ಉಡುಪಿ: ಪರಶುರಾಮ ಮೂರ್ತಿ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಶಾಸಕ ವಿ.ಸುನಿಲ್ ಕುಮಾರ್, ಕಾಂಗ್ರೆಸ್ ನಿರಂತರವಾಗಿ ಮಾಡಿದ ಆರೋಪ ಸುಳ್ಳಾಗಿದೆ..ಚಾರ್ಜ್ ಶೀಟ್ ಮುಖಾಂತರ ಅದು ಸಾಬೀತಾಗಿದೆ..ಸ್ಥಳೀಯ ನಾಯಕರ ಆರೋಪ ಕೇಳಿ ಕಾಂಗ್ರೆಸ್ ರಾಜ್ಯ ನಾಯಕರು ಕೂಡ ಟೀಕಿಸಿದ್ರು..ಕಟ್ಟು ಕಥೆಗಳನ್ನು ಸೃಷ್ಟಿಸುವ ಪ್ರಯತ್ನಗಳಿಗೆ ಸೋಲಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಸರಕಾರ ವಿಪಕ್ಷಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಬಂದಿದೆ..ತನಿಖೆ ನೆಪದಲ್ಲಿ ಟಾರ್ಗೆಟ್ ಮಾಡುವ ಪ್ರಯತ್ನ ಇಡೀ ರಾಜ್ಯದಲ್ಲಿ ನಡೆದಿದೆ..ಪರಶುರಾಮ ಥೀಮ್ ಪಾರ್ಕ್ ನನ್ನ ಕನಸಿನ ಯೋಜನೆ ದಕ್ಷಿಣ ಭಾರತದ ಶ್ರೇಷ್ಠ ಪ್ರವಾಸಿ ತಾಣವಾಗಬೇಕು ಅನ್ನೋದು ಕನಸು..
ಹೊಸ ಪರಿಕಲ್ಪನೆಯೊಂದಿಗೆ ಥೀಮ್ ಪಾರ್ಕ್ ನಿರ್ಮಾಣ ಮಾಡಿದ್ದೆವು.ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ವಿನಾಕಾರಣ ಆರೋಪ ಮಾಡಿದೆ..ಪರಶುರಾಮನ ಮೂರ್ತಿಯನ್ನು ಫೈಬರ್ ಎಂದು ಸುಳ್ಳು ಹೇಳಿದ್ರು..ರಾಜ್ಯಾದ್ಯಂತ ಫೈಬರ್ ಮೂರ್ತಿ ಎಂದು ಪ್ರಚಾರ ಮಾಡಿದ್ರು..ಕಾರ್ಕಳದ ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿ ಕಾಂಗ್ರೆಸ್ ಹಾಳು ಮಾಡಿದೆ..ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದ್ದರೆ ತನಿಖೆ ಮಾಡಿ ಎಂದು ನಾನು ಹೇಳುತ್ತಲೇ ಬಂದಿದ್ದೆ..ಅಪಪ್ರಚಾರ ಮಾಡಿ ಕಾರ್ಕಳಕ್ಕೆ ಅಪಮಾನ ಮಾಡಬೇಡಿ ಎಂದಿದ್ದೆ..ಒಳ್ಳೆಯ ತನಿಖೆ ಮಾಡಿ ಎಂದು ನಾನು ಸ್ವತಃ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ..ಕಾಂಗ್ರೆಸ್ ಎರಡು ವರ್ಷ ಕಾಲಹರಣ ಮಾಡಿದೆ. ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ಎಲ್ಲವೂ ಸ್ಪಷ್ಟವಾಗಿದೆ..ಫೈಬರ್ ಅನ್ನುವ ಆರೋಪ ಸುಳ್ಳಾಗಿದೆ..ಫೈಬರ್ ಅಲ್ಲ ಹಿತ್ತಾಳೆ ಅನ್ನೋದನ್ನ ಸ್ಪಷ್ಟ ಮಾಡಿದ್ದಾರೆ..ಅಪಪ್ರಚಾರ ಗಳಿಗೆ ಸೋಲಾಗಿದೆ ವಾದ ವಿವಾದ ಅಗತ್ಯವಿಲ್ಲ..ನಾನು ಲೋಹತಜ್ಞ ಅಲ್ಲ..ಹಿತ್ತಾಳೆ ಕಂಚು ಈ ವಿಚಾರದಲ್ಲಿ ಚರ್ಚೆಗೆ ಹೋಗಲ್ಲ..ಮೊದಲು ಸಿಮೆಂಟ್ ಅಂದ್ರು ಆಮೇಲೆ ಪ್ಲಾಸ್ಟಿಕ್ ಅಂದ್ರು ನಂತರ ಫೈಬರ್ ಅಂದ್ರು,ತನಿಖೆ ಆಗಲಿ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ ಅಂತಾ ಕಾರ್ಕಳ ಶಾಸಕ ಪರಶುರಾಮ ಮೂರ್ತಿ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…