ಬೆಂಗಳೂರು: ಫಿಲ್ಮ್ ಚೇಂಬರ್ ಆಯೋಜಿಸಿದ್ದ ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್, ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ನನ್ನನ್ನು ಕಳಿಸಿಕೊಟ್ಟು ಅವನನ್ನು ವಾಪಸ್ ಕರೆಸಿಕೊಳ್ಳಿ ಪ್ಲೀಸ್. ಪುನೀತ್ ಅವರನ್ನು ಹೂತ್ತಿಲ್ಲ, ಬಿತ್ತಿದ್ದೇವೆ. ಮುಂದೆ ಪುನೀತ್ ರೀತಿ ಇರುವ ನೂರಾರು ಜನ ಹುಟ್ಟಿ ಬರುತ್ತಾರೆ. ಹುಟ್ಟುವಾಗ ನನ್ನ ತಮ್ಮನಾಗಿ ಬಂದ. ವಾಪಸ್ ಹೋಗುವಾಗ ತಂದೆಯಾಗಿ ಹೋದ. ಹೇಗೆ ಬದುಕಬೇಕು ಎಂಬುದನ್ನು ನನಗೂ ಮತ್ತು ಶಿವಣ್ಣನಿಗೂ ತಿಳಿಸಿಕೊಟ್ಟು ಹೋದ. ದಯವಿಟ್ಟು ಬಂದುಬಿಡು ಕಂದಾ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಇಷ್ಟು ದಿನ ಈ ನೋವನ್ನು ತಡೆದುಕೊಂಡಿದ್ದೆ. ನಾನು ಕಣ್ಣೀರು ಹಾಕಿದರೆ ಅಪ್ಪು ಪತ್ನಿ ಅಶ್ವಿನಿ, ಮಕ್ಕಳು ನೊಂದುಕೊಳ್ಳುತ್ತಾರೆ. ನನಗೆ ಮತ್ತು ಶಿವಣ್ಣನಿಗೆ ಮುಖ ನೋಡಿಕೊಳ್ಳಲು ನಾಚಿಕೆಯಾಗುತ್ತಿದೆ. ನಾವು ಅವನನ್ನು ಕಳುಹಿಸಿ ಕೊಡಬೇಕಾಯಿಲ್ಲ. ಇಂಥಹ ಒಂದು ದಿನ ಬೇಕಾ? ಎಂದು ನಮಗೆ ಬೇಸರವಾಯಿತ್ತು. ನಮ್ಮ ದುಃಖವನ್ನು ಹೇಳಿಕೊಳ್ಳೋಣ ಎಂದರೆ ಅಪ್ಪುನನ್ನು ಅಪ್ಪ ಅಮ್ಮ ಹತ್ತಿರವೇ ಮಲಗಿಸಿ ಬಿಟ್ಟೆವು. ನಿನ್ನ ಜಾಗಕ್ಕೆ ನಾನು ಬರುತ್ತೇನೆ ವಾಪಸ್ ಬಂದು ಬಿಡು. ಈ ನೋವು ಮರೆಯುವ ಶಕ್ತಿ ಕೊಡು ಅಂತ ದೇವರಲ್ಲಿ ಕೇಳಲ್ಲ. ಈ ನೋವಿನ ಜೊತೆಗೆ ಬದುಕುವ ಶಕ್ತಿ ಕೊಡು ಅಂತ ಕೇಳುತ್ತೇನೆ. ಅವನು ನನ್ನ ಎದೆಯೊಳಗೆ ಇದ್ದಾನೆ ಎಂದು ರಾಘವೇಂದ್ರ ರಾಜ್‍ಕುಮಾರ್ ಹೇಳಿದ್ದಾರೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…