ಉಡುಪಿ: ಪಾಸಿಟಿವ್ ಬಂದ ವ್ಯಕ್ತಿಗಳು ಸರಿಯಾದ ಮಾಹಿತಿ ನೀಡದಿದ್ದರೆ ಅಥವಾ ವಾಸ್ತವತೆ ಮುಚ್ಚಿಟ್ಟರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಉಡುಪಿ ಡಿ.ಸಿ. ಮತ್ತೊಮ್ಮೆ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಜಿಲ್ಲೆಯ ಜನತೆಗೆ ಮನವಿ ಮಾಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್ , ಪಾಸಿಟಿವ್ ಬಂದವರಿಗೆ ಕಂಟ್ರೋಲ್ ರೂಂನಿಂದ ಫೋನ್ ಮಾಡುತ್ತೇವೆ. ಆ ಸಂದರ್ಭದಲ್ಲಿ ಕೆಲವರು ಸರಿಯಾಗಿ ಸ್ಪಂದಿಸದಿರುವುದು ಕಂಡುಬಂದಿದೆ. ಮಾಹಿತಿ ನೀಡದೇ ಇರುವುದು ಅಥವಾ ಆರೋಗ್ಯ ಕಾರ್ಯಕರ್ತರ ಜೊತೆ ಉಡಾಫೆ ವರ್ತನೆ ತೋರುತ್ತಾರೆ.
ಈ ರೀತಿ ಮಾಡಿದರೆ ಕಾಯಿಲೆ ನಿಯಂತ್ರಣ ಕಷ್ಟವಾಗುತ್ತದೆ. ಹಾಗಾಗಿ ಜಿಲ್ಲಾಡಳಿತದ ಜೊತೆ ಸೂಕ್ತ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಇನ್ನು ಪಾಸಿಟಿವ್ ಬಂದ ಕೆಲವು ವ್ಯಕ್ತಿಗಳು ಪ್ರೈಮರಿ ಸಂಪರ್ಕದ ಬಗ್ಗೆ ಸರಿಯಾದ, ಖಚಿತ ಮಾಹಿತಿ ನೀಡುತ್ತಿಲ್ಲ.
ನಿಮಗೆ ಗೊತ್ತಿರಲಿ, ಪ್ರೈಮರಿ ಕಾಂಟಾಕ್ಟ್ ಇರುವ ಶೇ.50 ಜನರಿಗೆ ಪಾಸಿಟಿವ್ ಬರುತ್ತದೆ. ಆದರೆ ಮಾಹಿತಿ ಮುಚ್ಚಿಟ್ಟರೆ ಅವರು ಇತರರಿಗೂ ಕಾಯಿಲೆ ಹರಡಿಸುತ್ತಾರೆ. ಹೀಗಾಗಿ ಮಾಹಿತಿ ನೀಡದವರ ಅಥವಾ ವಾಸ್ತವ ಅಂಶ ಮುಚ್ಚಿಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…
ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…
ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…