ಪಡುಬಿದ್ರಿ: ಕನ್ನಡದ ಬಿಗ್ ಬಾಸ್ ಸೀಸನ್ 12 ರಲ್ಲಿ ರನ್ನರ್ ಅಪ್ ಆದ ಬಳಿಕ ಉಡುಪಿಗೆ ಆಗಮಿಸಿದ ರಕ್ಷಿತಾ ಗೆ ಭರ್ಜರಿಯಾದ ಸ್ವಾಗತ ಸಿಕ್ಕಿದೆ.
ಹೆಜಮಾಡಿಯ ಟೋಲ್ ಗೇಟ್ ಪರಿಸರಕ್ಕೆ ರಕ್ಷಿತಾ ಆಗಮಿಸಿದಾಗ ಸೇರಿದ್ದ ಬೃಹತ್ ಸಂಖ್ಯೆಯ ಅಭಿಮಾನಿಗಳು ಹೂಮಾಲೆಗಳ ಗೌರವದೊಂದಿಗೆ ಆಕೆಯನ್ನು ಸ್ವಾಗತಿಸಿದರು. ಬಳಿಕ ಆಕೆಯನ್ನು ತೆರೆದ ಜೀಪಿನಲ್ಲಿ ಪಡುಬಿದ್ರಿಗೆ ಬೃಹತ್ ವಾಹನ ಜಾಥಾ, ಚೆಂಡೆ, ವಾದ್ಯಗಳ ಸಡಗರದೊಂದಿಗೆ ಕರೆತರಲಾಯಿತು.
ರಕ್ಷಿತಾ ಶೆಟ್ಟಿಯವರಿಗೆ ಜಾಥಾದಲ್ಲಿ ಮೀನುಗಾರ ಮಹಿಳೆಯೋರ್ವರು ಬಂಗುಡೆ ಮೀನು ನೀಡುವ ಮೂಲಕ ಸ್ವಾಗತಿಸಿದರು. ರಕ್ಷಿತಾ ಮತ್ತೆ ಪಡುಬಿದ್ರಿ ಬೇಂಗ್ರೆಯ ತನ್ನ ಅಜ್ಜಿ ಮನೆ ಬಳಿಗೆ ತೆರಳಿದಳು. ಅಲ್ಲಿ ಬೇಂಗ್ರೆ ನಾಗರಿಕರು ಆಯೋಜಿಸಿದ್ದ ಹುಟ್ಟೂರ ಸಮ್ಮಾನದಲ್ಲಿ ರಕ್ಷಿತಾಗೆ ಬೂತಾಯಿ ರಕ್ಷಿತಾ ಎಂಬ ಬಿರುದನ್ನಿತ್ತು ಸಮ್ಮಾನಿಸಲಾಯಿತು.
ಬೇಂಗ್ರೆ ಸದಾನಂದ ಶೆಟ್ಟಿ ಬಟಾರ ಮನೆಯ ರಕ್ಷಿತಾ ತಂದೆ ರವಿ ಶೆಟ್ಟಿ, ತಾಯಿ ಹರಿಣಿ ಶೆಟ್ಟಿ, ಪಡುಬಿದ್ರಿ ಬೇಂಗ್ರೆ ಅಭಿಮಾನಿ ಬಳಗದ ನಾಗೇಶ್, ಜಯ ಸಾಲ್ಯಾನ್, ವಿಶ್ವಜಿತ್ ರಾವ್, ಅರುಣ್ ಶೆಟ್ಟಿ, ಪ್ರಮುಖರಾದ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ನವೀನ್ ಚಂದ್ರ ಜೆ. ಶೆಟ್ಟಿ, ಶರತ್ ಶೆಟ್ಟಿ, ರವಿ ಎಚ್. ಕುಂದರ್ ಮತ್ತಿತರಿದ್ದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…