Featured

ಪುತ್ತೂರು: ಹಿಂದೂ ಕಾರ್ಯಕರ್ತರಿಗೆ ದೌರ್ಜನ್ಯ ಪ್ರಕರಣ – ನನ್ನ ಕ್ಷೇತ್ರದಲ್ಲಿ ಆಗಿರುವ ಘಟನೆಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ : ಅಶೋಕ್ ರೈ – Vishwanews24

ಹರೀಶ್‌ ಪೂಂಜರವರು ಪುತ್ತೂರಿಗೆ ಬಂದು ಈ ವಿಚಾರದಲ್ಲಿ ಮತನಾಡುವ ಅಗತ್ಯವಿಲ್ಲ ..

ಪೊಲೀಸರಿಗೆ ಒತ್ತಡ ಹಾಕಿದವರ ವಿವರ 2 ದಿನಗಳಲ್ಲಿ ಬಹಿರಂಗ ..

ಪುತ್ತೂರು: ಬಿಜೆಪಿ ನಾಯಕರ ಫೋಟೋ ಹೊಂದಿದ್ದ ಬ್ಯಾನರ್’ಗೆ ಚಪ್ಪಲಿ ಹಾರ, ಶ್ರದ್ದಾಂಜಲಿ ಕೋರಿದ್ದ ಬ್ಯಾನರ್ ವಿವಾದದ ಬೆನ್ನಲ್ಲೇ ಪುತ್ತೂರು ಶಾಸಕ ಅಶೋಕ್ ರೈ ಅವರು ಬೆಳ್ತಂಗಡಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ನಡೆದಿರುವ ವಿವಾದದ ಬಗ್ಗೆ ನಾನೇ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.

ಬ್ಯಾನರ್’ಗೆ ಚಪ್ಪಲಿ ಹಾರ ಹಾಕಿರುವ ಆರೋಪಿಗಳಿಗೆ ಡಿವೈಎಸ್‌ಪಿ ಕಚೇರಿಯಲ್ಲಿ ದೌರ್ಜನ್ಯ ನಡೆಯಲು, ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆಯಾಗಲು ಅಧಿಕಾರಿಗಳಿಗೆ ಬಿಜೆಪಿ ನಾಯಕರ ಒತ್ತಡವೇ ಕಾರಣವಾಗಿದೆ ಎಂದು ಈಗಾಗಲೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾರೆಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದ್ದಾರೋ ಅವರ ಹೆಸರನ್ನು ಎರಡು ದಿನದಲ್ಲಿ ಬಹಿರಂಗಪಡಿಸುವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಮತ್ತೊಂದೆಡೆ ಬ್ಯಾನರ್ ಹಾಕಿದ ಆರೋಪಿಗಳಿಗೆ ಹಲ್ಲೆ ನಡೆಸಿದ್ದು ಕಾಂಗ್ರೆಸ್ಸಿನವರೇ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಿಸಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಆರೋಪಕ್ಕೆ ಖಾರವಾಗಿಯೇ ಶಾಸಕ ಅಶೋಕ್ ರೈ ಉತ್ತರಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಕರಣದ ತನಿಖೆ ನಡೆಸಿ ತಪ್ಪತಸ್ಥರ ವಿರುದ್ದ ಎಫ್‌ಐಆರ್ ದಾಖಲಿಸಿ ಅಮಾನತು ಮಾಡುವಂತೆ ಸೂಚಿಸಿದ್ದೆ ಅದರಂತೆ ತನಿಖೆ ನಡೆಸಿ ತಪ್ಪತಸ್ಥರ ವಿರುದ್ದ ಕ್ರಮ ಜರುಗಿಸಲಾಗಿದೆ ಎಂದರು.

ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರ ಕಾಲ್ ಲಿಸ್ಟ್ ತೆಗೆದು ಅದನ್ನು ಎರಡು ದಿನದೊಳಗೆ ಬಹಿರಂಗಪಡಿಸುವೆ ಆವಾಗ ಪುತ್ತೂರಿನ ಜನತೆಗೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜರವರು ಪುತ್ತೂರಿಗೆ ಬಂದು ಈ ವಿಚಾರದಲ್ಲಿ ಮತನಾಡುವ ಅಗತ್ಯವಿಲ್ಲ. ನನ್ನ ಕ್ಷೇತ್ರದಲ್ಲಿ ಆಗಿರುವ ಘಟನೆಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ ಎಂದು ಹೇಳಿದರು.

Vishwa News 24

Recent Posts

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

4 hours ago

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ – vishwanews24

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…

4 hours ago

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…

4 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…

4 hours ago

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ – vishwanews24

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ:  ದಕ್ಷಿಣ ಕನ್ನಡ (ದ.ಕ)…

5 hours ago

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

2 days ago