ಪಡುಬಿದ್ರಿ: ಕಟಪಾಡಿಯ ಇಚ್ಛಿತ್ ಶೆಟ್ಟಿ (24) ಅವರ ಮೋಟಾರು ಬೈಕನ್ನು ಪಲಿಮಾರು ಪೇಟೆಯಲ್ಲಿ ನ. 22ರಂದು ತಡರಾತ್ರಿ ತಡೆದು ನಿಲ್ಲಿಸಿದ್ದ ಮಹೇಶ ಹಾಗೂ ಇನ್ನಿಬ್ಬರು ಆರೋಪಿಗಳು ಇಚ್ಛಿತ್ ಅವರ ಮೊಬೈಲ್ ಹಾಗೂ ಚಿನ್ನದ ಸರವನ್ನು ಕಸಿಯಲು ಯತ್ನ ನಡೆಸಿದ್ದಾರೆ.
ಮಂಗಳೂರಿಗೆ ಕಾರ್ಯಕ್ರಮವೊಂದರ ನಿಮಿತ್ತ ತೆರಳಿದ್ದ ಇಚ್ಛಿತ್ ಅವರು ತಮ್ಮ ಗೆಳೆಯ ಸಂಕೇತ್‌ನನ್ನು ಅವರ ಊರು ಬಳ್ಕುಂಜೆಯಲ್ಲಿ ಇಳಿಸಿ ಬೈಕಿನಲ್ಲಿ ಕಟಪಾಡಿಗೆ ಮರಳುತ್ತಿದ್ದರು. ರಾತ್ರಿ 11.30ರ ವೇಳೆಗೆ ಪಲಿಮಾರು ಜಂಕ್ಷನ್ ತಲುಪಿದಾಗ ಆರೋಪಿಗಳು ಕೈ ಅಡ್ಡ ಹಿಡಿದು ಬೈಕನ್ನು ನಿಲ್ಲಿಸಿದ್ದಾರೆ. ಬೈಕ್ ಕೀ ತೆಗೆದ ಮಹೇಶ ರಸ್ತೆ ಬದಿಗೆ ಬಿಸಾಡಿದ್ದುದನ್ನು ಪ್ರಶ್ನಿಸಿದಾಗ ಇಚ್ಛಿತ್ ಮೇಲೆ ಕೈಯಿಂದ ಹಾಗೂ ಆತನ ಹೆಲ್ಮೆಟ್ ಮೂಲಕ ಹೊಡೆದು ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ತುಳಿದಿದ್ದಾರೆ.
ಇಚ್ಛಿತ್ ತನ್ನ ಅಕ್ಕನಿಗೆ ವೀಡಿಯೋ ಕಾಲ್ ಮಾಡುತ್ತಿದ್ದಾಗ ಆರೋಪಿಗಳು ಮೊಬೈಲ್ ಕಿತ್ತುಕೊಂಡು ನೆಲಕ್ಕೆಸೆದಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇಚ್ಛಿತ್ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಕಸಿದಿದ್ದಾರೆ. ಅದು ತುಂಡಾಗಿ ರಸ್ತೆಗೆ ಬಿದ್ದಾಗ ಇಚ್ಛಿತ್ ಅದನ್ನು ಎತ್ತಿಕೊಂಡಿದ್ದಾರೆ. ಬಳಿಕ ಆರೋಪಿಗಳು ಇಚ್ಛಿತ್‌ನನ್ನು ತಮ್ಮ ಕಾರಿಗೆ ಹಾಕಿಕೊಳ್ಳಲು ಯತ್ನವನ್ನೂ ನಡೆಸಿದ್ದಾರೆ. ಆ ವೇಳೆಗೆ ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಬಂದಾಗಿ ಆರೋಪಿಗಳು ಕಾರು ಹತ್ತಿ ಪರಾರಿಯಾಗಿದ್ದರು. ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…