Featured

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಪಲಿಮಾರು ಶಾಖೆಯ ನೂತನ ಕಟ್ಟಡ “ಸಹಕಾರ ಸಂಕೀರ್ಣ” ಉದ್ಘಾಟನೆ : vishwanews24

ಪಡುಬಿದ್ರಿ ಸಹಕಾರಿ ವ್ಯ.ಸೊಸೈಟಿ ,ಪಲಿಮಾರು ಶಾಖೆಯ ನೂತನ ಕಟ್ಟಡ “ಸಹಕಾರ ಸಂಕೀರ್ಣ” ಉದ್ಘಾಟನೆ ..

ಸೇವೆಯಲ್ಲಿ ವಾಣಿಜ್ಯ ಬ್ಯಾಂಕಿಗೆ ಸೆಡ್ಡು ಹೊಡೆದು ಸಹಕಾರಿ ಸೊಸೈಟಿಗಳು ವಿಕಸನಗೊಳ್ಳುತ್ತಿದೆ : ಡಾ.ಎಂ.ಎನ್ ರಾಜೇಂದ್ರ ಕುಮಾರ್ – vishwanews24

ಕಾಪು: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿಯಮಿತ ಇದರ ಪಲಿಮಾರು ಶಾಖೆಯಯ ನವೀಕೃತ ಹವಾನಿಯಂತ್ರಿತ “ಸಹಕಾರ ಸಂಕೀರ್ಣ” ನೂತನ ಕಟ್ಟಡ ಉದ್ಘಾಟನೆ ಸೋಮವಾರ ನಡೆಯಿತು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ ಎಂ‌ಎನ್ ರಾಜೇಂದ್ರ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ,ಸನ್ಮಾನ ಸ್ವೀಕರಿಸಿ ಮಾತನಾಡಿ “ಸಹಕಾರ ಬ್ಯಾಂಕ್ ಜನರ ಬ್ಯಾಂಕ್ ಹಾಗಾಗಿ ಅವಿಭಜಿತ ಜಿಲ್ಲೆಯಲ್ಲಿ ತನ್ನ ಎಲ್ಲಾ ಐದು ಶಾಖೆಯಲ್ಲಿ ಹವಾನಿಯಂತ್ರಿತ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ,ಕೇವಲ ಸಾಲ ಠೇವಣಿಗಳ ಹಿಂದೆ ಓಡದೆ ಸಾಮಾಜಿಕ ಚಟುವಟಿಕೆಗಳನ್ನು ಕೂಡ ಕಾನೂನಿನ ಚೌಕಟ್ಟಿನೊಳಗೆ ನಡೆಸುತ್ತಾ ಬಂದಿದೆ,ವಾಣಿಜ್ಯ ಬ್ಯಾಂಕಿಗೆ ಸೆಡ್ಡು ಹೊಡೆದು ಸೇವೆ ಕೊಡುತ್ತಿರುವ ಸಹಕಾರಿ ಸೊಸೈಟಿಗಳ ಕಡೆ ಜನರ ಆಗಮನವಾಗುತ್ತಿದೆ ಇದರಿಂದಾಗಿ ವಾಣಿಜ್ಯ ಬ್ಯಾಂಕ್ ಸಂಕುಚಿತಗೊಂಡರೆ ಸಹಕಾರ ಸೊಸೈಟಿಗಳು ವಿಕಸನಗೊಳ್ಳುತ್ತಿದೆ ಎಂದರು.

ಸೊಸೈಟಿಯ ಅಧ್ಯಕ್ಷ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿ” ಕಳೆದ 67 ವರ್ಷಗಳಿಂದ ಸಹಕಾರಿ ಕ್ಷೇತ್ರ ಮೂಲಕ ತನ್ನ ಕಾರ್ಯವ್ಯಾಪ್ತಿಯ ಸದಸ್ಯರಿಗೆ ,ಗ್ರಾಹಕರಿಗೆ ವಿವಿಧ ಸೇವೆಗಳನ್ನು ಸಲ್ಲಿಸುತ್ತಾ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.ಕೇವಲ ನಾಲ್ಕು ಕೋಟಿ ರೂಪಾಯಿ ಠೇವಣಾತಿರುವ ಸಮಯದಲ್ಲಿ ಅಧಿಕಾರ ಪಡೆದುಕೊಂಡೆ ತದನಂತರ ಹಲವಾರು ಅಡೆತಡೆಗಳ ನಡುವೆಯೂ ಇವತ್ತು ನೂರ ಮೂವತ್ತು ಕೋಟಿ ರೂಪಾಯಿ ಠೇವಣಿ, ತೊಂಭತ್ತು ಕೋಟಿ ರೂಪಾಯಿ ಸಾಲ ನೀಡದ್ದೇವೆ ವಿಶೇಷವಾಗಿ ಇಡೀ ಉಡುಪಿ ಜಿಲ್ಲೆಯಲ್ಲಿ ಚಿನ್ನ ಆಭರಣ ಸಾಲ ನೀಡುವಲ್ಲಿ ಪ್ರಥಮ ಸ್ಥಾನದಲ್ಲಿದೆ ಮಾತ್ರವಲ್ಲದೆ ಸೊಸೈಟಿಯ ಸದಸ್ಯರಿಗೆ ಶೇಕಡಾ ಇಪ್ಪತೈದು ಡಿವಿಡೆಂಟ್ ನೀಡುವ ಮೂಲಕ ಜನಪರ ಸೇವೆ ನೀಡುತ್ತಿದೆ,ಸೊಸೈಟಿಯ ಎಲ್ಲಾ ಶಾಖೆಯಲ್ಲಿ ಭದ್ರತಾ ಸೇಫ್ ಲಾಕರ್ ಅಳವಡಿಸಿ ಜನರ ದುಡ್ಡನ್ನು ಅತ್ಯಂತ ಜವಾಬ್ದಾರಿಯಿಂದ ಭದ್ರವಾಗಿರಿಸಲು ಕಾರ್ಯನಿರ್ವಹಿಸುತ್ತಿದೆ ,ಅದರ ಜತೆಗೆ ನಮ್ಮ ಎಲ್ಲಾ ಶಾಖೆಗಳು ಕೂಡ ಸಂಪೂರ್ಣ ಹವಾನಿಯಂತ್ರಿತವಾಗಿದ್ದು ಗ್ರಾಹಕರಿಗೆ ಇನ್ನಷ್ಟು ಸೇವೆ ಸುಲಲಿತವಾಗಲಿದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ,ಅಖಿಲಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ಚಂದ್ರ ಡಿ ಸುವರ್ಣ, ಡಾ .ಬೆಳಪು ದೇವಿಪ್ರಸಾದ್ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ ಸೊಸೈಟಿಯ ಬೆಳವಣಿಗೆಯ ಬಗ್ಗೆ ಶುಭ ನುಡಿಗಳನ್ನಾಡಿದರು.

ಇದೇ ಸಂಧರ್ಭದಲ್ಲಿ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್ ವಿ ,ಭಾರತ ಕಬ್ಬಡಿ ತಂಡದ ಮಾಜಿ ನಾಯಕ ಶೇಖರ್ ಶೆಟ್ಟಿ, ಯುವ ಕೃಷಿಕ ರೋಹಿತ್ ಶೆಟ್ಟಿ, ಸಮಾಜ ಸೇವಕ ಶರಣ್ ಮಟ್ಟು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್,ಸಹಕಾರ ಸಂಘಗಳ ಉಪನಿಬಂಧಕಿ ಶ್ರೀಮತಿ ಲಾವಣ್ಯ ಕೆ ಆರ್,ಸಹಾಯಕ ನಿಬಂಧಕಿ ಶ್ರೀಮತಿ ಸುಕನ್ಯ,ನಿವೃತ್ತ ಪಲಿಮಾರು ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ,ಪಲಿಮಾರು ಮಹಾಲಿಂಗೇಶ್ವರ ದೇಗುಲದ ಅರ್ಚಕ ಶ್ರೀನಿವಾಸ ಉಡುಪ,ಪಲಿಮಾರು ಸೈಂಟ್ ಪಿಯೂಸ್ ಚರ್ಚ್ ನ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೋ,ಮಾಜಿ ತಾ.ಪ ಸದಸ್ಯ ದಿನೇಶ್ ಕೋಟ್ಯಾನ್, ಡಾ ಪ್ರಭಾ ನಂಬಿಯಾರ್,ಹಾಜಿ ಎಂಪಿ ಶೇಖಬ್ಬ,ದಿನೇಶ್ ಪ್ರಭು,ಅಶೋಕ್ ಶೆಟ್ಟಿ, ಪಲಿಮಾರು ಶಾಖಾ ವ್ಯವಸ್ಥಾಪಕಿ ಶೋಭಾ ಎಚ್ ಪುತ್ರನ್, ಮೊದಲಾದವರು ಉಪಸ್ಥಿತರಿದ್ದರು.

ಪ್ರಕಾಶ್ ಶೆಟ್ಟಿ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿ ,ಗುರುರಾಜ್ ಪೂಜಾರಿ ವಂದಿಸಿದರು

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago