Featured

ಪುತ್ತೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೂವರು ಪ್ರಮುಖ ಆರೋಪಿಗಳ ಬಂಧನ – Vishwanews24

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೂವರು ಪ್ರಮುಖ ಆರೋಪಿಗಳ ಬಂಧನ –

Vishwanews24

ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ

ಇಂದು ಮಧ್ಯಾಹ್ನ ಖುಷಿಕೇಶ್‌ ಸೋನಾವಣೆ ಮಹತ್ವದ ಸುದ್ದಿಗೋಷ್ಠಿ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶಿಯಾಬ್, ಬಶೀರ್, ರಿಯಾಝ್ ಎಂದು ಗುರುತಿಸಲಾಗಿದೆ. ಈ ಮೂವರನ್ನು ವಿಶೇಷ ತನಿಖಾ ತಂಡ ಕೇರಳದಲ್ಲಿ ಬಂಧಿಸಿದ್ದು, ಈಗಾಗಲೇ ಸ್ಥಳ ಮಹಜರು ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ ಒಟ್ಟು 7 ಜನರನ್ನು ಬಂಧಿಸಿದ್ದರು. ಅವರು ಪ್ರವೀಣ್‌ ನೆಟ್ಟಾರು ಚಲನವಲನ, ಕೃತ್ಯಕ್ಕೆ ಬೈಕ್‌ ನೀಡಿದ್ದು ಸೇರಿದಂತೆ ಆರೋಪಿಗಳಿಗೆ ಆಶ್ರಯ ನೀಡಿದ್ದರ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.

ಇದೀಗ ಬಂಧಿತ ಮೂವರು ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಇವರೂ ಕೂಡಾ ಉಳಿದವರಂತೆ ಸ್ಥಳೀಯರೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಸದ್ಯ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದ್ದು, ನಿನ್ನೆ ಹಾಸನ, ಚಿಕ್ಕಮಗಳೂರು ಸೇರಿದಂತೆ ಒಟ್ಟು 6 ಜಿಲ್ಲೆಗಳ ಎಸ್ಪಿಗಳ ಸಭೆಯನ್ನು ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌ ನಡೆಸಿದ್ದರು.

ಈ ಬಗ್ಗೆ ಇಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಖುಷಿಕೇಶ್‌ ಸೋನಾವಣೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಜುಲೈ 26 ರಂದು ಪ್ರವೀಣ್ ನೆಟ್ಟಾರುವನ್ನು ಬರ್ಬರವಾಗಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು, ಇದೀಗ ಆರೋಪಿಗಳನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರು ಗೌಪ್ಯ ಸ್ಥಳದಲ್ಲಿರಿಸಿ ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ.

ಕುಂದಾಪುರ: ನಮ್ಮದು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಗಾಂಧೀಜಿಯವರ ಪೀಳಿಗೆ : ವಿನಯ್ ಕುಮಾರ್ ಸೊರಕೆ – Vishwanews24

Vishwa News 24

Recent Posts

ಆರ್‌ಎಸ್‌ಎಸ್​ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – vishwanews24

ಆರ್‌ಎಸ್‌ಎಸ್​ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…

2 hours ago

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ – vishwanews24

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…

3 hours ago

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…

3 hours ago

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ – vishwanews24

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ ಚೆನ್ನೈ: ಸಿಎಂ ಸಿ.…

3 hours ago

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ – vishwanews24

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…

7 hours ago

ಆರೆಸ್ಸೆಸ್ ಅನ್ನು ಹಿಂದೂ ಧರ್ಮಕ್ಕೆ ಹೋಲಿಸಿರುವುದು ಖಂಡನೀಯ: ಬಿ.ಕೆ. ಹರಿಪ್ರಸಾದ್ – vishwanews24

"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…

8 hours ago