಸೆಳೆಯುತ್ತಿದೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ…
ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ದಸರಾ ಸಂಭ್ರಮದ ನಡುವೆಯೇ…
ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ : ಅಕ್ಷಿತ್ ಸುವರ್ಣ ಮಂಗಳೂರು:…
ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಮಂಗಳೂರು: ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ…
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…
ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…