Featured

ಪಶ್ಚಿಮಬಂಗಾಳದಲ್ಲಿ ಕಮಲ ಅರಳಿಸಲು ಕೇಸರಿ ಪಡೆಯ ಮಾಸ್ಟರ್ ಪ್ಲಾನ್ ; ಬಿಜೆಪಿಯ ಈ ಪ್ಲಾನ್ ಗೆ ಬೆಚ್ಚಿಬಿದ್ದ ಮಮತಾ..

ಬಿಜೆಪಿ ನೇತೃತ್ವದ ಎನ್‌ಡಿಎ ಕೈ ಜೋಡಿಸಿದ್ದ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಅಧಿಕಾರದ ಗದ್ದುಗೆಯೇರಿದ್ದನ್ನ ಕಂಡು ಬಂಗಾಳ ಬದಲಾಗಬಹುದೆಂದೇ ಹೇಳಲಾಗಿತ್ತು. ಆದರೆ ಮಮತಾ ಬ್ಯಾನರ್ಜಿಯ ಮೇಲಿಟ್ಟಿದ್ದ ಎಲ್ಲ ನಂಬಿಕೆಗಳನ್ನೂ ಹುಸಿಗೊಳಿಸಿದ ಮಮತಾ ಬ್ಯಾನರ್ಜಿ ಕಮ್ಯುನಿಸ್ಟರಿಗಿಂತಲೂ ಕ್ರೂರವಾಗಿ ಸರ್ವಾಧಿಕಾರಿ ಧೋರಣೆಯನ್ನನುಸರಿಸುತ್ತ ಪಶ್ಚಿಮ ಬಂಗಾಳವನ್ನ ಜಿಹಾದಿಗಳ ಅಡ್ಡೆಯಾಗಿ ಪರಿವರ್ತಿಸಿಬಿಟ್ಟಿದ್ದಾಳೆ.ಅಕ್ರಮ ಬಾಂಗ್ಲಾ ವಲಸಿಗರನ್ನ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿಸಿ ಇಡೀ ರಾಜ್ಯವನ್ನೇ ಕಾಶ್ಮೀರದ ಸ್ಥಿತಿಗೆ ತಂದು ನಿಲ್ಲಿಸಿದ್ದಾಳೆ ಮಮತಾ ಬ್ಯಾನರ್ಜಿ. ಅಕ್ರಮ ಬಾಂಗ್ಲಾ ವಲಸಿಗರಿಗೆ ರಾಜ್ಯದಲ್ಲಿ ಆಶ್ರಯ ನೀಡಿ ಅವರಿಗೆ ವೋಟರ್ ಕಾರ್ಡ್ ಆಧಾರ್ ಕಾರ್ಡ್ ಮಾಡಿಸಿ ಅವರನ್ನ ವೋಟಬ್ಯಾಂಕ್ ಮಾಡಿಕೊಂಡು ಸದಾ ಮುಸ್ಲಿಂ ತುಷ್ಟೀಕರಣ ಮಾಡುವ ಮಮತಾ ಬ್ಯಾನರ್ಜಿಯ ಆಡಳಿತದ ಪ.ಬಂಗಾಳದಲ್ಲಿ ಹಿಂದುಗಳ ದಮನ ನಿರಂತರವಾಗಿ ನಡೆಯುತ್ತಲೇ ಇದೆ..

ಪಶ್ಚಿಮ ಬಂಗಾಳದ ಇಂತಹ ವಿಷಮ ಪರಿಸ್ಥಿತಿಯಲ್ಲಿ ಮೋದಿಜೀ ನೇತೃತ್ವದ ಬಿಜೆಪಿ ಇದೀಗ ಮಮತಾ ಬ್ಯಾನರ್ಜಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದು ಬಿಜೆಪಿಯ ಮಾಸ್ಟರಪ್ಲ್ಯಾನ್ ಗೆ ಮಮತಾ ಬ್ಯಾನರ್ಜಿ ಕಕ್ಕಾಬಿಕ್ಕಿಯಾಗಿದ್ದಾಳೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಭರ್ಜರಿ ರಣತಂತ್ರ ರೂಪಿಸಿರುವ ಬಿಜೆಪಿಯ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ದಂಗು ಬಡಿದಂತವಳಾಗಿದ್ದಾಳೆ.

ಕಳೆದ ಹಲವಾರು ವರ್ಷಗಳಿಂದ ಪ.ಬಂಗಾಳದಲ್ಲಿ ಬಿಜೆಪಿಯ ಅಸ್ತಿತ್ವವೇ ಇರಲಿಲ್ಲ, ಆದರೆ ಕಳೆದ ಕೆಲ ವರ್ಷಗಳಲ್ಲಿ ಬಂಗಾಳದಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿದ್ದಲ್ಲದೆ ಮಮತಾ ಬ್ಯಾನರ್ಜಿಗೆ ಸೆಡ್ಡು ಹೊಡೆದು ತನ್ನ ಮತ ಪ್ರಮಾಣವನ್ನ ಬಿಜೆಪಿ ಹೆಚ್ಚಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದಲ್ಲಿ ಬಂದೇ ಇಲ್ಲ ಆದರೆ ಕಳೆದ ಕೆಲ ವರ್ಷಗಳಲ್ಲಿ ಬಿಜೆಪಿಯ ವೋಟ್ ಶೇರ್ ಹತ್ತಿರತ್ತಿರ 10% ಗೆ ಬಂದು ಮುಟ್ಟಿದೆ.

ಇದರಿಂದ ಸ್ಪಷ್ಟವಾಗುವ ವಿಷಯವೇನೆಂದರೆ ಈ ಬಾರಿ ಮುಂದೆ ನಡೆಯುವ 2019 ರ ಲೋಕಸಭಾ ಚುನಾವಣೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಬಿಜೆಪಿ ಪ್ರಬಲ ಎದುರಾಳಿಯಾಗಿ ಪಶ್ಚಿಮ ಬಂಗಾಳದಲ್ಲಿ ಪ್ರಭಕ ವಿರೋಧವೊಡ್ಡಿ ಖೆಡ್ಡಾಗೆ ಕೆಡವಲು ಭರ್ಜರಿ ತಯಾರಿ ನಡೆಸಿದೆ. ಬಂಗಾಳದಲ್ಲಿ ಟಿಎಂಸಿ ಪಕ್ಷಕ್ಕೆ ಸೆಡ್ಡು ಹೊಡೆಯಬಲ್ಲ ಪಕ್ಷ ಕಮ್ಯುನಿಸ್ಟ್ ಪಕ್ಷವಾಗಿತ್ತು ಆದರೆ ಕಮ್ಯುನಿಸ್ಟರ ಬಲ ಬಂಗಾಳದಲ್ಲಿ ಕುಗ್ಗಿದ್ದು ಟಿಎಂಸಿ ಗೆ ಪ್ರಬಲ ಎದುರಾಳಿಯಾಗಿ ಎರಡನೆಯ ಸ್ಥಾನದಲ್ಲಿ ಈಗ ಬಿಜೆಪಿ ಮುನ್ನುಗ್ಗಿದೆ.

ಪಶ್ಚಿಮ ಬಂಗಾಳದಲ್ಲಿ ಶತಾಯಗತಾಯವಾಗಿ ಕಮಲ ಅರಳಿಸಲು ಭರ್ಜರಿ ಸಿದ್ಧತೆಗಿಳಿದಿರುವ ಬಿಜೆಪಿಯ ಚಾಣಕ್ಯ ಅಮಿತ್ ಶಾಹ್ ಕಳೆದ ಕೆಲ ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳದ ಪ್ರವಾಸ ಕೈಗೊಂಡಿದ್ದರು. ಬಂಗಾಳ ಕ್ಕೆ ಭೇಟಿ ನೀಡಿದ್ದ ಅಮಿತ್ ಶಾಹ್ ಅಲ್ಲಿ ತಮ್ಮ ಕಾರ್ಯಕರ್ತರನ್ನ ಭೇಟಿಯಾಗಿ ಅವರಲ್ಲಿ ಆತ್ಮವಿಶ್ವಾಸ ತುಂಬಿ ಬಂದಿದ್ದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಕೂಡ ಮಹತ್ವದ್ದಾಗಿದ್ದು ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 22 ಸ್ಥಾನಗಳನ್ನ ಗೆಲ್ಲಲು ರಣತಂತ್ರ ರೂಪಿಸಿದೆ. ಈ ಲಕ್ಷ್ಯ ಪ್ರಾಪ್ತ ಮಾಡಿಕೊಳ್ಳಲು ಬಿಜೆಪಿ ಚಾಣಕ್ಯ ಅಮಿತ್ ಶಾ ರಣತಂತ್ರ ರೂಪಿಸಿದ್ದು ಅದನ್ನ ಭೇದಿಸಲು ವಿರೋಧಿಗಳು ವಿಲಿವಿಲಿ ಒದ್ದಾಡಿ ಸಿಕ್ಕಿಕೊಳ್ಳುವಂತೆ ಮಾಡಿದ್ದರೆ ಅಮಿತ್ ಶಾ.

ಪಶ್ಚಿಮ ಬಂಗಾಳದಲ್ಲಿ ಹಿಟ್ಲರ್ ಶಾಹಿ ಆಡಳಿತದಂತೆಯೇ ಸರ್ವಾಧಿಕಾರಿ ಧೋರಣೆಯ ಮೂಲಕ ಅಧಿಕಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿಯ ಮಾನಸಿಕತೆಗೆ ಖಡಕ್ ಪ್ರತ್ಯುತ್ತರ ನೀಡಲು ಬಿಜೆಪಿ ಸಜ್ಜಾಗಿದ್ದು ಮಮತಾ ಬ್ಯಾನರ್ಜಿ ಈ ಬಾರಿ ಬಂಗಾಳದಲ್ಲಿ ಧೂಳಿಪಟವಾದರೂ ಆಶ್ಚರ್ಯವಿಲ್ಲ.

 

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

5 hours ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

1 day ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

1 day ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

1 day ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

1 day ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

1 day ago