Featured

ಪುತ್ತೂರು : 156 ವರ್ಷದ ಕಟ್ಟಡ ನೆಲಸಮ ಪ್ರಕರಣ: ವರದಿ ನೀಡುವಂತೆ ಡಿಸಿ ಸೂಚನೆ – VIshwanews24

ಪುತ್ತೂರು : 156 ವರ್ಷದ ಕಟ್ಟಡ ನೆಲಸಮ ಪ್ರಕರಣ: ವರದಿ ನೀಡುವಂತೆ ಡಿಸಿ ಸೂಚನೆ – VIshwanews24

ಪುತ್ತೂರು: ಡಾ| ಶಿವರಾಮ ಕಾರಂತರು ನಾಟ್ಯ ತರಬೇತಿ ನೀಡುತ್ತಿದ್ದ 156 ವರ್ಷಗಳ ಪುರಾತನ ಕಟ್ಟಡ ರಾತ್ರೋರಾತ್ರಿ ನೆಲಸಮ ಮಾಡಿರುವ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ದ.ಕ ಜಿಲ್ಲಾಧಿಕಾರಿ ಅವರು ಡಿಡಿಪಿಐ ಹಾಗೂ ಜಿ.ಪಂ ಸಿ ಇಓ ಸೂಚನೆ ನೀಡಿದ್ದಾರೆ.

ಪುತ್ತೂರು ಹೃದಯಭಾಗದಲ್ಲಿರುವ ಸರಕಾರಿ ಶಾಲೆಯ ಪ್ರಾಚೀನ ಕಟ್ಟಡ ಇದಾಗಿದ್ದು, 1865ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಆರಂಭಿಸಿದ ಲಂಡನ್ ಥಿಯೇಟರ್ ಮಾದರಿ ಶಾಲೆ ಇದಾಗಿತ್ತು. ಪುತ್ತೂರು ಹಾಗೂ ಅಕ್ಕಪಕ್ಕ ೨-೩ ತಾಲೂಕುಗಳಲ್ಲೂ ಶಾಲೆಯೇ ಇಲ್ಲದಿರುವ ಸಂದರ್ಭ ಬ್ರಿಟಿಷ್ ಸರ್ಕಾರ ಮೊತ್ತ ಮೊದಲು ಪುತ್ತೂರಿನ ಹೃದಯಭಾಗದಲ್ಲಿ ಶಾಲೆ ನಿರ್ಮಿಸಿತ್ತು. ಪ್ರಾಚೀನ ಪಾರಂಪರಿಕ ಕಟ್ಟಡಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಈ ಕಟ್ಟಡದ ಪುನರುತ್ಥಾನಕ್ಕೆ ದಶಕಗಳಿಂದ ಕೂಗೂ ಕೇಳಿಬಂದಿತ್ತು.

ಡಾ| ಶಿವರಾಮ ಕಾರಂತರು ೮೩ ವರ್ಷಗಳ ಹಿಂದೆ ನಾಟ್ಯ ನಿರ್ದೇಶನವನ್ನು ಮಾಡುತ್ತಿದ್ದರು. ಆದರೆ ಡಿ. ೧೧ ರಂದು ಎಸ್ ಡಿ ಎಂ ಸಿ ಕಟ್ಟಡ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ನೆಲಸಮ ಮಾಡಿತ್ತು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.

ಜಿಲ್ಲಾಧಿಕಾರಿ ಸೂಚನೆಯಂತೆ ಡಿಡಿಪಿಐ ಘಟನೆ ಬಗ್ಗೆ ವರದಿ ನೀಡುವಂತೆ ಬಿಇಓ ಲೋಕೇಶ್ ಅವರಿಗೆ ಸೂಚಿಸಿದ್ದು, ಅವರು ಎಸ್ ಡಿಎಂಸಿ ಹಾಗೂ ಮುಖ್ಯಗುರುಗಳಿಗೆ ನೋಟೀಸ್ ನೀಡಿದ್ದಾರೆ.

Vishwa News 24

Recent Posts

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

3 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

3 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

3 hours ago

ತುಮಕೂರು: LIC ಹಣದ ಆಸೆಗೆ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ – vishwanews24

ತುಮಕೂರು: LIC ಹಣದ ಆಸೆಗೆ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ ತುಮಕೂರು : ಎಲ್‌ಐಸಿ ಪಾಲಿಸಿಯಿಂದ ಸಿಗುವ 30…

3 hours ago

ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಗೆಲುವು : ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ – vishwanews24

ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಗೆಲುವು : ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ ಲಂಡನ್…

4 hours ago

ಮಂಗಳೂರು/ಉಡುಪಿ: ಐವನ್ ಡಿಸೋಜಾ ರಿಗೆ ಸಚಿವ ಸ್ಥಾನ ನೀಡುವಂತೆ ಬಿ ಕೆ ಹರಿಪ್ರಸಾದ್ ಗೆ ಕಥೊಲಿಕ್ ಸಭಾ ಮನವಿ – vishwanews24

ಮಂಗಳೂರು/ಉಡುಪಿ: ಐವನ್ ಡಿಸೋಜಾ ರಿಗೆ ಸಚಿವ ಸ್ಥಾನ ನೀಡುವಂತೆ ಬಿ ಕೆ ಹರಿಪ್ರಸಾದ್ ಗೆ ಕಥೊಲಿಕ್ ಸಭಾ ಮನವಿ ಮಂಗಳೂರು/ಉಡುಪಿ:…

4 hours ago