ಪಡುಬಿದ್ರಿ: ಕಾರ್ಕಳ ರಸ್ತೆಯ ಸ್ವರಾಜ್ ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್ ಹಾಕುವ ಕೆಲಸದಲ್ಲಿರುವ ನಿತೇಶ್ (32) ಅವರನ್ನು ಆ. 23ರಂದು ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹೊಡೆದಿದ್ದಲ್ಲದೆ, ಅಲ್ಲಿದ್ದ ಮಹಿಳಾ ಕೆಲಸಗಾರರನ್ನೂ ಬೆದರಿಸಿ, ಪಂಪಿಗೆ ಹಾನಿ ಮಾಡಿರುವ ಆರೋಪದಲ್ಲಿ ಕಂಚಿನಡ್ಕದ ಅಬ್ದುಲ್ ರಹೀಮ್, ಆತನ ಮಗ ಮೊಹಮ್ಮದ್ ಶಾನಿದ್, ಕನ್ನಂಗಾರಿನ ಮಸೂದ್, ಕಂಚಿನಡ್ಕದ ಸಿರಾಜ್ ಹಾಗೂ ಆಶೀರ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಆಶೀರ್ ಹೊರತುಪಡಿಸಿ ಉಳಿದ ನಾಲ್ವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ರಹೀಮ್ ಸ್ಕೂಟರಿನಲ್ಲಿ ಬಂದು ಖಾಲಿ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿ ಕೊಡುವಂತೆ ಕೇಳಿದ್ದ. ಬಾಟಲಿ ಇಲ್ಲ ಎಂದಾಗ ಆರೋಪಿಯು ಡಸ್ಟ್‌ಬಿನ್‌ನಲ್ಲಿದ್ದ ಬಾಟಲಿಯೊಂದನ್ನು ಎತ್ತಿಕೊಂಡು ಬಂದು ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾನೆ. ಅದು ತೂತಾಗಿದ್ದು, ಅದರಲ್ಲಿ ಪೆಟ್ರೋಲ್ ತುಂಬಲು ಆಗುವುದಿಲ್ಲವೆಂದು ಹೇಳಿದ್ದಕ್ಕೆ ನಿತೇಶ್ ಮೇಲೆ ಹಲ್ಲೆ ಮಾಡಿದ್ದ.
ಬಳಿಕ ಸಂಜೆಯ ವೇಳೆ ಗುಂಪು ಕಟ್ಟಿಕೊಂಡು ಬಂದ ಆರೋಪಿಯು ಮಹಿಳಾ ಕೆಲಸಗಾರರನ್ನೂ ಅಟ್ಟಾಡಿಸಿಕೊಂಡು ಹೋಗುತ್ತಾ ಪ್ರೇಮಾ ಎಂಬವರನ್ನು ಆರೋಪಿತರು ಕೈಯಿಂದ ದೂಡಿದ್ದು, ಆಕೆ ತಪ್ಪಿಸಿಕೊಂಡು ಹಿಂಭಾಗದ ಶೌಚಾಲಯದಲ್ಲಿ ಅಡಗಿ ಕುಳಿತುಕೊಂಡಳು. ಬಳಿಕ ಸಿರಾಜ್ ಎಂಬಾತನು ಪಂಪಿನಲ್ಲಿ ಅಳವಡಿಸಲಾಗಿದ್ದ ಗಾಜಿಗೆ ಎಸೆದು ಹಾನಿ ಉಂಟು ಮಾಡಿದ್ದಾನೆ. ಇದೇ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಮೊಹಮ್ಮದ್ ಶಾನಿದ್ ಎಂಬಾತನು ಕಚೇರಿಯ ಒಳಗೆ ನುಗ್ಗಿ ಸುಮನ್ಯ ಎಂಬಾಕೆಯನ್ನು ಹಿಡಿಯಲು ಹೋಗಿದ್ದು, ಆಕೆ ತಪ್ಪಿಸಿಕೊಂಡಳು. ಬಳಿಕ ಆರೋಪಿಗಳೆಲ್ಲರೂ ಸಿಬಂದಿಗೆ ಬೆದರಿಕೆ ಹಾಕಿದ್ದಲ್ಲದೆ, ಪಂಪಿಗೆ ಬೆಂಕಿ ಹಾಕಿ ಸುಡುವುದಾಗಿ ಬೆದರಿಸಿ ಹೋಗಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ನಿತೇಶ್ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಆರ್ ಎಸ್ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ…
ಪಾಸ್‌ಪೋರ್ಟ್ ಶುಲ್ಕ ಹೆಚ್ಚಿಸಿದ ಕೇಂದ್ರ ಸರ್ಕಾರ; ಜು.1 ರಿಂದ ಹೊಸ ದರ ಜಾರಿಗೆ ನವದೆಹಲಿ: 14 ವರ್ಷಗಳಲ್ಲಿ ಇದೇ ಮೊದಲ…
ಬೆಳ್ತಂಗಡಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ; ಪ್ರಯಾಣಿಕರು ಅಪಾಯದಿಂದ ಪಾರು ಬೆಳ್ತಂಗಡಿ: ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ…
ನನ್ನ ಮಗಳು ತಪ್ಪಿತಸ್ಥೆ ಎಂದು ಸಾಬೀತಾದರೆ ಅವಳನ್ನು ಗಲ್ಲಿಗೇರಿಸಿ : ಸಿಯಾ ಪೋಷಕರ ಆಕ್ರೋಶ ಮುಂಬೈ: ನನ್ನ ಮಗಳು ತಪ್ಪು…
ದರ್ಶನ್ ಪುತ್ರನಿದ್ದ ಕಾರು ಅಪಘಾತ : ವಿನೀಶ್ ವಾಹನ ಚಲಾಯಿಸಿಲ್ಲ: ವಿಜಯಲಕ್ಷ್ಮಿ ಸ್ಪಷ್ಟನೆ ಬೆಂಗಳೂರು: ನಟ ದರ್ಶನ್ ಅವರ ಪುತ್ರ…
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧರ್ಮಸ್ಥಳ: ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ…