ಪಡುಬಿದ್ರಿ: ಐಸಿಇಸಿ ಪರಿಸರ ತಜ್ಞರ ಸಮಿತಿ ಮಂಗಳವಾರ ಯುಪಿಸಿಎಲ್ ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾನಿಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಅಲ್ಲಿನ ಅಂತರ್ಜಲ ಮತ್ತು ಉಪ್ಪು ನೀರಿನ ಸಮಸ್ಯೆ , ಕುಂಠಿತವಾಗಿರುವ ಕೃಷಿ, ತೋಟಗಾರಿಕೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳನ್ನು ತಂಡ ಪರಿಶೀಲಿಸಿತು.
ಡಾ.ಕೃಷ್ಣರಾಜ್, ಡಾ.ಶ್ರೀಕಾಂತ್, ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿ ಬೆಂಗಳೂರು ಇದರ ಜಂಟಿ ನಿರ್ದೇಶಕ ತಿರುಮೂರ್ತಿ ನೇತೃತ್ವದ ಪರಿಸರ ತಜ್ಞರ ಸಮಿತಿ ಮಂಗಳವಾರ ಯುಪಿಸಿಎಲ್ ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾನಿಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಊಳ್ಳೂರರಿನ ಜಗನ್ನಾಥ ಮೂಲ್ಯ ಹಾಗು ಎಲ್ಲೂರಿನ ಜಯಂತ್ ರಾವ್, ಗಣೇಶ್ ರಾವ್ ಅವರ ಕೃಷಿ ಭೂಮಿಗೆ ತೆರಳಿ ಪರಿಶೀಲನೆ ನಡೆಸಿತು. ಅಲ್ಲಿನ ಅಂತರ್ಜಲ ಮತ್ತು ಉಪ್ಪು ನೀರಿನ ಸಮಸ್ಯೆ, ಕುಂಠಿತವಾಗಿರುವ ಕೃಷಿ ಹಾಗು ತೋಟಗಾರಿಕಾ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ತಂಡವು ಪರಿಶೀಲಿಸಿತು.
ಮುದರಂಗಡಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಜನರ ಆರೋಗ್ಯದ ಕುರಿತಾದ ಮಾಹಿತಿ ಸಂಗ್ರಸಿದರು.
ಯುಪಿಸಿಎಲ್ ನಿಂದ ಉಂಟಾಗಿರುವ ಪರಿಸರ, ನೀರಿನ ಸಮಸ್ಯೆ, ಆರೋಗ್ಯದ ಸಮಸ್ಯೆಗಳನ್ನು ಪರಿಶೀಲಿಸಿ ಕೇಂದ್ರೀಯ ಹಸಿರು ಪೀಠಕ್ಕೆ ಈ ತಂಡ ಜನವರಿ ಅಂತ್ಯದೊಳಗೆ ವರದಿ ನೀಡಬೇಕಿದ್ದು, ಸಮಸ್ಯೆಯ ಆಳವನ್ನು ಅರಿತ ತಜ್ಞರ ತಂಡ ದಿನದ ವಿಸ್ತರಣೆಯಾಗಿದೆ ಎಂದು ತಜ್ಞರ ತಂಡದ ಡಾ.ಕೃಷ್ಣರಾಜ್ ಅಭಿಪ್ರಾಯಿಸಿದ್ದಾರೆ.
ಕೇಂದ್ರೀಯ ಹಸಿರು ನ್ಯಾಯ ಪೀಠದಲ್ಲಿ ನಂದಿಕೂರು ಜನಜಾಗೃತಿ ಸಮಿತಿ 2018 ರಲ್ಲಿ ಹೂಡಿದ್ದ ದಾವೆಯ ತೀರ್ಪು ಸಮಿತಿ ಪರವಾಗಿದ್ದು,ಆ ಕುರಿತಾಗಿ ಸಮಿತಿ ಬೇಡಿಕೆ ಇರಿಸಿದ್ದ 130 ಕೋಟಿ ರೂ. ಪರಿಹಾರ ಕುರಿತಾಗಿ ಈ ತಜ್ಞರ ತಂಡವು ಹಸಿರು ಪೀಠದ ಅದೇಶದಂತೆ ಯೋಜನಾ ಸಂತ್ರಸ್ತರ ಅಹವಾಲು ಆಲಿಸಲು ಅಲ್ಲಿಗೆ ತೆರಳಿದ್ದು, ಜಗನ್ನಾಥನ್ ಮೂಲ್ಯ ಹಾಗೂ ಜಯಂತ್ ಭಟ್ ಅವರ ಕೃಷಿ ಭೂಮಿಗೆ ತೆರಳಿ ಪರಿಶೀಲನೆ ನಡೆಸಿತು. ಕೃಷಿ, ತೋಟಗಾರಿಕೆ, ಆರೋಗ್ಯ , ಪರಿಸರ ಇಲಾಖೆ ಯ ಅಧಿಕಾರಿಗಳು ಜೊತೆಗಿದ್ದರು.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…