ಕೇಂದ್ರ ಸರ್ಕಾರದ ಪಿಎಂ ಕುಸುಮ ಯೋಜನೆಯಡಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಳ್ಳಲು ಅರ್ಹ ರೈತರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಒದಗಿಸಬೇಕಾದ ವಿವರಗಳನ್ನು ಕೆ.ಆರ್.ಇ.ಡಿ.ಎಲ್. ಅಧಿಕೃತ ಜಾಲತಾಣ ವೆಬ್‍ಸೈಟ್ www.kredl.karnataka.gov.in ನಲ್ಲಿ ನೀಡಲಾಗಿದೆ.
ಮಾನದಂಡಗಳು: ರೈತರ ಜಮೀನಿನಲ್ಲಿ ಬಾವಿಯನ್ನು ಕೊರೆಸಿ ಸಿದ್ದವಿರಬೇಕು. ಹೊಸ ಕೃಷಿ ಪಂಪ್‍ಸೆಟ್‍ಗಳಿಗೆ ಮಾತ್ರ ಯೋಜನೆಯು ಅನ್ವಯಿಸುತ್ತದೆ (ಹಾಲಿ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಪಂಪ್‍ಸೆಟ್‍ಗಳು ಅರ್ಹವಿರುವುದಿಲ್ಲ). ಅರ್ಜಿದಾರರು ಒಂದು ಸೌರ ಪಂಪ್‍ಸೆಟ್‍ಗೆ ಮಾತ್ರ ಅರ್ಜಿ ಸಲ್ಲಿಸುವುದು. ಈಗಾಗಲೇ ಇತರೆ ಅನುದಾನಿತ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್‍ಸೆಟ್ ಪಡೆದಿದ್ದರೆ ಅಂತಹ ಅರ್ಜಿದಾರರು ಅರ್ಹರಿರುವುದಿಲ್ಲ. ಅರ್ಜಿದಾರರು ಅವರ ವಂತಿಗೆಯನ್ನು ಡಿ.ಡಿ ಮೂಲಕವೇ ಸಲ್ಲಿಸುವುದು. ಚೆಕ್ ಅಥವಾ ಇತರೆ ಆನ್‍ಲೈನ್ ಪೇಮೆಂಟ್ ಮೂಲಕ ಅರ್ಜಿದಾರರ ವಂತಿಗೆ ಹಣ ಸ್ವೀಕರಿಸಲಾಗುವುದಿಲ್ಲ. ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಸೌರಚಾಲಿತ ಕೃಷಿ ಪಂಪ್‍ಸೆಟ್‍ಗಳನ್ನು ಅಳವಡಿಸಲು ಆದ್ಯತೆ ನೀಡಲಾಗುವುದು. ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ.5ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಸಾಮಾನ್ಯ ಹಾಗೂ ಪ.ಜಾ ಮತ್ತು ಪ.ಪಂ ವರ್ಗದಲ್ಲಿ ಸೂಚಿಸಲಾಗಿರುವ ವಂತಿಗೆ ಮೊತ್ತವನ್ನು ಆಯಾ ವಿಶೇಷಚೇತನ ವರ್ಗದವರ ವಂತಿಗೆಯನ್ನು ಪಾವತಿಸಲಾಗುವುದು. ಕೆ.ಆರ್.ಇ.ಡಿ.ಎಲ್ ಅಧಿಕೃತ ಜಾಲತಾಣ www.kredl.karnataka.gov.in ನಲ್ಲಿ ಮಾತ್ರ ಲಭ್ಯವಾಗುವ ಲಿಂಕ್ ಮೂಲಕವೇ ನೊಂದಾಯಿಸಿ ಕೊಳ್ಳಬಹುದಾಗಿದೆ.
ಅರ್ಜಿದಾರರು ಪಾವತಿಸಬೇಕಾದ ವಂತಿಗೆಗಳು: 3 ಹೆಚ್.ಪಿ ಸಾಮಥ್ರ್ಯದ ಪಂಪ್‍ಸೆಟ್‍ಗೆ ಸಾಮಾನ್ಯ ವರ್ಗದವರು ಘಟಕದ ವೆಚ್ಚ ಶೇ.40ರಷ್ಟು 71,422 ರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಘಟಕದ ವೆಚ್ಚ ಶೇ.20ರಷ್ಟು 35,711ರೂ. ಪಾವತಿಸಬೇಕು. 5 ಹೆಚ್‍ಪಿಗೆ ಸಾಮಾನ್ಯ ವರ್ಗದವರು ರೂ.1,01,056, ಪ.ಜಾತಿ ಮತ್ತು ಪ.ಪಂಗಡದವರು ರೂ.50,528, 7.5 ಹೆಚ್‍ಪಿಗೆ ಸಾಮಾನ್ಯ ವರ್ಗದವರು ರೂ.1,45,710, ಪ.ಜಾತಿ ಮತ್ತು ಪ.ಪಂಗಡದವರು ರೂ.72856, 10ಹೆಚ್‍ಪಿಗೆ ಸಾಮಾನ್ಯ ವರ್ಗದವರು ರೂ.2,50,292, ಪ.ಜಾತಿ ಮತ್ತು ಪ.ಪಂಗಡದವರು ರೂ.1,77,438 ಪಾವತಿಸಬೇಕು.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.80ರಷ್ಟು ಸಬ್ಸಿಡಿ ಹಾಗೂ ಇತರೆ ವರ್ಗಗಳ ರೈತ ಬಾಂಧವರಿಗೆ ಶೇ.60ರಷ್ಟು ಸಬ್ಸಿಡಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಕೆ.ಆರ್.ಇ.ಡಿ.ಎಲ್. ಪ್ರಾದೇಶಿಕ ಕಚೇರಿ ಅಥವಾ ಮೊ.9986025252, 9742310108 ಗೆ ಸಂಪರ್ಕಿಸಬಹುದು.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…