Featured

ಪಡುಬಿದ್ರಿ: ಬ್ಯಾಂಕು, ಸೊಸೈಟಿಗಳಲ್ಲಿ ನಕಲಿ ಹಾಲ್‌ಮಾರ್ಕ್ ಹಾಕಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ವಂಚನೆ ಪ್ರಕರಣ ;  ನಾಲ್ವರ ಬಂಧನ – Vishwanews24

ಪಡುಬಿದ್ರಿ: ಬ್ಯಾಂಕು, ಸೊಸೈಟಿಗಳಲ್ಲಿ ನಕಲಿ ಹಾಲ್‌ಮಾರ್ಕ್ ಹಾಕಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ವಂಚನೆ ;  ನಾಲ್ವರ ಬಂಧನ

ಪಡುಬಿದ್ರಿ : ನಕಲಿ ಹಾಲ್ ಮಾರ್ಕ್ ಹಾಕಿ ಚಿನ್ನಾಭರಣಗಳನ್ನು ಬ್ಯಾಂಕು, ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜೀವ್‌ನಿಗೆ ಸಹಕರಿಸಿದ ಆರೋಪಿಗಳಾದ ಕುಮುಟಾದ ನಿತಿಲ್ ಭಾಸ್ಕರ್ ಶೇಟ್(35), ಸಂಜಯ್ ಶೇಟ್(42) ಮತ್ತು ಸಂತೋಷ್ ಶೇಟ್(39) ಹಾಗೂ ಬೆಳಗಾವಿಯ ಕೈಲಾಸ್ ಗೋರಾಡ(26) ಎಂಬವರನ್ನು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಹಾಗೂ ಸಿಬಂದಿಗಳ ತಂಡ ಬಂಧಿಸಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹಾಗೂ ಆರೋಪಿಗಳಿಂದ ನಕಲಿ 916 ಹಾಲ್‌ಮಾರ್ಕ್ ಸೀಲ್ ಹಾಕಲು ಬಳಸಲಾಗುತ್ತಿದ್ದ ಸುಮಾರು 3.5 ಲಕ್ಷ ರೂ. ಮೌಲ್ಯದ ಮೆಷಿನ್ ಕಂಪ್ಯೂಟರ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ರಾಜೀವ್ ಚಲನಚಿತ್ರ ಕತೆಯಲ್ಲಿದ್ದಂತೆ 30 ಗ್ರಾಂ ಗೋಲ್ಡ್ ಬಳಸಿ 20 ಗ್ರಾಂ ಚಿನ್ನಾಭರಣದೊಂದಿಗೆ ಗಲ್ಫ್ ರಾಷ್ಟ್ರಕ್ಕೆ ಹೋಗುವ ಮತ್ತು ಅಲ್ಲಿಂದ ವಾಪಾಸಾಗುವ ವೇಳೆ 20 ಗ್ರಾಂ ಶುದ್ಧ ಚಿನ್ನದಾಭರಣವನ್ನೇ ಹಾಕಿಕೊಂಡು ಬರುವ ತನ್ನ ಪ್ಲಾನ್‌ಗೆ ಸಹಕರಿಸಲು ಪ್ರಕರಣದ ಇತರ ಆರೋಪಿ ಗೆಳೆಯ ನಿತಿಲ್ ಭಾಸ್ಕರ್ ಶೇಟ್‌ನನ್ನು ಬಳಸಿಕೊಂಡಿದ್ದ.

ಕುಮುಟಾದ ಇನ್ನಿಬ್ಬರು ಆರೋಪಿಗಳಿಂದ ನಕಲಿ ಚಿನ್ನದ ಆಭರಣಗಳನ್ನು ತಯಾರಿಸಿಕೊಂಡು ಬೆಳಗಾವಿಯಲ್ಲಿ ನಕಲಿ ಹಾಲ್‌ಮಾರ್ಕ್ ಮೊಹರನ್ನು ಹಾಕಲಾಗುತ್ತಿತ್ತು. ಆದರೆ ಆರೋಪಿ ರಾಜೀವ್ ತನ್ನ ಖತರ್‌ನಾಕ್ ಪ್ಲಾನನ್ನು ಬದಲಾಯಿಸಿ, ಸ್ಥಳೀಯವಾಗಿ ವಿತ್ತೀಯ ಸಂಸ್ಥೆಗಳಿಗೇ ವಂಚಿಸುವ ಪ್ಲಾನ್ ಮಾಡಿದ್ದ.

ಆರೋಪಿಗಳಾದ ಕುಮುಟಾದ ವ್ಯಕ್ತಿಗಳಿಬ್ಬರು 30 ಗ್ರಾಂ ಚಿನ್ನಕ್ಕಾಗಿ ಬೇಕಾಗಿರುವ ಹಣವನ್ನು ಮುಂಗಡ ಪಡೆದು ಒಳಗೆ ಬೆಳ್ಳಿ, ತಾಮ್ರದ್ದಾಗಿರುವ ಆಭರಣಗಳಿಗೆ 30ಗ್ರಾಂ ಚಿನ್ನವನ್ನು ಲೇಪಿಸಿ ಬೆಳಗಾವಿಯಲ್ಲಿ ನಕಲಿ 916 ಹಾಲ್‌ಮಾರ್ಕ್ ಕೂಡಾ ಮುದ್ರಿಸಿ ಅಸಲಿ ಚಿನ್ನದಂತೆ ಮಿಂಚುವ 40 ನಕಲಿ ಚಿನ್ನದ ಬಳೆಗಳನ್ನು ತಯಾರಿಸಿ ಕೊಟ್ಟಿದ್ದರು.

ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವ ಯಾವುದೇ ವಿಧಾನಗಳಲ್ಲೂ ನಕಲಿ ಚಿನ್ನವೆಂಬುದನ್ನೇ ಪತ್ತೆಹಚ್ಚಲಾಗುತ್ತಿರಲಿಲ್ಲ.92 ಶೇಕಡಾ ಚಿನ್ನದಾಭರಣಗಳಂತೆಯೇ ಸಾಚಾ ಚಿನ್ನ ಇದೆಂದು ನಂಬಿದ ಬ್ಯಾಂಕು, ಸೊಸೈಟಿಗಳು ಚಿನ್ನಭರಣ ಈಡಿನ ಸಾಲವನ್ನಿಟ್ಟು ಮರಳಿ ಬಾರದೇ ಇದ್ದಾಗ ಏಲಂ ಪ್ರಕ್ರಿಯೆ ನಡೆಸುತ್ತಿದ್ದರು.

ಕೇವಲ ಉಡುಪಿಯ ಬಿಡ್ಡುದಾರರೊಬ್ಬರು ಇದನ್ನು ಕತ್ತರಿಸಿ ಪರಿಶೀಲಿಸಿದಾಗ ಆರೋಪಿ ರಾಜೀವ್ ಮತ್ತಾತನ ಪತ್ನಿಯ ಚಿನ್ನಾಭರಣ ಸಾಲದ ಇಡಿಯ ಪ್ರಕರಣವು ಹೊರಬಂದಿತ್ತು. ಪಡುಬಿದ್ರಿಯಲ್ಲಿನ ಇಂಡಸ್ಟ್ರಿಯಲ್ ಬ್ಯಾಂಕ್‌ನ ಪಡುಬಿದ್ರಿ ಶಾಖೆಯಲ್ಲಿ 2022 ಸೆ. 1 ರಿಂದ ಫೆ. 26 ,2024 ರವರೆಗೆ ಈ ದಂಪತಿ 180 ಗ್ರಾಂ ನಕಲಿ ಚಿನ್ನವನ್ನಿಟ್ಟು 8.08 ಲಕ್ಷಗಳನ್ನು ಪಡೆದುಕೊಂಡಿದ್ದರು.

ಸಹಕಾರಿ ಸಂಘವೊಂದರ ಸಿಟಿ ಶಾಖೆಯಿಂದ ಆರೋಪಿಗಳು ಇದೇ ಸುಮಾರು 2 ವರ್ಷಗಳ ಅವಧಿಯಲ್ಲಿ 231 ಗ್ರಾಂ ಹಾಗೂ 188 ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು 19 ಲಕ್ಷ ರೂ. ಗಳನ್ನು ಸಾಲವಾಗಿ ಪಡೆದಿದ್ದರು. ಉಚ್ಚಿಲದ ಸಹಕಾರಿ ಬ್ಯಾಂಕ್ ಶಾಖೆಯೊಂದರಿಂದ ಮಾರ್ಚ್ 2023 ರಿಂದ ಫೆ. 26, 2024 ರ ಅವಧಿಯಲ್ಲಿ 72 ಗ್ರಾಂ ಚಿನ್ನ ಅಡವಿಟ್ಟು 2.86 ಲಕ್ಷ ರೂ. ಗಳ ಸಹಿತ ಒಟ್ಟು 29.94 ಲಕ್ಷ ರೂ. ಗಳನ್ನು ರಾಜೀವ್ ದಂಪತಿ ಪಡೆದಿದ್ದರು.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೈಗೆತ್ತಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್, ಉಪಅಧೀಕ್ಷಕ ಸಿದ್ಧಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಅವರ ನಿರ್ದೇಶನದಂತೆ ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಎಂ. ಎಸ್. ಹಾಗೂ ಅವರ ಸಿಬಂದಿಗಳು ಈ ಪ್ರಕರಣವನ್ನು ಬೇಧಿಸಿದ್ದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

2 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

3 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

3 hours ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

4 hours ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

4 hours ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago