Featured

ಪಾದೂರು ತೈಲಾಗಾರ 2ನೇ ಹಂತ : ಸಂತ್ರಸ್ಥರಿಗೆ ದಬ್ಬಾಳಿಕೆ – ಮೋಸ : ದೇವಿಪ್ರಸಾದ್ ಶೆಟ್ಟಿ ಆರೋಪ ,ಪ್ರಧಾನಮಂತ್ರಿಯವರಿಗೆ  ಪತ್ರ -Vishwanews24

ಪಾದೂರು ತೈಲಾಗಾರ 2ನೇ ಹಂತ :

ಸಂತ್ರಸ್ಥರಿಗೆ ದಬ್ಬಾಳಿಕೆ – ಮೋಸ : ದೇವಿಪ್ರಸಾದ್ ಶೆಟ್ಟಿ ಆರೋಪ ,ಪ್ರಧಾನಮಂತ್ರಿಯವರಿಗೆ  ಪತ್ರ -Vishwanews24

ಪಾದೂರು ಕಚ್ಚಾ ತೈಲ ಶೇಖರಣಾ ಘಟಕದ 2ನೇ ಹಂತದ ವಿಸ್ತರಣೆಯ ಹಿಂದೆ ಬಾರೀ ಭ್ರಷ್ಟಾಚಾರವಿದ್ದು ಸಂಸ್ಥೆಯ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ಸಂತ್ರಸ್ಥರನ್ನು ಹಾದಿ ತಪ್ಪಿಸಿ ಮೋಸಗೊಳಿಸುತ್ತಿದ್ದಾರೆ. ಇದಕ್ಕಾಗಿಯೇ ಕದ್ದು ಮುಚ್ಚಿ ಸಂತ್ರಸ್ಥರ ಸಭೆ ನಡೆಸಲಾಗಿದೆಂದು ಕಾಂಗ್ರೆಸ್ ಮುಖಂಡ ಸಾಮಾಜಿಕ ಹೋರಾಟಗಾರರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಆರೋಪಿಸಿದ್ದಾರೆ.

ದೇಶದ ಭದ್ರತೆಗೆಂದು ಹುಟ್ಟಿಕೊಂಡ ತೈಲ ಶೇಖರಣಾ ಘಟಕ ಸ್ಥಾಪನೆಗೆ ಸ್ಥಳೀಯ ನಿರ್ವಸತಿಗರ, ರೈತರ ಕೊಡುಗೆ ಅಪಾರವಿದೆ. ನಮ್ಮ ಜನರ ಉದಾರತೆಯ ಲಾಭ ಪಡೆದ ಅಧಿಕಾರಿಗಳು ಸಂಸ್ಥೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಸುತ್ತಿರುವುದು ಮಾಹಿತಿ ಹಕ್ಕಿನ ಮೂಲಕ ದಾಖಲೆಗಳಿಂದ ದೃಢಪಟ್ಟಿದೆ. ಭೂಮಿ ಕಳೆದುಕೊಂಡವರ ಹಾಗೂ ನೌಕರರ ಮತ್ತು ಘಟಕದ ವಿಸ್ತರಣೆ ಹೆಸರಿನಲ್ಲಿ ಕೋಟ್ಯಾಂತರ ಲೂಟಿಯಾಗಿದೆ. ಸ್ಥಳೀಯ ನೌಕರರನ್ನು ಜೀತದಾಳುಗಳಂತೆ ದುಡಿಸುತ್ತಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಪ್ರಧಾನ ಮಂತ್ರಿಯವರಿಗೆ ಹಾಗೂ ಗೃಹಸಚಿವರಿಗೆ ವಿವರವಾಗಿ ಮಾಹಿತಿ ಪತ್ರದ ಮೂಲಕ ಒತ್ತಾಯಿಸಿರುವುದಾಗಿ ಶೆಟ್ಟಿ ತಿಳಿಸಿದ್ದಾರೆ.

ಸಂತ್ರಸ್ಥರಿಗೆ ಮೋಸ : ಪ್ರಥಮ ಹಂತದಲ್ಲಿ ಯೋಜನೆ ಬೇಡವೆಂದು ಹೋರಾಟ ಮಾಡಿದವರು ಇದೀಗ ವಿಸ್ತರಣೆಗೆ ಸಹಕರಿಸುತ್ತಿದ್ದಾರೆ. ನಿರ್ವಸತಿಗರಿಗೆ ಉದ್ಯೋಗಾವಕಾಶ ನೀಡಿಲ್ಲ. ನಿರ್ವಸತಿಗರ ಕಾಲೊನಿ ರಚಿಸಿಲ್ಲ. ನಿರ್ವಸತಿಗರಿಗೆ ಆರೋಗ್ಯ ವಿಮೆ ನೀಡಿಲ್ಲ. ಸ್ಥಳೀಯ ಮತ್ತು ಸುತ್ತಮುತ್ತಲಿನ ಪಂಚಾಯತ್ ಗಳಿಗೆ ಸಿ.ಎಸ್.ಆರ್. ಯೋಜನೆ ರೂಪಿಸಿಲ್ಲ. ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. ಘಟಕದ ಸುತ್ತ ಹಸಿರು ವನ ರಚಿಸಿಲ್ಲ. 2ನೇ ಹಂತದ ಯೋಜನೆ ಉದ್ದೇಶ ಹಾಗೂ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಶೆಟ್ಟಿ ತಿಳಿಸಿದ್ದಾರೆ.

2ನೇ ಹಂತದ ಸಂತ್ರಸ್ತರಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಲಿ : 2ನೇ ಹಂತದ ವಿಸ್ತರಣೆಯ ಹಿಂದೆ ದುರುದ್ದೇಶವಿದೆ. ಘಟಕವನ್ನು ಅದಾನಿಯವರಿಗೆ ಮಾರಾಟ ಮಾಡುವ ಸಂಚು ನಡೆದಿದೆ. ಅವರ ಷರತ್ತಿನಂತೆ ಸಂಪೂರ್ಣ ವಿಸ್ತರಣೆಯಾದ ನಂತರ ಖರೀದಿಸುವ ಸೂಚನೆ ಇದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಸಂತ್ರಸ್ತರು ಎಚ್ಚರದಿಂದಿರಬೇಕು. ಸಂತ್ರಸ್ತರಿಗೆ ಮಾರುಕಟ್ಟೆ ಧಾರಣೆಯ 3 ಪಟ್ಟು ಪರಿಹಾರ ನೀಡುವುದು. ಕಡ್ಡಾಯ ಉದ್ಯೋಗ ಒದಗಿಸುವುದು. ಹೈಟೆಕ್ ನಿರ್ವಸತಿಗರ ಕಾಲೊನಿ ನಿರ್ಮಿಸುವುದು. ಜೀವನ ಪೂರ್ತಿ ಆರೋಗ್ಯದ ವೆಚ್ಚ ಭರಿಸುವುದು. ನಿರ್ವಸತಿಗರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಒದಗಿಸುವುದು. ಸಿ.ಎಸ್. ಆರ್ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ನಮ್ಮ ಪ್ರಮುಖ ಬೇಡಿಕೆ ಈ ಬಗ್ಗೆ ಸುತ್ತಮುತ್ತಲಿನ ಎಂಟು ಗ್ರಾಮಗಳ ಭಾದಿತ ಜನರನ್ನು ಕರೆದು ಜಿಲ್ಲಾಧಿಕಾರಿಗಳು ಕೇಂದ್ರ ಸರಕಾರದ ನಿಯಮದಂತೆ ಸಾರ್ವಜನಿಕರ ಅಹವಾಲುಗಳ ಬಗ್ಗೆ ಚರ್ಚಿಸಲು ಸಭೆ ಕರೆಯಬೇಕು. ಜನರನ್ನು ಕತ್ತಲಲ್ಲಿಟ್ಟು ಯೋಜನೆ ವಿಸ್ತರಿಸಿದರೆ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವೆಂದು ಶೆಟ್ಟಿ ತಿಳಿಸಿದ್ದಾರೆ.

ಸಂಘಟಿತ ಹೋರಾಟದಿಂದ ನ್ಯಾಯ ದೊರಕಿದೆ : ಜನಜಾಗೃತಿ ಸಮಿತಿ ಹುಟ್ಟಿರುವುದು ಯೋಜನೆಯನ್ನು ಸಂಪೂರ್ಣ ವಿರೋಧಿಸಲು ನಾವು ಕೂಡಾ ಇದರ ಪದಾಧಿಕಾರಿಗಳು ಆದರೆ ಇದೀಗ ಉದ್ದೇಶ ಬದಲಾಗಿದೆ. ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದ ಜನರಿಗೆ ನ್ಯಾಯ ಸಿಗುತ್ತಿಲ್ಲ. ನಮ್ಮ ಹೋರಾಟ ನಿರಂತರವಾಗಿರುತ್ತದೆ. ಯೋಜನೆಯಿಂದ ಅನ್ಯಾಯವಾದಾಗ ದೊಡ್ಡ ಮಟ್ಟದ ಹೋರಾಟ ನಡೆಸಿ ಯಶಸ್ವಿಯಾಗಿದ್ದೆವು. ಹೋರಾಟ ರಾಜಕೀಯ ರಹಿತವಾಗಿತ್ತು. 11 ಗ್ರಾಮಗಳಲ್ಲಿ ಪೈಪುಲೈನ್ ಹಾದು ಹೋಗುವ ಸಂದರ್ಭದಲ್ಲಿ ಸಂಘಟಿತ ಹೋರಾಟದ ಫಲವಾಗಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರ ಸಹಕಾರದಿಂದ 900 ರೂಪಾಯಿ ಇದ್ದ ಪರಿಹಾರ ಮಾರುಕಟ್ಟೆಯ ಧಾರಣೆಯ ಬೆಲೆ ನೀಡುವಂತೆ ಒತ್ತಾಯಿಸಿ ದೇಶದಲ್ಲಿಯೇ ಅತೀ ಹೆಚ್ಚು ಪರಿಹಾರ ಒದಗಿಸಿದ್ದೇವೆ. ಬಂಡೆ ಸ್ಫೋಟದಿಂದ ಬಿರುಕುಬಿಟ್ಟ ಮನೆಗಳಿಗೆ ಅತೀ ಹೆಚ್ಚು ಪರಿಹಾರ ಒದಗಿಸಲು ಸಾಧ್ಯವಾಗಿದೆ. ನಿರ್ವಸತಿಗರಿಗೆ ನ್ಯಾಯ ಒದಗಿಸುವ ಅವಕಾಶವಾಗಿದೆ. ಆದರೆ ಇದೀಗ ಕಂಪೆನಿಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ನಿರ್ವಸತಿಗರನ್ನು ಭಯಭೀತರಾಗಿ ಮಾಡಿ ದಿಕ್ಕು ತಪ್ಪಿಸಿ ಭಾರೀ ಮೋಸ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಇದರ ಬಗ್ಗೆ ಜನ ಜಾಗೃತರಾಗಬೇಕೆಂದು ಶೆಟ್ಟಿ ಒತ್ತಾಯಿಸಿದ್ದಾರೆ. ನಮ್ಮ ನಾಯಕರೊಂದಿಗೆ ಚರ್ಚಿಸಿ ಸ್ಥಳೀಯ ಜನರ ವಿಶ್ವಾಸ ಪಡೆದು ಅನ್ಯಾಯದ ವಿರುದ್ಧ ಹೋರಾಟದ ರೂಪುರೇಶೆ ಸಿದ್ಧಪಡಿಸುವುದಾಗಿ ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

 

Vishwa News 24

Recent Posts

ಉಡುಪಿ: ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ -vishwanews24

ಉಡುಪಿ: ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಉತ್ತರಾಖಂಡದಲ್ಲಿ ಮತ್ತೊಬ್ಬ ಆರೋಪಿ ಬಂಧನ ಉಡುಪಿ : ಕಾಪು ಜಿಲ್ಲೆಯ ಮುದರಂಗಡಿಯ ಸೇಂಟ್…

2 hours ago

ಬ್ರಹ್ಮಾವರ: ಖಾಸಗಿ ಬಸ್ ಬೆಂಕಿಗಾಹುತಿ ; ಅದೃಷ್ಟವಶಾತ್ ಪ್ರಯಾಣಿಕರು ಪಾರು -vishwanews24

ಬ್ರಹ್ಮಾವರ: ಖಾಸಗಿ ಬಸ್ ಬೆಂಕಿಗಾಹುತಿ ; ಅದೃಷ್ಟವಶಾತ್ ಏಳು ಪ್ರಯಾಣಿಕರು ಪಾರು ಉಡುಪಿ: ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು…

11 hours ago

ಸುರತ್ಕಲ್ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಆರೋಪ: ವ್ಯಕ್ತಿಯ ಬಂಧನ -vishwanews24

ಸುರತ್ಕಲ್ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಆರೋಪ: ವ್ಯಕ್ತಿಯ ಬಂಧನ 1.206 ಕೆ.ಜಿ. ಗಾಂಜಾ, KTM ಮೋಟಾರ್ ಸೈಕಲ್…

12 hours ago

ಸಕಲೇಶಪುರ–ಸುಬ್ರಹ್ಮಣ್ಯ  ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ -vishwanews24

ಸಕಲೇಶಪುರ–ಸುಬ್ರಹ್ಮಣ್ಯ  ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ ಕಡಬ : ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ನಡೆದ…

12 hours ago

ಉಡುಪಿ : ಆ. 20 ರಂದು ನೇರ ಸಂದರ್ಶನ -vishwanews24

ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…

1 day ago

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ -vishwanews24

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…

1 day ago