ಬಿಜೆಪಿ ನೇತೃತ್ವದ ಎನ್‌ಡಿಎ ಕೈ ಜೋಡಿಸಿದ್ದ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಅಧಿಕಾರದ ಗದ್ದುಗೆಯೇರಿದ್ದನ್ನ ಕಂಡು ಬಂಗಾಳ ಬದಲಾಗಬಹುದೆಂದೇ ಹೇಳಲಾಗಿತ್ತು. ಆದರೆ ಮಮತಾ ಬ್ಯಾನರ್ಜಿಯ ಮೇಲಿಟ್ಟಿದ್ದ ಎಲ್ಲ ನಂಬಿಕೆಗಳನ್ನೂ ಹುಸಿಗೊಳಿಸಿದ ಮಮತಾ ಬ್ಯಾನರ್ಜಿ ಕಮ್ಯುನಿಸ್ಟರಿಗಿಂತಲೂ ಕ್ರೂರವಾಗಿ ಸರ್ವಾಧಿಕಾರಿ ಧೋರಣೆಯನ್ನನುಸರಿಸುತ್ತ ಪಶ್ಚಿಮ ಬಂಗಾಳವನ್ನ ಜಿಹಾದಿಗಳ ಅಡ್ಡೆಯಾಗಿ ಪರಿವರ್ತಿಸಿಬಿಟ್ಟಿದ್ದಾಳೆ.ಅಕ್ರಮ ಬಾಂಗ್ಲಾ ವಲಸಿಗರನ್ನ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿಸಿ ಇಡೀ ರಾಜ್ಯವನ್ನೇ ಕಾಶ್ಮೀರದ ಸ್ಥಿತಿಗೆ ತಂದು ನಿಲ್ಲಿಸಿದ್ದಾಳೆ ಮಮತಾ ಬ್ಯಾನರ್ಜಿ. ಅಕ್ರಮ ಬಾಂಗ್ಲಾ ವಲಸಿಗರಿಗೆ ರಾಜ್ಯದಲ್ಲಿ ಆಶ್ರಯ ನೀಡಿ ಅವರಿಗೆ ವೋಟರ್ ಕಾರ್ಡ್ ಆಧಾರ್ ಕಾರ್ಡ್ ಮಾಡಿಸಿ ಅವರನ್ನ ವೋಟಬ್ಯಾಂಕ್ ಮಾಡಿಕೊಂಡು ಸದಾ ಮುಸ್ಲಿಂ ತುಷ್ಟೀಕರಣ ಮಾಡುವ ಮಮತಾ ಬ್ಯಾನರ್ಜಿಯ ಆಡಳಿತದ ಪ.ಬಂಗಾಳದಲ್ಲಿ ಹಿಂದುಗಳ ದಮನ ನಿರಂತರವಾಗಿ ನಡೆಯುತ್ತಲೇ ಇದೆ..
ಪಶ್ಚಿಮ ಬಂಗಾಳದ ಇಂತಹ ವಿಷಮ ಪರಿಸ್ಥಿತಿಯಲ್ಲಿ ಮೋದಿಜೀ ನೇತೃತ್ವದ ಬಿಜೆಪಿ ಇದೀಗ ಮಮತಾ ಬ್ಯಾನರ್ಜಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದು ಬಿಜೆಪಿಯ ಮಾಸ್ಟರಪ್ಲ್ಯಾನ್ ಗೆ ಮಮತಾ ಬ್ಯಾನರ್ಜಿ ಕಕ್ಕಾಬಿಕ್ಕಿಯಾಗಿದ್ದಾಳೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಭರ್ಜರಿ ರಣತಂತ್ರ ರೂಪಿಸಿರುವ ಬಿಜೆಪಿಯ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ದಂಗು ಬಡಿದಂತವಳಾಗಿದ್ದಾಳೆ.
ಕಳೆದ ಹಲವಾರು ವರ್ಷಗಳಿಂದ ಪ.ಬಂಗಾಳದಲ್ಲಿ ಬಿಜೆಪಿಯ ಅಸ್ತಿತ್ವವೇ ಇರಲಿಲ್ಲ, ಆದರೆ ಕಳೆದ ಕೆಲ ವರ್ಷಗಳಲ್ಲಿ ಬಂಗಾಳದಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿದ್ದಲ್ಲದೆ ಮಮತಾ ಬ್ಯಾನರ್ಜಿಗೆ ಸೆಡ್ಡು ಹೊಡೆದು ತನ್ನ ಮತ ಪ್ರಮಾಣವನ್ನ ಬಿಜೆಪಿ ಹೆಚ್ಚಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದಲ್ಲಿ ಬಂದೇ ಇಲ್ಲ ಆದರೆ ಕಳೆದ ಕೆಲ ವರ್ಷಗಳಲ್ಲಿ ಬಿಜೆಪಿಯ ವೋಟ್ ಶೇರ್ ಹತ್ತಿರತ್ತಿರ 10% ಗೆ ಬಂದು ಮುಟ್ಟಿದೆ.
ಇದರಿಂದ ಸ್ಪಷ್ಟವಾಗುವ ವಿಷಯವೇನೆಂದರೆ ಈ ಬಾರಿ ಮುಂದೆ ನಡೆಯುವ 2019 ರ ಲೋಕಸಭಾ ಚುನಾವಣೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಬಿಜೆಪಿ ಪ್ರಬಲ ಎದುರಾಳಿಯಾಗಿ ಪಶ್ಚಿಮ ಬಂಗಾಳದಲ್ಲಿ ಪ್ರಭಕ ವಿರೋಧವೊಡ್ಡಿ ಖೆಡ್ಡಾಗೆ ಕೆಡವಲು ಭರ್ಜರಿ ತಯಾರಿ ನಡೆಸಿದೆ. ಬಂಗಾಳದಲ್ಲಿ ಟಿಎಂಸಿ ಪಕ್ಷಕ್ಕೆ ಸೆಡ್ಡು ಹೊಡೆಯಬಲ್ಲ ಪಕ್ಷ ಕಮ್ಯುನಿಸ್ಟ್ ಪಕ್ಷವಾಗಿತ್ತು ಆದರೆ ಕಮ್ಯುನಿಸ್ಟರ ಬಲ ಬಂಗಾಳದಲ್ಲಿ ಕುಗ್ಗಿದ್ದು ಟಿಎಂಸಿ ಗೆ ಪ್ರಬಲ ಎದುರಾಳಿಯಾಗಿ ಎರಡನೆಯ ಸ್ಥಾನದಲ್ಲಿ ಈಗ ಬಿಜೆಪಿ ಮುನ್ನುಗ್ಗಿದೆ.
ಪಶ್ಚಿಮ ಬಂಗಾಳದಲ್ಲಿ ಶತಾಯಗತಾಯವಾಗಿ ಕಮಲ ಅರಳಿಸಲು ಭರ್ಜರಿ ಸಿದ್ಧತೆಗಿಳಿದಿರುವ ಬಿಜೆಪಿಯ ಚಾಣಕ್ಯ ಅಮಿತ್ ಶಾಹ್ ಕಳೆದ ಕೆಲ ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳದ ಪ್ರವಾಸ ಕೈಗೊಂಡಿದ್ದರು. ಬಂಗಾಳ ಕ್ಕೆ ಭೇಟಿ ನೀಡಿದ್ದ ಅಮಿತ್ ಶಾಹ್ ಅಲ್ಲಿ ತಮ್ಮ ಕಾರ್ಯಕರ್ತರನ್ನ ಭೇಟಿಯಾಗಿ ಅವರಲ್ಲಿ ಆತ್ಮವಿಶ್ವಾಸ ತುಂಬಿ ಬಂದಿದ್ದರು.
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…