ಪಡುಬಿದ್ರಿ : ಮುಖ್ಯ ಬೀಚ್ ಬಳಿ ಹೆಜ್ಜೇನು ದಾಳಿಯಿಂದಾಗಿ ಒರ್ವ ಮೃತಪಟ್ಟರೆ ಮತ್ತೊರ್ವರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದು ಹಲವರು ಗಾಯಗೊಂಡಿದ್ದಾರೆ.
ಮೃತ ವ್ಯಕ್ತಿ ಸ್ಥಳೀಯ ನಿವಾಸಿ ವಾಸುದೇವ ಡಿ. ಸಾಲ್ಯಾನ್ (65), ಗಂಬೀರ ಗಾಯಗೊಂಡವರು ಚಂದ್ರಶೇಖರ್ (65), ಇವರು ಬೀಚ್ ಬಳಿ ಅಡ್ಡಾಡುತ್ತಿದ್ದಾಗ ದಾಳಿ ನಡೆಸಿದ್ದು ದಾಳಿ ಮಾಡಿದ ತಕ್ಷಣ ವಾಸುದೇವ್ ರಕ್ಷಣೆಗಾಗಿ ಸಮುದ್ರದ ನೀರಿಗೆ ಹಾರಿದವರು ಮತ್ತೆ ಮೇಲೆ ಬರಲಾಗದೆ ಅಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅದೇ ವೇಳೆ ಪಕ್ಕದಲ್ಲಿದ್ದ ಚಂದ್ರಶೇಖರ್ ರವರಿಗೂ ದಾಳಿ ನಡೆದಿದ್ದು ಅವರನ್ನು ತಕ್ಷಣ ಪಡುಬಿದ್ರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯ ವಾಗಿ ಹಲವರ ಮೇಲೆ ದಾಳಿ ನಡೆಯಿತಾದರೂ ಅವರು ಓಡಿ ತಪ್ಪಿಸಿಕೊಂಡಿದ್ದಾರೆ.
ತಪ್ಪಿದ ಬಾರೀ ದುರಂತ: ಪಕ್ಕದಲ್ಲೇ ಆಂಗ್ಲ ಮಾದ್ಯಮ ಶಾಲೆಯೊಂದಿದ್ದು ಶಾಲೆ ಬಿಟ್ಟು ಶಾಲಾ ವಾಹನ ಮಕ್ಕಳನ್ನು ಹೇರಿಕೊಂಡು ಹೋಗಿದ್ದರಾದರೂ ನಡೆದುಕೊಂಡು ಹೋಗುವ ಮಕ್ಕಳು ಇನ್ನೇನು ಆ ಪ್ರದೇಶಕ್ಕೆ ಬರುತ್ತಾರೆ ಎನ್ನುವಾಗ ಸಾರ್ವಜನಿಕರು ಬೊಬ್ಬೆ ಹಾಕಿ ಮಕ್ಕಳನ್ನು ತಡೆದ್ದರಿಂದ ಬಾರೀ ಅನಾಹುತ ತಪ್ಪಿದಂತ್ತಾಗಿದೆ. ಭಾನುವಾರವಾಗಿದ್ದರೆ ಈ ಬೀಚ್ ಪ್ರದೇಶದಲ್ಲಿ ಬಾರೀ ಜನ ಸಂದಾಣಿ ಇರುತ್ತಿದ್ದು ಮತ್ತಷ್ಟು ದುರಂತ ಸಾಧ್ಯವಿತ್ತು ಎನ್ನುತ್ತಾರೆ ಸ್ಥಳೀಯರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯವರು ಆ ಹೆಜ್ಜೇನು ಹಿಂಡನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…