Featured

ಪುತ್ತೂರು : ಯಾರು ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ್ದಾರೋ ಅವರನ್ನ ಅಮನತುಗೊಳಿಸಿ : ಅರುಣ್ ಕುಮಾರ್ ಪುತ್ತಿಲ – Vishwanews24

ಪುತ್ತೂರು : ಯಾರು ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ್ದಾರೋ ಅವರನ್ನ ಅಮನತುಗೊಳಿಸಿ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಆರೋಪ ವಿಚಾರವಾಗಿ ಪೊಲೀಸರ ಅಮಾನವೀಯ ವರ್ತನೆಗೆ ಹಿಂದೂ ಮುಖಂಡ ಅರುಣ್ ಪುತ್ತಿಲ ಕೆಂಡಾಮಂಡಲವಾಗಿದ್ದಾರೆ.

ಯಾರು ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ್ದಾರೋ ಅವರನ್ನ ಅಮನತುಗೊಳಿಸಿ, ಡಿವೈಎಸ್ಪಿ, ಸಂಪ್ಯ ಠಾಣಾ ಎಸ್ಐ ಹಾಗೂ ಸಿಬ್ಬಂದಿ ವರ್ಗದ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ,ಈ ಘಟನೆ ಬಗ್ಗೆ ದ.ಕ ಎಸ್ಪಿಯವರಲ್ಲಿ ಮಾತನಾಡಿದ್ದೇನೆ.

ಇಂತಹ ಕೃತ್ಯ ಮತ್ತೆ ಎಲ್ಲಿಯೂ ಮುಂದುವರಿಯಬಾರದು, ಇಂದು ಎಸ್ಪಿ ವಿಚಾರಣೆಗಾಗಿ ಪುತ್ತೂರಿಗೆ ಆಗಮಿಸ್ತಾರೆ, ಹಾಗಾಗಿ ಇಂದು ಸಂಜೆಯೊಳಗಡೆ ಯಾರು ಈ ದೌರ್ಜನ್ಯ ಎಸಗಿದ ಪೊಲೀಸರಿದ್ದರೋ ಅವರನ್ನ ಅಮಾನತು ಮಾಡಬೇಕು, ಜೊತೆಗೆ ಪೊಲೀಸರ ಮೇಲೆ ಕೇಸ್ ದಾಖಲಿಸಬೇಕು. ಈ ದೌರ್ಜನ್ಯದ ಬಗ್ಗೆ ಮಾನವ ಹಕ್ಕಿಗೂ ದೂರು ನೀಡುತ್ತೇವೆ.

ಇನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ‌ ಪುತ್ತೂರಿನಲ್ಲಿ ಹಲವು ಘಟನೆ ನಡೆದಿದೆ. ಅದರಲ್ಲಿ ಈ ಪೊಲೀಸ್ ದೌರ್ಜನ್ಯ ಕೇಸ್ ಕೂಡ ಒಂದು, ಇವೆಲ್ಲವನ್ನ ಹಿಂದೂ ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ.ಇದಕ್ಕೆ ಈ ಕೂಡಲೇ ಕಡಿವಾಣ ಹಾಕಿದ್ರೆ ಚೆನ್ನಾಗಿರುತ್ತೆ, ಇಲ್ಲದಿದ್ದಲ್ಲಿ ಹಿಂದೂ ಸಂಘಟನೆ ಸಂಘರ್ಷಕ್ಕೂ ಸಿದ್ಧರಿದ್ದೇವೆ. ಶಾಂತಿ ಸುವ್ಯವಸ್ಥೆ ಹದಗೆಟ್ರೆ ಇದಕ್ಕೆ ನೇರ ಹೊಣೆ ಪೊಲೀಸ್ ಇಲಾಖೆ ಎಂದು ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.

Vishwa News 24

Recent Posts

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ…

44 minutes ago

ಆಟೋ ಎಲ್‌ಪಿಜಿ ದರ 10 ರೂ. ಇಳಿಕೆ – vishwanews24

ಆಟೋ ಚಾಲಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ದರ 10 ರೂ. ಇಳಿಕೆ ಬೆಂಗಳೂರು: ನಿರಂತರ ಎಲ್‌ಪಿಜಿ  ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ…

1 hour ago

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ – ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ – vishwanews24

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ - ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ ಬೆಂಗಳೂರು:…

1 hour ago

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ –  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ – vishwanews24

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ -  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ ಮಂಗಳೂರು: ಬೈಕಂಪಾಡಿ…

2 hours ago

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ – vishwanews24

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ…

3 hours ago

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

24 hours ago