Featured

ಪಡುಬೆಳ್ಳೆ: ಮನೆಗೆ ಮನೆಗೆ ತೆರಳಿ ಅನಧಿಕೃತವಾಗಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದ ಸಂಶಯಾಸ್ಪದ ನಾಲ್ಕು ಮಂದಿ ಪೊಲೀಸ್‌ ವಶಕ್ಕೆ – Vishwanews24

ಪಡುಬೆಳ್ಳೆ: ಮನೆಗೆ ಮನೆಗೆ ತೆರಳಿ ಅನಧಿಕೃತವಾಗಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದ ಸಂಶಯಾಸ್ಪದ ನಾಲ್ಕು ಮಂದಿ ಪೊಲೀಸ್‌ ವಶಕ್ಕೆ

ಶಿರ್ವ: ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಪಡುಬೆಳ್ಳೆಯಲ್ಲಿ ಮನೆಗೆ ಮನೆಗೆ ತೆರಳಿ ಅನಧಿಕೃತವಾಗಿ ಮನೆಯವರ ಜಾತಿ,ಪಕ್ಷ ಮತ್ತಿತರ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದ ನಾಲ್ಕು ಮಂದಿ ಯುವಕರನ್ನು ಪಡುಬೆಳ್ಳೆ ವಿಶ್ವ ಹಿಂದು ಪರಿಷದ್‌,ಬಜರಂಗದಳದ ಕಾರ್ಯಕರ್ತರು ಹಿಡಿದು ಗುರುವಾರ ಶಿರ್ವ ಪೊಲೀಸರಿಗೊಪ್ಪಿಸಿದ್ದಾರೆ.

ನಾಲ್ಕು ಮಂದಿ ಅನ್ಯ ಮತೀಯ ಯುವಕರು ಉದ್ಯಾವರದ ಲಾಡ್ಜೊಂದರಲ್ಲಿ ನಿಂತಿದ್ದು, ಪಡುಬೆಳ್ಳೆಗೆ ಬಂದು ವೋಟರ್‌ ಲಿಸ್ಟ್‌ ಹಿಡಿದುಕೊಂಡು ಸುಮಾರು ಹತ್ತಿಪ್ಪತ್ತು ಮನೆಗಳ ಸಮೀಕ್ಷೆ ನಡೆಸಿದ್ದರು. ಸಂಶಯಗೊಂಡ ಕೆಲ ಮನೆಯವರು ಪಡುಬೆಳ್ಳೆ ವಿಶ್ವಹಿಂದು ಪರಿಷದ್‌,ಬಜರಂಗದಳದ ಕಾರ್ಯಕರ್ತರಿಗೆ ಕರೆ ಮಾಡಿದ್ದಾರೆ. ಯವಕರು ಬೇರೆ ಜಿಲ್ಲೆಯವರಾಗಿದ್ದು, ಹೊಸಪೇಟೆ ಮುನಿರಾಬಾದ್‌ನ ದೇವರಾಜ್‌ ಎಂಬವರ ಸೂಚನೆ ಮೇರೆಗೆ ಸಮೀಕ್ಷೆ ನಡೆಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಒಬ್ಬಳೇ ಮಹಿಳೆ ಇರುವ ಸಂದರ್ಭದಲ್ಲಿ ಸರ್ವೆ ನೆಪದಲ್ಲಿ 4 ಮಂದಿ ಯುವಕರು ಬಂದು ದರೋಡೆ ಯಾ ಮಾನಭಂಗಕ್ಕೆ ಯತ್ನಿಸಿದರೆ ಯಾರು ಗತಿ ಎಂದು ಪರಿಸರದ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಯಾವುದೇ ಸರ್ವೇ ನಡೆಸುವವರು ಜಿಲ್ಲಾಡಳಿತದ ಅನುಮತಿ ಪತ್ರ ಪಡೆದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪ್ರತಿ ನೀಡಿ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆ ಮತ್ತು ಗ್ರಾ. ಪಂ.ಗೆ ಮಾಹಿತಿ ನೀಡಿದ ಬಳಿಕ ಸರ್ವೆ ನಡೆಸ ಬೇಕಾಗಿದೆ. ಇಲ್ಲದಿದ್ದಲ್ಲಿ ಗ್ರಾಮಸ್ಥರು ಅಂತಹ ವ್ಯಕ್ತಿಗಳು ಪರಿಸರದಲ್ಲಿ ಕಂಡುಬಂದರೆ ಗ್ರಾ.ಪಂ.ಗೆ ಮಾಹಿತಿ ನೀಡಿ ಅಥವಾ ಪೊಲೀಸ್‌ಠಾಣೆಗೆ ಕರೆ ಮಾಡಿ ಎಂದು ಶಿರ್ವ ಠಾಣಾಧಿಕಾರಿ ರಾಘವೆಂದ್ರ ಸಿ.ತಿಳಿಸಿದ್ದಾರೆ.
ಯುವಕರಲ್ಲಿ ದಿಲ್ಲಿ ಗುರ್ಗಾಂವ್‌ನ ನೇಶನ್‌ಟೈಮ್‌ ಸಂಸ್ಥೆಯ ಗುರುತು ಚೀಟಿ ಇದ್ದು ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago