ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರು,ನರ್ಸ್,ಪೋಲಿಸ್ ಸಿಬ್ಬಂದಿ, ಮಾಧ್ಯಮ ಪತ್ರಕರ್ತರಿಗೆ ಅಭಿನಂದನ ಕಾರ್ಯಕ್ರಮ ಶುಕ್ರವಾರ ಪಡುಬಿದ್ರಿ ಬಂಟರ ಭವನದ ಬಂಟರ ಚಾವಡಿಯಲ್ಲಿ ನಡೆಯಿತು.
ಪ್ರಾಸ್ತಾವಿಕ ಮಾತಾಗಳನ್ನಾಡಿದ ಅಧ್ಯಕ್ಷ ಡಾ ದೇವಿಪ್ರಸಾದ್ ಶೆಟ್ಟಿ” ಕೊರೋನಾ ವಾರಿಯರ್ಸ್ ಕುಟುಂಬದ ಚಿಂತನೆ ಮಾಡದೆ ಇಡೀ ಸಮಾಜವೆ ನಮ್ಮ ಕುಟುಂಬ ಎಂದು ಭಾವಿಸಿ ರಾತ್ರಿ ಹಗಲು ಎನ್ನದೆ ಜನರ ಒಳಿತಿಗಾಗಿ ಕಾರ್ಯನಿರ್ವಹಿಸಿದವರನ್ನು ಗೌರವಿಸುವುದು ಜವಾಬ್ದಾರಿ ,ಜನತೆ ಇವರನ್ನು ಗೌರವಿಸಬೇಕೆ ಹೊರತು ಯಾವುದೇ ರೀತಿಯಲ್ಲಿ ಅಗೌರವ ತೋರಬಾರದು ಎಂದರು.
ಪಡುಬಿದ್ರಿ ಎಸ್ ಐ ಸುಬ್ಬಣ್ಣ ಮಾತಾಡಿ” ಸಾರ್ವಜನಿಕರ ಸಹಕಾರವೇ ನಮಗೆ ಸನ್ಮಾನ ಇದುವರೆಗೆ ಯಾವುದೇ ರೀತಿಯ ಕೊರೋನಾ ವಿಚಾರವಾಗಿ ಪಡುಬಿದ್ರಿ ಠಾಣ ವ್ಯಾಪ್ತಿಯಲ್ಲಿ ಯಾವುದೇ ಅಹಿತರ ಘಟನೆ ನಡೆದಿಲ್ಲ ಇದು ಅತ್ಯಂತ ತೃಪ್ತಿ ಮುಂದಿನ ದಿನವೂ ಸಾರ್ವಜನಿಕ ಸಹಕಾರ ಅಗತ್ಯ ಎಂದರು.”
ವೈದ್ಯಧಿಕಾರಿ ಡಾ. ಬಿ ಬಿ ರಾವ್ ಮಾತಾಡಿ ” ಮುಂದಿನ ಚಾಲೆಂಜಿಗ್ ದಿನಗಳು,ವಿದೇಶದಿಂದ ಹೊರ ರಾಜ್ಯದಿಂದ ಬರುವ ನಮ್ಮೂರಿನ ಜನತೆಯ ರಕ್ಷಣೆ ಅಗತ್ಯವಾಗಿದೆ ,ಊರಿನ ಜನತೆ ಯಾವುದೇ ಭಯ ಪಡುವ ಅಗತ್ಯ ಇಲ್ಲ ಹೊರಗಿನಿಂದ ಬರುವವರಿಗೆ ಕಡ್ಡಾಯ ಕ್ವಾರಂಟೇನ್ ಮಾಡಲಾಗುತ್ತೆ ಮತ್ತು ಎಲ್ಲರೂ ನಮ್ಮೊಂದಿಗೆ ಸಹಕರಿಸಿ ಎಂದರು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್, ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ, ಗ್ರಾಮಪಂಚಾಯತ್ ಅಧ್ಯಕ್ಷ ಶ್ರೀ ದಮಯಂತಿ ಅಮೀನ್, ವೈ ಸುಕುಮಾರ್, ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ,ಕೋಶಾಧಿಕಾರಿ ರವಿ ಶೆಟ್ಟಿ,ಕಾರ್ಯಕ್ರಮದ ಆಯೋಜಕ ಪ್ರಕಾಶ್ ಶೆಟ್ಟಿ ಸೇರಿದಂತೆ ಪಡುಬಿದ್ರಿ ಬಂಟರ ಸಂಘದ ಮುಖಂಡರು ಉಪಸ್ಥಿತರಿದ್ದರು
ವರದಿ: ಪುರುಷೋತ್ತಮ ಸಾಲಿಯಾನ್, ವಿಶ್ವನ್ಯೂಸ್24 9343846360
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…