ಪುತ್ತೂರು :ಭಿನ್ನಕೋಮಿಗೆ ಸೇರಿದ ಪುತ್ತೂರಿನ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಮುಂಬಾಯಿ ನಿವಾಸಿ ಇಲ್ಲಿನ ಲಾಡ್ಜ್ ಒಂದರಲ್ಲಿ ಭಾನುವಾರ (ಅ .20 ರಂದು ) ಪತ್ತೆಯಾದ ಪ್ರಕರಣ ಮಹತ್ವದ ತಿರುವು ಪಡೆದಿದೆ. ಇದೀಗ ವಿದ್ಯಾರ್ಥಿನಿಯೂ ಯುವಕ ಪುಸಾಲಾಯಿಸಿ ದೈಹಿಕ ಸಂಪರ್ಕ ಬೆಳೆಸಿರುವುದಾಗಿ ದೂರು ನೀಡಿದ್ದಾಳೆ. ಈ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಆರೋಪಿ ತಯ್ಯಬ್ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತರ ಮಾಹಿತಿಯಂತೆ ಪುತ್ತೂರು ನಗರ ಠಾಣೆ ಪೊಲೀಸರು ದಾಳಿ ಮಾಡಿ ಜೋಡಿಯನ್ನು ವಶಕ್ಕೆ ಪಡೆದಿದ್ದರು. ಈ ಜೋಡಿಯು ಭಿನ್ನ ಕೋಮಿಗೆ ಸೇರಿದವರಾಗಿದ್ದು ಪ್ರಕರಣವೂ ಭಾರೀ ಸಂಚಲನ ಉಂಟು ಮಾಡಿತ್ತು.
ವಿದ್ಯಾರ್ಥಿನಿಯೂ ಪುತ್ತೂರಿನ ಸಾಮೆತಡ್ಕ ನಿವಾಸಿಯಾಗಿದ್ದೂ ಯುವಕ ಮಹಾರಾಷ್ಟ್ರ ಮುಂಬೈ ನಿವಾಸಿಯಾದ ತಯ್ಯಬ್ (19 ವರ್ಷ) . ಇವರಿಬ್ಬರೂ ಪರಸ್ಪರ ಸೋಷಿಯಲ್ ಮೀಡಿಯಾApp ಇನ್ಸ್ಟಾಗ್ರಾಂ ಮೂಲಕ ಪರಿಚಿತರಾಗಿದ್ದರು ಎನ್ನಲಾಗಿದೆ . ಸುಮಾರು ಒಂದೂವರೆ ವರ್ಷಗಳಿಂದ ಅವರಿಬ್ಬರೂ ಸ್ನೇಹಿತರಾಗಿದ್ದು, ಅ 19 ರಂದು ಆರೋಪಿ ಪುತ್ತೂರಿಗೆ ಆಗಮಿಸಿದ್ದಾನೆ . ಅಂದು ಪುತ್ತೂರಿನ ಧರ್ಬೆಯ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾನೆ .
ಮರುದಿನ ಅಂದರೆ ಅ 20 ರಂದು ಯುವತಿಯನ್ನು ಪುತ್ತೂರಿನ ಸ್ಥಳೀಯ ಲಾಡ್ಜ್ ಗೆ ಈತ ಬರಲು ಹೇಳಿದ್ದಾನೆ. ಇವನ ಕರೆಯ ಮೇರೆಗೆ ಭೇಟಿಯಾಗಲು ಬಂದಿದ ಆಕೆಯನ್ನು ಲಾಡ್ಜ್ ನಲ್ಲಿ ಆಕೆಯ ಇಚ್ಚೆಗೆ ವಿರುದ್ದವಾಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪ್ರಕರಣ ದಾಖಲಾಗಿದೆ . ಆದರೇ ಇದ್ದಕ್ಕಿಂತ ನಾಲ್ಕು ತಿಂಗಳ ಮೊದಲು ಅವರಿಬ್ಬರೂ ಇದೇ ಲಾಡ್ಜ್ ನಲ್ಲಿ ಭೇಟಿಯಾಗಿದ್ದರು ಆಗಲೂ ಆರೋಪಿ ಈಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು, ಯುವತಿಯ ಹೆತ್ತವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಅರೋಪಿ ತಯ್ಯದ್ ನಾಲ್ಕು ತಿಂಗಳ ಹಿಂದೆ ಅಂದರೆ ಜೂನ್ ನಲ್ಲಿ ಆಗಮಿಸಿ ಅದೇ ಹೊಟೇಲ್ ನಲ್ಲಿ ತಂಗಿದ್ದ. ಈ ವೇಳೆ ಯುವತಿಯನ್ನು ರೂಂಗೆ ಕರೆಯಿಸಿಕೊಂಡಿದ್ದ ಯುವಕ ಯುವತಿ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಆ ಬಳಿಕ ಎರಡನೇ ಬಾರಿ ಸಂತ್ರಸ್ಥ ಯುವತಿಯನ್ನು ಪುತ್ತೂರಿನ ಸ್ಥಳೀಯ ಲಾಡ್ಜ್ ಗೆ ಬರಹೇಳಿದ್ದು, ಭೇಟಿಯಾಗಲು ತೆರಳಿದ ಆಕೆಗೆ ಲಾಡ್ಜ್ ನಲ್ಲಿ ಇಚ್ಚೆಗೆ ವಿರುದ್ದ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…