ಪುತ್ತೂರು : ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಜನವರಿ 22, 2024 ರಂದು ಭಗವಾನ್ ರಾಮನ ವಿಗ್ರಹದ “ಪ್ರಾಣ ಪ್ರತಿಷ್ಠಾ ಮಹೋತ್ಸವ” ನಡೆಯಲಿದ್ದು, ಇದಕ್ಕೆ ಸಿದ್ದತೆಗಳು ಭರದಿಂದ ಸಾಗಿದೆ. ಈ ನಡುವೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ದೇವತಾ ಕಾರ್ಯದಲ್ಲಿ ದೇಶದ ಎಲ್ಲಾ ಜನರನ್ನು ಸೇರಿಸಿಕೊಳ್ಳಲು ತೀರ್ಮಾನಿಸಿದ್ದು, ಅದರಂತೆ ಶ್ರೀರಾಮ ಜನ್ಮಭೂಮಿಯ ಆಮಂತ್ರಣ ಅಕ್ಷತೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ದೇಶದಲ್ಲಿರುವ ಪ್ರತಿಯೊಬ್ಬ ಹಿಂದೂವಿನ ಮನೆಗೂ ಶ್ರೀರಾಮನ ಆಮಂತ್ರಣ ಅಕ್ಷತೆಯನ್ನು ನೀಡಲಾಗುತ್ತದೆ.
ಅದರಂತೆ ಇಂದು ಪುತ್ತೂರಿಗೆ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ಆಮಂತ್ರಣ ಅಕ್ಷತೆ ಆಗಮಿಸಿದ್ದು, ನೂರಾರು ಜನರು ಅಕ್ಷತೆಯನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸ್ವಾಗತಿಸಿದರು. ಅಕ್ಷತೆ ಕುಂಭ-ಮೇಳ ಸ್ವಾಗತದೊಂದಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿದ್ದು, ಅಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಇರಿಸಿ ಅಕ್ಷತೆಗೆ ಪೂಜೆ ಸಲ್ಲಿಸಲಾಯಿತು.
ನವಂಬರ್ 30 ರ ತನಕ ದೇವಸ್ಥಾನದ ಗರ್ಭಗುಡಿಯಲ್ಲೇ ಇರಲಿರುವ ಅಕ್ಷತೆ, ಬಳಿಕ ನವೆಂಬರ್ 30 ರಂದು ರಾಮಜನ್ಮ ಭೂಮಿ ಕ್ಷೇತ್ರ ಟ್ರಸ್ಟ್ ಸಮಿತಿಯ ತಾಲೂಕು ಘಟಕದ ಸಭೆ ನಡೆಯಲಿದೆ. ಆ ಸಭೆಯಲ್ಲಿ ತಾಲೂಕು ಘಟಕ ಮತ್ತು ಗ್ರಾಮ ಘಟಕಗಳಿಗೆ ಅಕ್ಷತೆಯ ಹಸ್ತಾಂತರ ಮಾಡಲಾಗುವುದು ಬಳಿಕ ಜನವರಿ 1 ರ ತನಕ ಆಯಾಯ ಗ್ರಾಮದ ದೈವ ಮತ್ತು ದೇವಸ್ಥಾನದಲ್ಲಿ ಇರಲಿದೆ ಅಕ್ಷತೆ, ಜನವರಿ 1 ರಿಂದ 15 ರಿಂದ ಪ್ರತೀ ಹಿಂದೂ ಮನೆಗಳಿಗೆ ಅಕ್ಷತೆ ಮುಟ್ಟಲಿದೆ.
ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ ಬೆಂಗಳೂರು: ರಾಜ್ಯ ರೈತ…
ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…
ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…
ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …