ಪಡುಬಿದ್ರಿ : ಕೋರಿಯರ್‌ನಲ್ಲಿ ಡ್ರಗ್ಸ್ ಕಳುಹಿಸಲಾಗುತ್ತಿದೆ ಎಂದು ಹೆದರಿಸಿ ಸೈಬರ್ ಕ್ರೈಮ್ ಅಧಿಕಾರಿಗಳೆಂದ ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡು ಮೂಲದ ಪಡುಬಿದ್ರಿ ನಿವಾಸಿ ಟಿಯಾಗು (32) ಎಂಬವರಿಗೆ ಜ.17ರಂದು ಫೆಡ್‌ಎಕ್ಸ್ ಕೊರಿಯರ್ ಎಂಬ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ವ್ಯಕ್ತಿಯೊಬ್ಬ ಮಾತನಾಡಿದ್ದು, ನೀವು ಮುಂಬೈನಿಂದ ಇರಾನ್‌ಗೆ ಮಾಡಿದ ಕೊರಿಯರ್ ಡೆಲಿವರಿ ಆಗಲಿಲ್ಲ ಎಂದು ತಿಳಿಸಿದ್ದನು. ನಾವು ಯಾವುದೇ ಕೊರಿಯರ್ ಆರ್ಡರ್ ಮಾಡಿಲ್ಲ ಎಂದು ಹೇಳಿದ ಟಿಯಾಗು, ಅದರಲ್ಲಿ ಏನಿದೆ ಎಂದು ವಿಚಾರಿಸಿದರು.
ಆಗ ಆ ವ್ಯಕ್ತಿಯು, ಪಾರ್ಸೆಲ್‌ನಲ್ಲಿ ಅವಧಿ ಮುಗಿದ ಪಾಸ್‌ಪೋರ್ಟ್, ಕ್ರೆಡಿಟ್ ಕಾರ್ಡ್, ಟಾಯ್, ಎಂಬಿಡಿಎ 450ಗ್ರಾಂ ಇದೆ ಎಂದು ಹೇಳಿ, ನಿಮ್ಮ ಐಡಿ ದುರುಪಯೋಗ ಆಗಿದ್ದು, ಪಾರ್ಸೆಲ್‌ನಲ್ಲಿ ಎಂಬಿಡಿಎ ಡ್ರಗ್‌ನ್ನು ಅಕ್ರಮವಾಗಿ ಕಳುಹಿಸಲಾಗುತ್ತಿದೆ ಎಂದು ತಿಳಿಸಿದನು. ನೀವು ಸಿಕ್ಕಿಬಿದ್ದರೆ ನಿಮಗೆ ಜೀವನ ಪರ್ಯಂತ ಕೇಸು ದಾಖಲಾಗುತ್ತದೆ ಎಂದು ಹೇಳಿ, ದೂರು ಕೊಡಲು ಮುಂಬೈ ಸೈಬರ್ ಕ್ರೈಂ ಬ್ರಾಂಚ್ ಗೆ ಕರೆಯನ್ನು ವರ್ಗಾವಣೆ ಮಾಡುತ್ತೇನೆ ಎಂದು ಹೇಳಿದನು.
ಒಂದು ನಿಮಿಷದ ನಂತರ ಇನ್ನೊರ್ವ ವ್ಯಕ್ತಿ ಮಾತನಾಡಿ ನಿಮ್ಮ ಅಕೌಂಟ್ ಚೆಕ್ ಮಾಡಬೇಕಾಗಿದೆ ಎಂದು ಹೇಳಿ ಟಿಯಾಗು ಅವರನ್ನು ನಂಬಿಸಿ, ಟಿಯಾಗು ಅವರ ಐಸಿಐಸಿಐ ಅಪ್ಲಿಕೇಶನ್‌ನಲ್ಲಿರುವ 15,62,921ರೂ. ಮೊತ್ತದ ಪರ್ಸನಲ್ ಲೋನ್‌ಗೆ ಕ್ಲಿಕ್ ಮಾಡಿಸಿದನು. ಆಗ ಬಂದ ಒಟಿಪಿಯನ್ನು ಪಡೆದಾಗ ಲೋನ್ ಹಣವು ಟಿಯಾಗು ಅವರ ಬ್ಯಾಂಕ್ ಖಾತೆಗೆ ಜಮಾ ಆಯಿತು. ನಂತರ ಆ ವ್ಯಕ್ತಿಯು ಸೈಬರ್ ಕ್ರೈಮ್ ಎಂದು ನಂಬಿಸಿ ಅಕೌಂಟ್ ನಂಬರ್ ನೀಡಿ ಟಿಯಾಗು ಖಾತೆಯಲ್ಲಿದ್ದ 15,62,921ರೂ. ಮೊತ್ತವನ್ನು ಆರ್.ಟಿ.ಜಿ.ಎಸ್. ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…