Featured

ಪಿಂಕ್ ವಾಟ್ಸ್​ಆ್ಯಪ್ – ತಪ್ಪಿಯೂ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಎಚ್ಚರ.!

ಪಿಂಕ್ ವಾಟ್ಸ್​ಆ್ಯಪ್ – ತಪ್ಪಿಯೂ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಎಚ್ಚರ.!

ನೀವು ಈಗಾಗಲೇ ಪಿಂಕ್ ವಾಟ್ಸ್​ಆ್ಯಪ್ ಡೌನ್‌ಲೋಡ್ ಮಾಡಿದ್ದೀರ?

ಮುಂಬೈ: ಪಿಂಕ್ ವಾಟ್ಸ್​ಆ್ಯಪ್ ಸ್ಕ್ಯಾಮ್‌ ಬಗ್ಗೆ ಬಳಕೆದಾರರು ಎಚ್ಚರಿಕೆ ವಹಿಸಬೇಕೆಂದು ತಜ್ಞರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಪಿಂಕ್ ವಾಟ್ಸ್​ಆ್ಯಪ್ ಮತ್ತೆ ಕಾಣಿಸಿಕೊಂಡಿದ್ದು, ಕೆಲವು ದಿನಗಳಿಂದ ಅನೇಕರಿಗೆ ವಾಟ್ಸ್​ಆ್ಯಪ್ ಅಪ್‌ಡೇಟ್‌ ಹೆಸರಿನಲ್ಲಿ ಫಾರ್ವರ್ಡ್‌ ಮೆಸೇಜ್‌ ಹರಿದಾಡುತ್ತಿದೆ.

ಇದು ವಾಟ್ಸ್​ಆ್ಯಪ್​ನ ಹೊಸ ಆವೃತ್ತಿ, ಇದರಲ್ಲಿ ಅನೇಕ ವಿಶೇಷ ಫೀಚರ್​ಗಳಿವೆಕೂಡಲೇ ಡೌನ್​ಲೋಡ್ ಮಾಡಿ” ಎಂಬ ಮೆಸೇಜ್ ಕೂಡ ಇರುತ್ತದೆ. ಇದನ್ನು ನಂಬಿ ಕ್ಲಿಕ್ ಮಾಡಿದಾಗ ಇದರಲಿದ್ದ ಇನ್ಸ್‌ಸ್ಟಾಲೇಷನ್‌ ಲಿಂಕ್‌ ಇದ್ದು, ಅದನ್ನು ಒತ್ತಿದ ಕೂಡಲೇ ವೈರಸ್ ಕಾಣಿಸಿಕೊಂಡು ಹ್ಯಾಕ್ ಆಗಲಿದೆ.

ಬಳಕೆದಾರರ ಒಟಿಪಿ, ಸಂಪರ್ಕ ಸಂಖ್ಯೆ, ಫೋಟೊ, ಬ್ಯಂಕ್‌ ಮಾಹಿತಿ ಸೇರಿದಂತೆ ಮೊಬೈಲ್‌ನಲ್ಲಿರುವ ಎಲ್ಲ ಡೇಟಾ ಹ್ಯಾಕ್‌ ಆಗಲಿದೆ. ಹೀಗಾಗಿ, ಯೂಸರ್‌ ವಾಟ್ಸಾಪ್‌ ಲಿಂಕ್‌ ಸ್ಕ್ಯಾಮ್‌ ಬಗ್ಗೆ ಜಾಗೃತರಾಗಿರಬೇಕೆಂದು ತಜ್ಞರು ಎಚ್ಚರಿಸಿದ್ದಾರೆ.

ನೀವು ಈಗಾಗಲೇ ಪಿಂಕ್ ವಾಟ್ಸ್​ಆ್ಯಪ್ ಡೌನ್‌ಲೋಡ್ ಮಾಡಿದ್ದೀರ?:

ನೀವು ಈಗಾಗಲೇ ಪಿಂಕ್ ವಾಟ್ಸ್​ಆ್ಯಪ್ ಡೌನ್‌ಲೋಡ್ ಮಾಡಿದ್ದರೆ ಅದನ್ನು ತಕ್ಷಣವೇ ಅನ್​ಇನ್​ಸ್ಟಾಲ್ ಮಾಡುವಂತೆ ಮುಂಬೈ ಪೊಲೀಸರು ಬಳಕೆದಾರರನ್ನು ಒತ್ತಾಯಿಸಿದ್ದಾರೆ. ಅಧಿಕೃತ ಆ್ಯಪ್​ ಸ್ಟೋರ್ ಆಗಿರುವ ಗೂಗಲ್​ ಪ್ಲೇ ಸ್ಟೋರ್ ಅಥವಾ ಆ್ಯಪಲ್​ ಆ್ಯಪ್​ಸ್ಟೋರ್​ಗಳಲ್ಲಿ ಇರುವ ಆ್ಯಪ್​ಗಳನ್ನು ಮಾತ್ರ ಡೌನ್​ಲೋಡ್ ಮಾಡಿಕೊಳ್ಳಬೇಕು. ಉಳಿದಂತೆ ಯಾವುದೇ ಲಿಂಕ್ ಮೂಲಕ ಹೋಗಿ ಆ್ಯಪ್​ಗಳನ್ನು ಡೌನ್​​ಲೋಡ್ ಮಾಡಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಪಿಂಕ್ ವಾಟ್ಸ್​ಆ್ಯಪ್ ಹಗರಣ ಎಂದರೇನು?:

ಮುಂಬೈ ಪೊಲೀಸರ ಪ್ರಕಾರ, ”ಪಿಂಕ್ ವಾಟ್ಸ್​ಆ್ಯಪ್​ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳಿವೆ ಎಂಬ ಸಂದೇಶಗಳೊಂದಿಗೆ ನಕಲಿ ಲಿಂಕ್​ವೊಂದು ವಾಟ್ಸ್​ಆ್ಯಪ್​ಗೆ ಬರುತ್ತಿದೆ. ಇದು ಹೆಚ್ಚಾಗಿ ಗ್ರೂಪ್​ಗಳಲ್ಲಿ ಬರುತ್ತಿದ್ದು, ಸಹಜವೆಂಬಂತೇ ಜನರು ಕ್ಲಿಕ್​ ಮಾಡಿ ಪೇಚಿಗೆ ಸಿಲುಕುತ್ತಿದ್ದಾರೆ. ಇದು ಫಿಶಿಂಗ್ ಲಿಂಕ್ ಆಗಿದ್ದು, ಬಳಕೆದಾರರು ತಮ್ಮ ಮೊಬೈಲ್ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಮೊಬೈಲ್ ಕೂಡ ಹ್ಯಾಕ್ ಆಗುತ್ತಿದೆ. ಇದರಿಂದಾಗಿ ಎಲ್ಲಾ ಮೊಬೈಲ್ ಡೇಟಾ ಹ್ಯಾಕರ್​ಗಳ ಕೈ ಸೇರುತ್ತಿದೆ. ಇದಕ್ಕೆ ನೀವು ಯಾವುದೇ ರೀತಿಯ OTP ಅನ್ನು ಪಡೆಯುವುದಿಲ್ಲ. ವಂಚಕರು ಈ ಮೂಲಕ ಫೋನ್ ಡೇಟಾವನ್ನು ಸುಲಭವಾಗಿ ಪ್ರವೇಶಿಸಬಹುದು. ನಂತರ ನಿಮ್ಮ ವೈಯಕ್ತಿಕ ವಿಡಿಯೋ, ಫೋಟೋ, ಬ್ಯಾಂಕ್ ಖಾತೆ ಎಲ್ಲ ಮಾಹಿತಿ ದೋಚುತ್ತಾರೆ,” ಎಂದು ಹೇಳಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

2 days ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

2 days ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

2 days ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

2 days ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

2 days ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

2 days ago