ಉಡುಪಿ

ಪಡುಬಿದ್ರಿ ಸಿ.ಎ ಸೊಸೈಟಿಗೆಮತ್ತೊಂದು ಗರಿಮೆ-ನವೀಕೃತ ಹೆಜಮಾಡಿ ಶಾಖೆಯ ಲೋಕಾರ್ಪಣೆ-ಸನ್ಮಾನ-ಸ್ವಚ್ಛತಾ ಪರಿಕರ ವಿತರಣೆ-ಅದೃಷ್ಟವಂತ ಗ್ರಾಹಕರಿಗೆ ೧೦ ಚಿನ್ನದ ನಾಣ್ಯ ವಿತರಣೆ :vishwanews24

ಪಡುಬಿದ್ರಿ ಸಿ.ಎ ಸೊಸೈಟಿಗೆಮತ್ತೊಂದು ಗರಿಮೆ-ನವೀಕೃತ ಹೆಜಮಾಡಿ ಶಾಖೆಯ ಲೋಕಾರ್ಪಣೆ-ಸನ್ಮಾನ-ಸ್ವಚ್ಛತಾ ಪರಿಕರ ವಿತರಣೆ-ಅದೃಷ್ಟವಂತ ಗ್ರಾಹಕರಿಗೆ ೧೦ ಚಿನ್ನದ ನಾಣ್ಯ ವಿತರಣೆ :vishwanews24

ಹೆಜಮಾಡಿ : ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮ ಬ್ಯಾಂಕಿAಗ್ ಸೊಸೈಟಿಯಾಗಿ ಹೆಗ್ಗಳಿಕೆ ಹೊಂದಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನವೀಕರಣಗೊಂಡ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಬ್ಯಾಂಕಿAಗ್ ಕಟ್ಟಡದ ಉದ್ಘಾಟನೆಯನ್ನು ಭಾನುವಾರ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿಗಮದ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಗಮ ಬೆಂಗಳೂರು ಇದರ ನಿರ್ದೇಶಕರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ದೀಪ ಪ್ರಜ್ವಲನೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಇದರ ಅಧ್ಯಕ್ಷರಾದ ನವೀನ್ ಚಂದ್ರ ಡಿ. ಸುವರ್ಣ ಮಾಡಿದರು. ನಾಮ ಫಲಕದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿಗಮ ಬೆಂಗಳೂರು ಇದರ ನಿರ್ದೇಶಕರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಪಡಿತರ ವ್ಯವಸ್ಥೆಯ ಗೋದಾಮನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಭದ್ರತಾ ಕೊಠಡಿಯನ್ನು ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಶ್ಮಿ ಎ. ಮೆಂಡನ್ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಬಂದರಿನ ಮೂಲಕ ಪ್ರಸಿದ್ದಿ ಪಡೆದ ಹೆಜಮಾಡಿಯಲ್ಲಿ ಪ್ರಥಮ ಹವಾನಿಯಂತ್ರಿತ ಕಟ್ಟಡವಾಗಿ ಪಡುಬಿದ್ರಿ ಸಿ.ಎ ಸೊಸೈಟಿಯ ಹೆಜಮಾಡಿ ಶಾಖೆ ಉದ್ಘಾಟನೆಯಾಗಿದೆ. ಪಡುಬಿದ್ರಿ ಸಹಕಾರಿ ಸೊಸೈಟಿಯು ಕಲ್ಪವೃಕ್ಷದಂತೆ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ಪಡುಬಿದ್ರಿ ಸಿ.ಎ ಬ್ಯಾಂಕ್ ಲಾಭದಾಯಕವಾಗಿದೆ ಇದರಿಂದಾಗಿ ಶೇ೨೫ ಡಿವಿಡೆಂಡ್ ನೀಡುತ್ತಿದೆ ಗ್ರಾಹಕರು ನಮ್ಮ ದೇವರು ಎಂಬ ಸೇವಾ ಭಾವನೆಯಿಂದ ದುಡಿಯುವ ಸಂಸ್ಥೆಯ ಉದ್ಯೋಗಿಗಳ ಮೂಲಕ ಈ ಸಾಧನೆ ಸಾಧ್ಯವಾಗಿದೆ ಎಂದರು.

ಇAದ್ರಾಳಿ ಜಯಕರ ಶೆಟ್ಟಿ ಮಾತನಾಡಿ ” ದೇಶದಲ್ಲಿಯೆ ಸಹಕಾರಿ ಅತ್ಯಂತ ಪ್ರಭಾವ ಶಾಲಿಯಾಗಿ ಕೆಲಸ ಮಾಡುತ್ತಿದೆ ಮಾತ್ರವಲ್ಲದೆ ತನ್ನದೇ ಸಚಿವಾಲಯವನ್ನು ಹೊಂದಿದೆ ಉಡುಪಿ ಹಾಗೂ ದಕದಲ್ಲಿ ಸಹಕಾರಿಗಳು ಸಮಾಜದೇಳಿಗೆಯ ದೃಷ್ಟಿಯಿಂದ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಆ ಪರಿಣಾಮವಾಗಿ ರಾಜ್ಯ ಮಾತ್ರವಲ್ಲದೆ ದೇಶದಲ್ಲಿಯೂ ಕೂಡ ಈ ಎರಡು ಅವಳಿ ಜಿಲ್ಲೆಗಳು ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯ ಹೆಸರಿನಲ್ಲಿದೆ.
ಇನ್ನೂ ಪಡುಬಿದ್ರಿ ಸುತ್ತಮುತ್ತಲಿನ ಭಾಗದಲ್ಲಿ ಈ ಸೊಸೈಟಿಯ ಮೇಲೆ ಗ್ರಾಹಕರು ವಿಶ್ವಾಸವಿರಿಸಿದ್ದಾರೆ ವಿಶ್ವಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸುಧೀರ್ ಕುಮಾರ್ ನೇತೃತ್ವದಲ್ಲಿ ಈ ಸೊಸೈಟಿಯು ೧೨೫ ಕೋಟಿಯ ಲಾಭದಲ್ಲಿರಲು ಸಾಧ್ಯವಾಗಿದೆಂದರು.

ಸನ್ಮಾನ/ಸ್ವಚ್ಛತಾ ಪರಿಕರ ವಿತರಣೆ : ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ
ಕಾಪು ದಿವಾಕರ ಶೆಟ್ಟಿ, ಶೈಕ್ಷಣಿಕ ಸಾಧಕಿ ಡಾ. ಹರ್ಷಿತ ಎನ್. ಅಂಚನ್, ಕ್ರೀಡಾ ಸಾಧಕ ಧನುಷ್ ಎಸ್. ಸಾಲ್ಯಾನ್‌ರನ್ನು ಸನ್ಮಾನಿಸಲಾಯಿತು. ಸೊಸೈಟಿ ವ್ಯಾಪ್ತಿಯ ಕರಾವಳಿಯನ್ನು ನಿರಂತರವಾಗಿ ಸ್ವಚ್ಛಗೊಳಿಸಿ ಉತ್ತಮ ಸಮಾಜ ಸೇವೆಗೈಯ್ಯುತ್ತಿರುವ ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದ ಮತ್ತು ಪಡುಬಿದ್ರಿ ನಡಿಪಟ್ಟ ಕರಾವಳಿ ಸ್ಟಾರ್ ಸಂಸ್ಥೆಗಳಿಗೆ ಸ್ವಚ್ಚತಾ ಪರಿಕರಗಳನ್ನು ವಿತರಿಸಿದರು. ಈ ಸಂದರ್ಭ ಫೆ. ೫ ರಿಂದ ಮಾರ್ಚ್ ಅಂತ್ಯದವರೆಗೆ ಸೊಸೈಟಿಯಲ್ಲಿ ಠೇವಣಿ ವಿನಿಯೋಗಿಸಿದ ಠೇವಣಿದಾರರಿಗೆ, ಚಿನ್ನಾಭರಣ ಸಾಲ ಪಡೆದ ೧೦ ವಿಜೇತರನ್ನು ಗಣ್ಯರು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಚಿನ್ನದ ನಾಣ್ಯ ಆಕರ್ಷಕ ಬಹುಮಾನ ವಿತರಿಸಿದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭ ನವೀನಚಂದ್ರ ಡಿ ಸುವರ್ಣ, ಬಿ ಜಯಕರ ಶೆಟ್ಟಿ ಇಂದ್ರಾಳಿ, ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಮೋಹನ್ ಸುವರ್ಣ, ಪಾಂಡುರAಗ ಸಿ ಕರ್ಕೇರ, ಪ್ರಾಣೇಶ್ ಹೆಜಮಾಡಿ, ಸುಧಾಕರ ಕರ್ಕೇರ, ವಾಮನ ಕೋಟ್ಯಾನ್, ದಯಾನಂದ ಹೆಜಮಾಡಿ, ಸತೀಶ್ ನಾಯ್, ಸುರೇಶ್ ಶೆಟ್ಟಿ, ಲೋಕೇಶ್ ಕೆ. ಅಮೀನ್, ರಾಜು ಹೆಜಮಾಡಿ, ಮೊಹಮ್ಮದ್ ಇಸ್ಮಾಯಿಲ್, ಎಚ್ ಶೇಷಗಿರಿ, ವಾದಿರಾಜ ಆಚಾರ್ಯ, ಹೆಚ್. ರವಿ ಕುಂದರ್ ಹೆಜಮಾಡಿ, ರಾಲ್ಫ್ ಡಿ’ಕೋಸ್ತ, ಹರೀಶ್ ದೇವಾಡಿಗ, ಜಯಂತ್ ಪುತ್ರನ್, ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ನಿಶ್ಚಿತ ಪಿ.ಎಚ್, ಶಾಖಾ ವ್ಯವಸ್ಥಾಪಕಿ ಶಕುಂತಳ, ನಿರ್ದೇಶಕರುಗಳಾದ ರಸೂಲ್ ವೈಜಿ, ಗಿರೀಶ್ ಪಲಿಮಾರು, ಶಿವರಾಮ ಎನ್. ಶೆಟ್ಟಿ, ರಾಜಾರಾಮ್ ರಾವ್, ವಾಸುದೇವ ದೇವಾಡಿಗ, ಯಶವಂತ್ ಪಿ.ಬಿ, ಮಾಧವ ಆಚಾರ್ಯ, ಸ್ಪ್ಯಾನಿ ಕ್ವಾಡ್ರಸ್, ಸುಚರಿತ ಎಲ್ ಅಮೀನ್, ಕುಸುಮಾ ಎಮ್. ಕರ್ಕೇರ, ಕಾಂಚನ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲ ಗೋಪಾಲ್ ಬಲ್ಲಾಳ್ ಕೆ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಹೆಜಮಾಡಿ ಪೇಟೆಯಿಂದ ಹೆಜಮಾಡಿ ಶಾಖೆಯವರೆಗೆ ಗಣ್ಯರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸತೀಶ್ಚಂದ್ರ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಗುರುರಾಜ್ ಪೂಜಾರಿ ವಂದಿಸಿದರು.

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

8 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

8 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

8 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

9 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

9 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

9 hours ago