ಉಡುಪಿ: ಶ್ರೀಕೃಷ್ಣನೂರು ಉಡುಪಿಯು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರ ನಾಲ್ಕನೇ ಪರ್ಯಾಯ ಉತ್ಸವಕ್ಕೆ ಸಜ್ಜಾಗಿದೆ.
ಶ್ರೀಕೃಷ್ಣ ಮಠದ ರಥಿಬೀದಿ ಸುತ್ತ ಮುತ್ತಲಿನ ಪರಿಸರವಲ್ಲದೆ ನಗರದ ಬಹುತೇಕ ಪ್ರಮುಖ ಸ್ಥಳಗಳು ಹಾಗೂ ಉಡುಪಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳೆಲ್ಲ ವಿದ್ಯುತ್ ದೀಪಗಳಿಂದ ಅಲಂಕೃತವಾಗಿವೆ. ಬುಧವಾರ ಮಧ್ಯರಾತ್ರಿಯ ಬಳಿಕ ಕಾಪುವಿನ ದಂಡತೀರ್ಥದಲ್ಲಿ ಮಿಂದು ಬರುವ ಶ್ರೀಗಳ ಸ್ವಾಗತಕ್ಕೆ ದಂಡತೀರ್ಥ ಮಠದಿಂದ ಉಡುಪಿ ವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ವಿದ್ಯುದ್ದೀಪಗಳ ಅಲಂಕಾರವನ್ನು ಅಳವಡಿಸಲಾಗಿದೆ. ಇದು ಈ ಬಾರಿಯ ವಿಶೇಷ.
ನಗರದ ವಿವಿಧೆಡೆ ಕೇಸರಿ ಬಾವುಟಗಳು ರಾರಾಜಿಸತೊಡಗಿವೆ. ಪರ್ಯಾಯ ಮೆರವಣಿಗೆ ನಡೆಯುವ ಜೋಡುಕಟ್ಟೆ ಯಿಂದ ರಥಬೀದಿವರೆಗೆ ವಿಶೇಷ ಅಲಂಕಾರಗಳು, ವಿವಿಧ ಸ್ವಾಗತ ಕಮಾನುಗಳನ್ನು ರಚಿಸಲಾಗಿದೆ. ಒಟ್ಟಿ ನಲ್ಲಿ ಇಡೀ ನಗರವೇ ಸಂಭ್ರಮವನ್ನು ಮೈದುಂಬಿಕೊಂಡಿದೆ.
252ನೆಯ ಪರ್ಯಾಯ ಅವಧಿ ಯ ಶ್ರೀಕೃಷ್ಣನ ಪೂಜೆಗೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಅಣಿಯಾಗುತ್ತಿದ್ದಾರೆ. ಜ. 18 ರ ಬೆಳಗ್ಗೆ ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್ ನಡೆಯಲಿದ್ದು, ಜ. 17ರ ಬುಧವಾರ ಬೆಳಗ್ಗೆಯಿಂದಲೇ ಭಕ್ತರು ತಂಡೋ ಪತಂಡವಾಗಿ ನಗರಕ್ಕೆ ಆಗಮಿಸುವರು. ಹಾಗಾಗಿ ಜ. 17ರಿಂದ ತೊಡಗಿ 18ರ ಬೆಳಗಿನ ಜಾವದವರೆಗೂ ಉಡುಪಿ ಎಚ್ಚೆತ್ತಿರಲಿದೆ.
ತಮ್ಮ ಪರ್ಯಾಯ ಪೂರ್ವ ಸಂಚಾರವನ್ನು ಮುಗಿಸಿ ಪರ್ಯಾಯ ಪೀಠ ವನ್ನೇ ರುವ ಶ್ರೀ ಸುಗುಣೇಂದ್ರ ತೀರ್ಥರು ಜ. 8 ರಂದು ಪುರ ಪ್ರವೇಶ ಮಾಡಿದರು. ಪೌರ ಸಮ್ಮಾನದ ಮೂಲಕ ಅವರನ್ನು ನಾಗರಿಕರು, ಶ್ರೀಕೃಷ್ಣ ಭಕ್ತರು ಬರ ಮಾಡಿ ಕೊಂಡಿ ದ್ದಾರೆ. ಈಗಾಗಲೇ ರಥಬೀದಿ, ಶ್ರೀಕೃಷ್ಣ ಮಠ, ಪರ್ಯಾಯ ಮಠಗಳು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ.
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…
ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…
ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್ ವಾಹನ ಡಿಕ್ಕಿ : ಐವರು ದುರ್ಮರಣ ಕೊಪ್ಪಳ: ಗೂಡ್ಸ್ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…
ಮಲ್ಪೆ ಪ್ರಕರಣ: ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಬೆಂಗಳೂರು: ಕಳೆದ ವರ್ಷ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ…
ರಾಮ ಮಂದಿರದಲ್ಲಿ ಅವ್ಯವಹಾರದಂತಹ ಘೋರ ಅಪಚಾರಗಳು ನಡೆಯಬಾರದಿತ್ತು.. ಮಂದಿರದ ಅವ್ಯವಹಾರ ಆರೋಪಗಳು ಸತ್ಯವಾಗಿದ್ದರೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು : ಪೇಜಾವರ…