Featured

ಪುತ್ತೂರು : ಬಿಜೆಪಿಗರು ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ, ಕಾಂಗ್ರೆಸ್‌ ಜನರಿಗೆ ಬದುಕು ನೀಡುತ್ತದೆ : ಬಿ.ಕೆ.ಹರಿಪ್ರಸಾದ್‌ – Vishwanews24

ಕರಾವಳಿಯನ್ನು ಕೊಲೆಗಡುಕರ ಜಿಲ್ಲೆಯಾಗಿ ಪರಿವರ್ತಿಸಿದ್ದೇ ಬಿಜೆಪಿಯ ದೊಡ್ಡ ಸಾಧನೆ..

ವಿದ್ಯೆ ಕಲಿಯಬೇಕಾದ ಮಕ್ಕಳ ಮನಸ್ಸಿನಲ್ಲಿ ಕೋಮುದ್ವೇಷ, ಮತೀಯಭಾವ ಬಿತ್ತಿದೆ..

ಪುತ್ತೂರಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಹರಿಪ್ರಸಾದ್

ಪುತ್ತೂರು: ”ಕಾಂಗ್ರೆಸ್‌ ಆಳ್ವಿಕೆಯಡಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸಾಕ್ಷರರ, ಬುದ್ಧಿವಂತರ, ಅಭಿವೃದ್ಧಿಶೀಲರ ಪ್ರದೇಶವಾಗಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿತ್ತು. ಇಂಥ ಸಂಪದ್ಭರಿತ ಜಿಲ್ಲೆಯನ್ನು ಕೊಲೆಗಡುಕರ ಜಿಲ್ಲೆಯಾಗಿ ಪರಿವರ್ತಿಸುವ ಮೂಲಕ ಬಿಜೆಪಿ ಕರಾವಳಿಯ ಅಭಿವೃದ್ಧಿಯ ರಥವನ್ನು ಶತಮಾನದಷ್ಟು ಹಿಂದಕ್ಕೆ ಕೊಡೊಯ್ದಿದೆ” ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ನಡದ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಕಾರ್ಯರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

”ಕರಾವಳಿಯು ಶಿಕ್ಷಣ, ಹೊಟೇಲ್‌ ಉದ್ಯಮ, ಕೈಗಾರಿಕೆ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದ ಪ್ರದೇಶ. ಕಾಂಗ್ರೆಸ್‌ ಸರಕಾರಗಳ ಅವಧಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಇಡೀ ರಾಜ್ಯದಲ್ಲೇ ಪ್ರತೀ ವರ್ಷ ಪ್ರಥಮ ಸ್ಥಾನ ಪಡೆಯುತ್ತಿದ್ದರು. ಯಾವಾಗ ಬಿಜೆಪಿ ಇಲ್ಲಿ ಪ್ರವರ್ಧಮಾನಕ್ಕೆ ಬರಲಾರಂಭಿಸಿತೋ ಅಂದಿನಿಂದ ಇಲ್ಲಿನ ಫಲಿತಾಂಶ ಕುಸಿಯುತ್ತಾ ಬಂದು, 18ನೇ ಸ್ಥಾನಕ್ಕೆ ಬರುವಂತಾಯಿತು.

ವಿದ್ಯೆ ಕಲಿಯಬೇಕಾದ ವಿದ್ಯಾರ್ಥಿಗಳ ಮನಸ್ಸಲ್ಲಿ ಕೋಮುದ್ವೇಷ, ಹಿಂಸಾ ಭಾವನೆ, ಮತೀಯವಾದ, ಪ್ರತಿಭಟನೆ ಇತ್ಯಾದಿಗಳನ್ನು ತುಂಬಿಸಿದ ಬಿಜೆಪಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಕಡಿಮೆಯಾಗಲು ಕಾರಣವಾಯಿತು. ಇದಲ್ಲದೆ ಬಿಜೆಪಿಯಿಂದಾಗಿ ಇಲ್ಲಿ ಕೊಲೆ, ಹಿಂಸೆ, ದೊಂಬಿ ಹೆಚ್ಚಳಗೊಂಡು ತರುಣರೇ ನೂರಾರು ಸಂಖ್ಯೆಯಲ್ಲಿ ಜೈಲಿಗೆ ಸೇರುವಂತಾಯಿತು. ಇದು ಕರಾವಳಿಗೆ ಬಿಜೆಪಿಯ ಕೊಡುಗೆ ಎಂದು ಅವರು ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನುಡಿದರು.

”ಬಿಜೆಪಿಗರು ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ಕಾಂಗ್ರೆಸ್‌ ಜನರಿಗೆ ಬದುಕು ನೀಡುತ್ತದೆ. ಅಭಿವೃದ್ಧಿ ಮುಂದಿಟ್ಟುಕೊಂಡರೆ ಕಾಂಗ್ರೆಸ್‌ ಸೋಲಿಸಲು ಸಾಧ್ಯವಿಲ್ಲಎಂಬುದು ಬಿಜೆಪಿಗೆ ಗೊತ್ತು. ಅದಕ್ಕಾಗಿ ಅದು ಜನರನ್ನು ಮತೀಯವಾಗಿ ಒಡೆದು ಭಾವನೆಗಳ ಬೀಜ ಬಿತ್ತುವ ಕೆಲಸ ಮಾಡುತ್ತದೆ. ಕಾಂಗ್ರೆಸ್‌ ನೀಡಲಿರುವ ಗೃಹಲಕ್ಷ್ಮೀ, ಗೃಹಜ್ಯೋತಿ ಮತ್ತು ಅನ್ನಭಾಗ್ಯಕ್ಕೆ ಹಣ ಎಲ್ಲಿಂದ ಹೊಂದಿಸುತ್ತದೆ ಎಂದು ಬಿಜೆಪಿ ಕೇಳುತ್ತಿದೆ. ಬಿಜೆಪಿ ಸರಕಾರ ಮಾಡುತ್ತಿರುವ 40 ಶೇ. ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ 126 ಲಕ್ಷ ಕೋಟಿ. ರೂ. ಸಿಗಲಿದೆ. ಇದೇ ಹಣದಿಂದ ನಾವು ಜನರಿಗೆ ಉಚಿತಗಳನ್ನು ನೀಡುತ್ತೇವೆ” ಎಂದು ಹರಿಪ್ರಸಾದ್‌ ಹೇಳಿದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿದರು. ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಪಕ್ಷದ ಪ್ರಮುಖರಾದ ದಿವ್ಯಪ್ರಭಾ ಚಿಲ್ತಡ್ಕ, ಅಶೋಕ್‌ ಕುಮಾರ್‌ ರೈ, ಕಾವು ಹೇಮನಾಥ ಶೆಟ್ಟಿ, ಕೃಪಾ ಅಮರ ಆಳ್ವಾ, ಸತೀಶ್‌ ಕುಮಾರ್‌ ಕೆಡೆಂಜಿ, ಎಂ.ಎಸ್‌. ಮಹಮ್ಮದ್‌, ಭರತ್‌ ಮುಂಡೋಡಿ, ಡಾ. ರಾಜಾರಾಂ ಕೆ.ಬಿ., ಧನಂಜಯ ಅಡ್ಪಂಗಾಯ, ಪ್ರಸಾದ್‌ ಕೌಶಲ್‌ ಶೆಟ್ಟಿ, ಡಾ.ಬೆಳ್ಳಿಪ್ಪಾಡಿ ರಘು, ಲುಕ್ಮಾನ್‌ ಬಂಟ್ವಾಳ್‌ ಉಪಸ್ಥಿತರಿದ್ದರು.

Vishwa News 24

Recent Posts

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ -vishwanews24

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…

5 hours ago

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

11 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

11 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

12 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

13 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

13 hours ago