Featured

ಪಡುಬಿದ್ರಿ: ಬ್ಲೂಫ್ಲ್ಯಾಗ್‌ ಬೀಚ್‌ ನಿರ್ವಹಣೆಯಲ್ಲಿ ಅಕ್ರಮ; ನಕಲಿ ರಶೀದಿ ಮುದ್ರಿಸಿ ಬೋಟಿಂಗ್‌ಗೆ ಹಣ ವಸೂಲಿ : ಡಿಸಿಗೆ ದೂರು – Vishwanews24

ಪಡುಬಿದ್ರಿ: ಬ್ಲೂಫ್ಲ್ಯಾಗ್‌ ಬೀಚ್‌ ನಿರ್ವಹಣೆಯಲ್ಲಿ ಅಕ್ರಮ; ನಕಲಿ ರಶೀದಿ ಮುದ್ರಿಸಿ ಬೋಟಿಂಗ್‌ಗೆ ಹಣ ವಸೂಲಿ : ಡಿಸಿಗೆ ದೂರು

ಪಡುಬಿದ್ರಿ: ಪಡುಬಿದ್ರಿಯಲ್ಲಿರುವ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂಫ್ಲ್ಯಾಗ್‌ ಬೀಚ್‌ನ ನಿರ್ವಹಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಬ್ಲೂಫ್ಲ್ಯಾಗ್‌ ಬೀಚ್‌ನ ಹಲವು ಸಿಬಂದಿ ಗುರುವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ.

ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಿಬಂದಿ ದೂರು ಸಲ್ಲಿಸಿದರು. ಕಳೆದ 15 ತಿಂಗಳುಗಳಿಂದ ಕೆಲಸದ ವಾತಾವರಣ ಸರಿಯಿಲ್ಲ. ನಕಲಿ ರಶೀದಿಗಳನ್ನು ಮುದ್ರಿಸಿ ಬೋಟಿಂಗ್‌ಗೆ ಹಣ ವಸೂಲಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ವಸೂಲಿ ಮಾಡಿದ ಹಣವು ಪ್ರವಾಸೋದ್ಯಮ ಇಲಾಖೆ ಖಾತೆಗೆ ಬದಲಾಗಿ ವ್ಯಕ್ತಿಯೋರ್ವರ ಖಾಸಗಿ ಖಾತೆಗೆ ಜಮೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಿಗೆ ಈ ಹಿಂದೆ ದೂರು ಸಲ್ಲಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗದ ಕಾರಣ ಮತ್ತೊಮ್ಮೆ ದೂರು ನೀಡುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರು ಪತ್ರಕ್ಕೆ 22 ಮಂದಿ ಗುತ್ತಿಗೆ ಉದ್ಯೋಗಿಗಳು ಸಹಿ ಮಾಡಿದ್ದಾರೆ.

ಉಡುಪಿ : ಮೆಸ್ಕಾಂನ ನಿವೃತ್ತ ಅಧಿಕಾರಿ ; ಕೃಷಿಕ ಸಗ್ರಿ ಮಧುಸೂದನ ತೆಂಕಿಲ್ಲಾಯ ನಿಧನ – Vishwanews24

ಬ್ಲೂಫ್ಲ್ಯಾಗ್‌ ಬೀಚ್‌ನ ಕರ್ತವ್ಯದಲ್ಲಿ ಒಟ್ಟು 31 ಉದ್ಯೋಗಿಗಳಾಗಿದ್ದೇವೆ. ಸೂಪರ್‌ವೈಸರ್‌ಗಳಿಬ್ಬರು ನಮಗೆ ಜೀವ ಭಯವುಂಟು ಮಾಡುತ್ತಿದ್ದು, ನಮಗೆ ನ್ಯಾಯ ಸಿಗಬೇಕೆಂದು ಅವರು ಆಗ್ರಹಿಸಿದ್ದಾರೆ. ಇನ್ನು ಸಿಬಂದಿಯ ಆರೋಪವನ್ನು ತಳ್ಳಿ ಹಾಕಿರುವ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ (ಪ್ರಭಾರ) ಕ್ಲಿಫರ್ಡ್‌ ಲೋಬೋ, ಬೀಚ್‌ನ ಕೆಲಸಗಾರರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಮೂಡಿರುವುದೇ ಈ ಆರೋಪಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಸ್ಥಳೀಯರಿಗೆ ಉದ್ಯೋಗ ಒದಗಿಸಲಾಗಿದ್ದು, ಮಾಸಿಕ ವೇತನ ಕೂಡಾ ಸಕಾಲದಲ್ಲೇ ಪಾವತಿಯಾಗುತ್ತಿದೆ. ಬೋಟಿಂಗ್, ಪ್ರವೇಶ ಶುಲ್ಕ ಮುಂತಾದ ಆದಾಯಗಳಿಗೆ ರಶೀದಿ ವ್ಯವಸ್ಥೆಯೂ ಇದ್ದು, ಪ್ರತಿ ದಿನದ ಆದಾಯ ಮರುದಿನ ಇಲಾಖೆಯ ಖಾತೆಗೆ ಬರುತ್ತದೆ. ಆದಾಗ್ಯೂ ಅಸಮಾಧಾನಗೊಂಡಿರುವ ಉದ್ಯೋಗಿಗಳು ದಾಖಲೆ ನೀಡಿದರೆ ಪರಿಶೀಲನೆ ನಡೆಸಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಮಂಗಳೂರು: ಬಜ್ಪೆಯ ದಸರಾ ಶೋಭಾಯಾತ್ರೆಯಲ್ಲಿ ಆಕರ್ಷಣೆ ಪಡೆದ ಯೋಗಿ ಆದಿತ್ಯನಾಥ್ ಟ್ಯಾಬ್ಲೊ – Vishwanews24

Vishwa News 24

Recent Posts

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

10 hours ago

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO – vishwanews24

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…

10 hours ago

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ – vishwanews24

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ  ಬೆಂಗಳೂರು: ಕರ್ನಾಟಕ ಸರ್ಕಾರದ…

10 hours ago

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ – vishwanews24

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…

11 hours ago

ಮಂಗಳೂರು:ಕೋರಿಯರ್ ಮೂಲಕ ಎಂಡಿಎಂಎ ಸಾಗಾಟದ ಜಾಲ ಪತ್ತೆ: ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ – vishwanews24

ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…

11 hours ago

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ – vishwanews24

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…

11 hours ago