Featured

ಪರ್ಯಾಯ ಮಹೋತ್ಸವ : ಉಡುಪಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ – vishwanews24

ಪರ್ಯಾಯ ಮಹೋತ್ಸವ : ಉಡುಪಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ

ಉಡುಪಿ : ಜಿಲ್ಲೆಯ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಪರ್ಯಾಯ ಮಹೋತ್ಸವದ ಹಿನ್ನೆಲೆ, ಉಡುಪಿ ನಗರ ವ್ಯಾಪ್ತಿಯಲ್ಲಿ ಜನವರಿ 17 ಮತ್ತು 18 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದರಿಂದ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹಿನ್ನಲೆ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221 5(ಎ)ರ ಅನ್ವಯ ಈ ಕೆಳಕಂಡ ರಸ್ತೆಗಳಿಗೆ ಬದಲಿ ಮಾರ್ಗ ಹಾಗೂ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿರುತ್ತಾರೆ.

ಜ.17 ರಂದು ಸಂಜೆ 4 ಗಂಟೆಯಿAದ ಮಂಗಳೂರಿನಿoದ ಉಡುಪಿ ಮತ್ತು ಮಣಿಪಾಲ ಕಡೆಗೆ ಹೋಗುವ ಎಲ್ಲಾ private ಬಸ್ಸುಗಳು ಸ್ವಾಗತಗೋಪುರ ರಸ್ತೆಯಲ್ಲಿ ಸಂಚಾರ ಮಾಡದೇ ರಾ.ಹೆ-66 ಮೂಲಕ ಕರಾವಳಿ ಜಂಕ್ಷನ್-ಬನ್ನoಜೆ-ಶಿರಿಬೀಡು-ಸಿಟಿ ಬಸ್ಸು ನಿಲ್ದಾಣ–ಐರೋಡಿಕರ್-ಸರ್ವಿಸ್ ಬಸ್ಸು ನಿಲ್ದಾಣ- ಕಿದಿಯೂರು ಹೊಟೇಲ್ ಮೂಲಕ ಕೆಳಗೆ ಇಳಿದು ಶಿರಿಬೀಡು-ಬನ್ನಂಜೆ – ಕರಾವಳಿ ಜಂಕ್ಷನ್-ರಾ.ಹೆ 66 ಮೂಲಕ ಮಂಗಳೂರಿಗೆ ಸಂಚರಿಸಬೇಕು.

ಜ.17 ರಂದು ಸಂಜೆ 4 ಗಂಟೆಯಿoದ ಕುಂದಾಪುರ ಕಡೆಯಿಂದ ಉಡುಪಿಗೆ ಬರುವ ಎಲ್ಲಾ private ಬಸ್ಸುಗಳು ಸಂತೆಕಟ್ಟೆ-ಅAಬಾಗಿಲು-ನಿಟ್ಟೂರು-ಕರಾವಳಿ ಜಂಕ್ಷನ್-ಬನ್ನAಜೆ-ಶಿರಿಬೀಡು-ಸಿಟಿ ಬಸ್ಸು ನಿಲ್ದಾಣ-ಐರೋಡಿ ಸರ್ವಿಸ್ ಬಸ್ಸು ನಿಲ್ದಾಣ-ಕಿದಿಯೂರು ಹೋಟೆಲ್ ಮೂಲಕ ಕೆಳಗೆ ಇಳಿದು ಶಿರಿಬೀಡು- ಬನ್ನಂಜೆ –ಕರಾವಳಿ ಜಂಕ್ಷನ್ –ರಾ.ಹೆ. 66 ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು.

ಜ.17 ರಂದು ಸಂಜೆ 4 ಗಂಟೆಯಿoದ ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲಾ private ಬಸ್ಸುಗಳು ಇಂದ್ರಾಳಿ- m.ಜಿ.m-ಕಡಿಯಾಳಿ-ಕಲ್ಸoಕ- ಉಡುಪಿ ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ಅಲ್ಲಿಂದ ತಿರುಗಿಸಿ ವಾಪಸು ಕಲ್ಸಂಕ –ಎಂ.ಜಿ.ಎo –ಇಂದ್ರಾಳಿ ಮೂಲಕ ಮಣಿಪಾಲ, ಕಾರ್ಕಳ ಕಡೆಗೆ ಸಂಚಾರ ಮಾಡಬೇಕು.

ಜ.17 ರಂದು ಸಂಜೆ 4 ಗಂಟೆಯಿoದ ರಾಂಪುರ, ಕುಕ್ಕಿಕಟ್ಟೆ, ಮೂಡುಬೆಳ್ಳೆ ಕಡೆಯಿಂದ ಉಡುಪಿಗೆ ಬರುವ ಎಲ್ಲಾ private ಬಸ್ಸುಗಳು ಮಿಶನ್ ಕಂಪೌoಡ್‌ನಿoದ ಬಲಕ್ಕೆ ತಿರುಗಿ ಅಮ್ಮಣ್ಣಿ ರಾಮಣ್ಣ- ಚಿಟ್ಪಾಡಿ ಜಂಕ್ಷನ್‌ನಿoದ ಎಡಕ್ಕೆ ತಿರುಗಿ-ಬೀಡಿನಗುಡ್ಡೆ ಜಂಕ್ಷನ್-ಶಾರದ ಕಲ್ಯಾಣ ಮಂಟಪ ಜಂಕ್ಷನ್ ಎಡಕ್ಕೆ ತಿರುಗಿ-ಕಲ್ಸಂಕ-ಸಿ.ಟಿ ಬಸ್ಸು ನಿಲ್ದಾಣ ಐರೋಡಿಕರ್-ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ನಂತರ ಅದೇ ರಸ್ತೆ ಮಾರ್ಗವಾಗಿ ವಾಪಸು ಸಂಚರಿಸಬೇಕು.

ಜ.17 ರಂದು ಸಂಜೆ 4 ಗಂಟೆಯಿoದ ಮಲ್ಪೆ ಕಡೆಯಿಂದ ಉಡುಪಿಗೆ ಬರುವಂತಹ ಖಾಸಗಿ ಬಸ್ಸುಗಳು ಆದಿಉಡುಪಿ-ಕರಾವಳಿ ಜಂಕ್ಷನ್ -ಬನ್ನಂಜೆ-ಶಿರಿಬೀಡು-ಐರೋಡಿಕರ್-ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ವಾಪಸು ಶಿರಿಬೀಡು-ಬನ್ನಂಜೆ ಕರಾವಳಿ ಜಂಕ್ಷನ್ –ಆದಿಉಡುಪಿ ಮಾರ್ಗವಾಗಿ ಮಲ್ಪೆ ಕಡೆಗೆ ವಾಪಾಸು ಸಂಚರಿಸಬೇಕು.

ಜ.17 ರಂದು ಬುಕ್ಕಿಂಗ್ ಏಜೆಂಟ್ ಮತ್ತು ಬಸ್ ಕಂಪನಿಯವರು ರಾತ್ರಿ ಉಡುಪಿ ಸಿಟಿ ಒಳಗೆ ಪ್ರವೇಶ ಮಾಡದೇ ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸಬೇಕು.

ಜ.17 ರಂದು ಸಂಜೆ 6 ಗಂಟೆಯಿoದ ಜ.18 ರ ಬೆಳಗ್ಗೆ 6 ಗಂಟೆಯ ವರೆಗೆ ಸ್ವಾಗತ ಗೋಪುರ, ಕಿನ್ನಿಮೂಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ, ಟಿ.ಎಂ.ಎ.ಪೈ ಆಸ್ಪತ್ರೆ, ಲಯನ್ಸ್ ಸರ್ಕಲ್, ಹಳೇ ಡಯಾನ ಸರ್ಕಲ್, ಮಿತ್ರ ಜಂಕ್ಷನ್, ತೆಂಕಪೇಟೆ, ರಥಬೀದಿ ರಸ್ತೆಯಲ್ಲಿ ಅಕ್ಕಪಕ್ಕ ವಾಹನ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಲಾಗಿರುತ್ತದೆ. ಕಲ್ಸಂಕ ಜಂಕ್ಷನ್‌ನಿoದ ವಿದ್ಯೋದ್ಯಯ ಶಾಲೆಯವರೆಗೆ ರಸ್ತೆಯ ಬದಿಯ ಪಾರ್ಕಿಂಗ್ ನಿಷೇಧಿಸಲಾಗಿರುತ್ತದೆ

ಜ.17 ರಂದು ಸಂಜೆ 6 ಗಂಟೆಯಿoದ ಜ.18 ರ ಬೆಳಗ್ಗೆ 6 ಗಂಟೆಯ ವರೆಗೆ ನಾಗಬನಕ್ರಾಸ್ ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕುಂಜೂರು ಎಲೆಕ್ಟ್ರಾನಿಕ್ಸ್ ನಿಂದ ಗೀತಾಂಜಲಿ ರಸ್ತೆಯವರೆಗೆ, ಸರ್ವಿಸ್ ಬಸ್ಸು ನಿಲ್ದಾಣದ ಪೊಲೀಸ್ ಔಟ್ ಪೋಸ್ಟ್ನಿಂದ ಕವಿ ಮುದ್ದಣ್ಣ ರಸ್ತೆಯವರೆಗೆ, ವಿಷ್ಣು ಫ್ಲವರ್ ಸ್ಟಾಲ್‌ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಭಾಸ್ಕರ ವಿಹಾರ್ ರಸ್ತೆಯಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕಲ್ಸಂಕದಿoದ ಬಡಗುಪೇಟೆ ರಸ್ತೆಯವರೆಗೆ, ಸೌತ್ ಶಾಲೆಯ ಬಳಿ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ರಸ್ತೆಯವರೆಗೆ, ಜೋಡುಕಟ್ಟೆಯಿಂದ ಬ್ರಹ್ಮಗಿರಿಗೆ ಹೋಗುವ ರಸ್ತೆಯ ಬೇತಲ್ ಚರ್ಚ್ ಬಳಿ, ಎಲ್.ಐ.ಸಿ ರಸ್ತೆಯ ಸಿಂಡಿಕೇಟ್ ಟವರ್ ಬಳಿ, ಅಲಂಕಾರ್ ಟಾಕೀಸ್ ರಸ್ತೆಯ ಬಳಿ, ಮಿಷನ್ ಆಸ್ಪತ್ರೆಯಿಂದ ಲಯನ್ಸ್ ಸರ್ಕಲ್ ಬರುವ ರಸ್ತೆಯಲ್ಲಿ ಮಿಷನ್ ಆಸ್ಪತ್ರೆ ಎದುರು, ಅಮ್ಮಣ್ಣಿ ರಾಮಣ್ಣ ಹಾಲ್ ಎದುರಿನ ಪಿಪಿಸಿ ಕಾಲೇಜ್‌ಗೆ ಹೋಗುವ ರಸ್ತೆಯ ಅಮ್ಮಣ್ಣಿ ರಾಮಣ್ಣ ಹಾಲ್ ಎದುರು, ತ್ರಿನಿಟಿ ಐಟಿಐ ಕಾಲೇಜಿನ ಎದುರಿನಿಂದ ಸೌತ್ ಶಾಲೆಗೆ ಹೋಗುವ ರಸ್ತೆಯ, ತ್ರಿನಿಟಿ ಕಾಲೇಜ್ ಎದುರು, ಹಾಗೂ ಬೀಡಿನಗುಡ್ಡೆಯಿಂದ ವೆಂಕಟರಮಣ ದೇವಸ್ಥಾನಕ್ಕೆ ಬರುವ ರಸ್ತೆಯ ಬೀಡಿನಗುಡ್ಡೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

13 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

14 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

14 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

15 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

15 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

15 hours ago