ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿರ್ದೇಶಕ ಮಂಡಳಿಗೆ ಅವಿರೋಧ ಆಯ್ಕೆ.
ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿಯಮಿತ ಪಡುಬಿದ್ರಿ ಇದರ ನಿರ್ದೇಶಕ ಮಂಡಳಿಗೆ ಚುನಾವಣಾ ದಿನಾಂಕದಿಂದ ಮುಂದಿನ ಐದು ವರ್ಷಗಳ ಅವಧಿಯ ಚುನಾವಣೆಗೆ ಸಂಬಂಧಿಸಿದಂತೆ ನಾಮ ಪತ್ರ ಸಲ್ಲಿಸಿರುವ ಉಮೇದ್ವಾರರ ನಾಮ ಪತ್ರಗಳನ್ನು ಪರಿಶೀಲಿಸಿ ಸಂಘದ ಉಪವಿಧಿಯ ಪ್ರಕಾರ ಆಯ್ಕೆಯಾಗಬೇಕಾದ ಸ್ಥಾನಗಳ ಸಂಖ್ಯೆಗೆ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯು ಸರಿಸಮಾನವಾಗಿರುವುದರಿಂದ ಹದಿಮೂರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವೈ.ಸುಧಿರ್ ಕುಮಾರ್ ಪಡುಬಿದ್ರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮುಂದಿನ ಐದು ವರ್ಷದಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು ಮತ್ತು ಪಲಿಮಾರು ಹೆಜಮಾಡಿ ಶಾಖೆಯನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ಹೆಜಮಾಡಿಯ 15 ಸೆಂಟ್ಸ್ ಜಾಗದಲ್ಲಿ ದಾಸ್ತಾನು ಕೊಠಡಿ ನಿರ್ಮಾಣ ಮಾಡುವ ಯೋಜನೆ ಇದೆ ಎಂದರು.
ಸುಮಾರು ಐದು ಲಕ್ಷ ವೆಚ್ಚದಲ್ಲಿ ಪಡುಬಿದ್ರಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಶೀತಲೀಕರಣ ಘಟಕಕ್ಕೆ ಸಹಕಾರಿಸಲಾಗುವುದು ಎಂದರು.
ಸಾಮಾನ್ಯ ಕ್ಷೇತ್ರದಲ್ಲಿ ಶ್ರೀ ಸುಧಿರ್ ಕುಮಾರ್,ಶ್ರೀ ಗುರುರಾಜ್ ಪೂಜಾರಿ,ಶ್ರೀ ರಸ್ರೂಲ್.ವೈ.ಜಿ, ಶಿವರಾಮ್ ಎನ್ ಶೆಟ್ಟಿ,ವಾಸುದೇವ, ಮಾಧವ ಆಚಾರ್ಯ,ರಾಜಾರಾಮ್ ರಾವ್, ಮಹಿಳಾ ಮೀಸಲಾತಿಯಲ್ಲಿ ಶ್ರೀಮತಿ ಸುಚರಿತ,ಶ್ರೀಮತಿ ಕುಸುಮಾ ಎಮ್ ಕರ್ಕೇರಾ, ಹಿಂದುಳಿದ ವರ್ಗ (ಎ)ಮೀಸಲು,
ಶ್ರೀ ಗಿರೀಶ್ ಫಲಿಮಾರ್,ಪ್ರವರ್ಗ ಬಿ ಸ್ಟೇನಿ ಕ್ವಾಡ್ರಸ್,ಪ.ಜಾತಿ ಮೀಸಲು ಯಶವಂತ, ಪ.ಪಂಗಡ ಮೀಸಲು ಶ್ರೀಮತಿ ಕಾಂಚಾನ ಆಯ್ಕೆಯಾದ ಅಭ್ಯರ್ಥಿಗಳು.
ಪತ್ರಿಕಾಗೋಷ್ಠಿಯಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಇದ್ದರು.
ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ಉಡುಪಿ: ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್…
ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್.. ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಕ್ರಮಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ…
ಟ್ರ್ಯಾಕ್ಟರ್ - ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ…
ಡಿಕೆಶಿ ಮುಂದಿನ ಸಿಎಂ ಬ್ಯಾನರ್ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ಉಡುಪಿ: ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ.…
ನಾನು ಮತ್ತೆ ಹೊಸದಾಗಿ ಪಕ್ಷ ಕಟ್ಟುತ್ತೇನೆ ; ಪಕ್ಷ ಬಿಟ್ಟು ಹೋಗುವವರು ಹೋಗಲಿ : ಮಮತಾ ಬ್ಯಾನರ್ಜಿ ಕೋಲ್ಕತ್ತಾ: ಇತರ…
ಉಡುಪಿ : ಮಲಬಾರ್ ಗೋಲ್ದ್ ನಲ್ಲಿ ಬ್ರಾಂಡ್ ವಾಚ್‌ಗಳ ವಿಶೇಷ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ ಉಡುಪಿ: ಮಲಬಾರ್ ಗೋಲ್ಡ್ ಅಂಡ್…