Featured

ಪಾಕಿಸ್ತಾನ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಕೇಸರಿ ಪುತ್ರ..

 

ಪಾಕಿಸ್ತಾನದ ಈ ಬಾರಿಯ ಸಾರ್ವತ್ರಿಕ ಚುನಾವಣೆ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಇದೇ ಬಾರಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಹಿಂದೂ ನಾಯಕರೊಬ್ಬರು ಆಯ್ಕೆಯಾಗಿದ್ದಾರೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಮಹೇಶ್ ಕುಮಾರ್ ಮಲಾನಿ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಪಾಕಿಸ್ತಾನದಲ್ಲಿ ಸುರಕ್ಷತೆ ಇಲ್ಲ ಎಂಬ ನೋವಿನ ಮಧ್ಯೆಯೇ, ಹಿಂದೂ ನಾಯಕನೋರ್ವ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾಗಿರುವುದು ಪರಿಸ್ಥಿತಿ ಬದಲಾವಣೆಯ ಆಶಾಭಾವ ಮೂಡಿಸಿದೆ.

ದಕ್ಷಿಣ ಸಿಂಧ್ ಪ್ರಾಂತ್ಯದ ತಾರಪಾರಾಕರ್ ಕ್ಷೇತ್ರದಿಂದ ಮಹೇಶ್ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಹೇಶ್ ತಮ್ಮ ಪ್ರತಿಸ್ಪರ್ಧಿ ಅರಬ್ ಜಕುಲ್ಲಾ ಅವರನ್ನು ಸೋಲಿಸಿದ್ದಾರೆ. ರಾಜಸ್ಥಾನಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಮಹೇಶ್, 2003 ರಿಂದ 2008ರ ವರೆಗೆ ಪಿಪಿಪಿ ನಾಮನಿರ್ದೇಶಕ ಸಂಸದರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತರ್ಪಾಕಾರ್ ಕ್ಷೇತ್ರದಿಂದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹೇಶ್ ಕುಮಾರ್ ಮಲಾನಿಯವರು ಭರ್ಜರಿ ಗೆಲುವನ್ನು ದಾಖಲಿಸಿ ಪಾಕಿಸ್ತಾನದ ಮೊದಲ ಹಿಂದೂ ಸಂಸದ ಎಂಬ ಗೌರವಕ್ಕೆ ಕೂಡಾ ಪಾತ್ರರಾಗಿದ್ದಾರೆ. ಮಹೇಶ್ ಕುಮಾರ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಗ್ರಾಂಡ್ ಡೆಮಾಕ್ರಾಟಿಕ್ ಅಲಯನ್ಸ್ ಪಕ್ಷದ ಅರಬ್ ಜಕಾವುಲ್ಲಾ ಎಂಬುವವರನ್ನು ಬರೋಬ್ಬರಿ 21,922 ಮತಗಳಿಂದ ಸೋಲಿಸಿ ಗಮನ ಸೆಳೆದಿದ್ದಾರೆ. ಈ ಚುನಾವಣೆಯಲ್ಲಿ ಮಹೇಶ್ ಕುಮಾರ್ ಮಲಾನಿ ಅವರು 37,245 ಮತಗಳನ್ನು ಹಾಗೂ ಅವರ ಹತ್ತಿರದ ಪ್ರತಿಸ್ಪರ್ಧಿ ಜಕಾವುಲ್ಲಾ ಅವರು 18,323 ಮತಗಳನ್ನು ಪಡೆದಿದ್ದರು. ಮಹೇಶ್ ಅವರ ಜಯಭೇರಿ ಪಾಕಿಸ್ತಾನದಲ್ಲಿ ಹೊಸ ಅವಕಾಶದ ಬಾಗಿಲೊಂದನ್ನು ತೆರೆದಿದ್ದು, ಅಲ್ಪಸಂಖ್ಯಾತ ಹಿಂದೂ ಸಮುದಾಯ ಪಾಕಿಸ್ತಾನದಲ್ಲಿ ಇನ್ನು ಮುಂದೆ ನಿರ್ಭಯವಾಗಿ ಉಸಿರಾಡಬಹುದು ಎಂಬ ಆಶಾಭಾವ ಮೂಡಿದೆ.

 

2009ರಲ್ಲಿ ತನ್ನ ತಂದೆ ಮರಣಾ ನಂತರ ಹಿರಿಯ ಮಗನಾದ ರಾಣಾ ಹಮೀರ್ ಸಿಂಗ್ ಸೋಧಾರಿಗೆಗೆ ಪಟ್ಟಾಭಿಷೇಕವನ್ನು ಮಾಡಿದಾಗ ಭಾರೀ ಸಂಖ್ಯೆಯ ಹಿಂದೂಗಳು ಮತ್ತು ಮುಸ್ಲಿಮರು ಪಾಲ್ಗೊಂಡಿದ್ದರು… ಇಂಡೋ ಪಾಕಿಸ್ತಾನದ ಗಡಿಯಲ್ಲಿ ಇವರಿಗೆ ಪಟ್ಟಾಭಿಭಿಷೇಕವನ್ನು ಮಾಡಲಾಯಿತು… ಹಮೀರ್ ಸಿಂಗ್ ರಾಜ ವೈಭೋಗದಂತೆ ಕಿರೀಟ ಧಾರಣೆಯನ್ನುಕೂಡಾ ಮಾಡಲಾಯಿತು.. ಇದಕ್ಕೆ ಇಡೀ ಪಾಕ್ ಸಾಕ್ಷಿಯಾಗಿತ್ತು. ಭಾರತಕ್ಕೆ ಏನಾದರೂ ತೊಂದರೆ ಯಾಗುವಂತೆ ಮಾಡಿದರೆ ಈ ಕುಟುಂಬ ಪಾಕ್‍ನಲ್ಲಿ ಇದ್ದೇವೆ ಎಂದು ಎಂದಿಗೂ ಪಾಕ್‍ಗೆ ಬೆಂಬಲಿಸದೆ ಅವರನ್ನು ದ್ವೇಷಿಸುತ್ತನೇ ಬಂದಿದ್ದಾರೆ.. ಈ ಕುಟುಂಬ ಎಂದಿಗೂ ಭಾರತೀಯರನ್ನು ಬಿಟ್ಟುಕೊಟ್ಟಿಲ್ಲ… ಇದೀಗ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಮತ್ತೆ ಹಿಂದೂ ಪುತ್ರನೇ ಜಯಗಳಿಸುವ ಮೂಲಕ ಪಾಕಿಸ್ತಾನದ ಮುಸ್ಲಿಮರ ಸೊಕ್ಕು ಮುರಿಯಲು ತಯಾರಾಗಿ ನಿಂತಿದ್ದಾರೆ..

ಈಗಾಗಲೇ ಪಾಕ್‍ನಲ್ಲಿ ಹಿಂದೂ ರಾಣಾ ಹಮೀರ್ ಸಿಂಗ್‍ರವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು.. ಪಾಕ್‍ನಲ್ಲಿ ಜೀವಿಸುತ್ತಿದ್ದರೂ ಅವರ ರಾಣಾ ಹಮೀರ್ ಸಿಂಗ್ ತಲೆಗೆ ಕೇಸರಿ ಬಣ್ಣದ ಶಾಲನ್ನು ಸುತ್ತಿ ಹಣೆಗೆ ಕುಂಕುಮವನ್ನು ಹಾಕಿ ರಾಜ ರೋಷವಾಗಿ ಪಾಕ್‍ನಲ್ಲಿ ಜೀವಿಸುತ್ತಿದ್ದಾರೆ.. ರಾಣಾ ಹಮೀರ್ ಸಿಂಗ್ ಸಿಂಧ್ ಅನ್ನು ಪಾಕಿಸ್ತಾನದ “ಧತ” ಎಂದು ಸಹ ಕರೆಯಲಾಗುತ್ತದೆ.. ಇವರು ಭಾರತದ ಪ್ರಸಿದ್ಧ ರಜಪೂತ ವಂಶವನ್ನು ಇನ್ನೂ ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ..

 

Vishwa News 24

Recent Posts

ಉಡುಪಿ : ನೇರ ಸಂದರ್ಶನ -vishwanews24

ಉಡುಪಿ : ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ…

1 hour ago

ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ : ನಾಲ್ಕು ವರ್ಷದ ಬಾಲಕಿ ದುರ್ಮರಣ -vishwanews24

ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ – ನಾಲ್ಕು ವರ್ಷದ ಬಾಲಕಿ ದುರ್ಮರಣ ಚಾಮರಾಜನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು…

1 hour ago

ಉಡುಪಿ : ಎಸ್‌ಐಆರ್ ಹೆಸರಿನಲ್ಲಿ ಅವರ ಮತದಾನದ ಹಕ್ಕನ್ನು ಕಸಿಯುವ ಕೆಲಸವಾಗುತ್ತಿದೆ :ವಿನಯ ಕುಮಾರ್ ಸೊರಕೆ ಆರೋಪ – vishwanews24

ಉಡುಪಿ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಜಿಲ್ಲೆಯ ಮನೆಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ:…

1 hour ago

ಆರ್‌ಎಸ್‌ಎಸ್​ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – vishwanews24

ಆರ್‌ಎಸ್‌ಎಸ್​ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…

19 hours ago

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ – vishwanews24

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…

20 hours ago

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…

20 hours ago