Featured

ಪುಲ್ವಾಮಾ ದಾಳಿ : ಸಂಚು ರೂಪಿಸಿದ್ದ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಜಿಯನ್ನು ಹತ್ಯೆಗೈಯ್ದ ಭಾರತೀಯ ಯೋಧರು – Vishwanews24

ನವದೆಹಲಿ,- ಸಿಆರ್‍ಪಿಎಫ್‍ನ 40 ಯೋಧರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಜೈಷ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಹಾಗೂ ಪುಲ್ವಾಮಾ ಘಟನೆಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಜಿ ಎಂಬಾತನನ್ನು ಭಾರತೀಯ ಯೋಧರು ಇಂದು ಹತ್ಯೆಗೈಯ್ದಿದ್ದಾರೆ.

ಕಳೆದ ಗುರುವಾರ ಪುಲ್ವಾಮಾದ ಆವಂತಿಪೊರ್‍ನಲ್ಲಿ ಬಾಂಬ್ ತುಂಬಿದ್ದ ವಾಹನವನ್ನು ಸ್ಫೋಟಿಸಲು ಈತ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಮತ್ತೋರ್ವ ಪ್ರಮುಖ ಸಂಚುಕೋರ ಜೈಷ್-ಇ-ಮೊಹಮ್ಮದ್ ಕಮಾಂಡರ್ ಕಮ್ರಾನ್‍ನನ್ನು ಹಿಡಿಯಲು ಸೇನಾಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ..

ಈ ಮೂಲಕ ಭಾರತೀಯ ವೀರ ಯೋಧರ ಶ್ರಮದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ ಬೆನ್ನಲ್ಲೇ ಸೇನಾಪಡೆ ಬಹುದೊಡ್ಡ ಯಶಸ್ಸು ಸಾಧಿಸಿದೆ.

ಈ ಇಬ್ಬರು ಕಳೆದ ಗುರುವಾರ ಪುಲ್ವಾಮಾದ ರಾಷ್ಟ್ರೀಯ ಹೆದ್ದಾರಿ ಆವಂತಿಪೊರ್‍ನಲ್ಲಿ ಸಂಭವಿಸಿದ ಘಟನೆಯ ಮಾಸ್ಟರ್ ಮೈಂಡ್‍ಗಳಾಗಿದ್ದಾರೆ.
ಈಗಾಗಲೇ ಅಬ್ದುಲ್ ರಸೀದ್ ಘಾಜಿ ಸೇನಾಪಡೆಗಳ ಗುಂಡಿಗೆ ಹತ್ಯೆಯಾಗಿರುವುದನ್ನು ಸೇನಾಪಡೆ ಖಚಿತಪಡಿಸಿದೆ. ಆದರೆ ತಲೆಮರೆಸಿಕೊಂಡಿರುವ ಕಮ್ರಾನ್‍ನನ್ನು ಜೀವಂತವಾಗಿ ಸೆರೆ ಹಿಡಿಯಲು ಪ್ರಯತ್ನ ಮುಂದುವರೆದಿದೆ.

ಜೈಷ್​ ಎ ಮೊಹಮ್ಮದ್​ ಭಯೋತ್ಪಾದನೆ ಸಂಘಟನೆಯ ಪ್ರಮುಖ ಸದಸ್ಯರಾಗಿದ್ದ ಇವರಿಬ್ಬರ ಹತ್ಯೆಯೊಂದಿಗೆ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಂತಾಗಿದ್ದು, ಹುತಾತ್ಮ 40 ಯೋಧರಿಗೆ ಸೂಕ್ತ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದಂತಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಕ್ರಮಾನ್‍ನನ್ನು ಹಿಡಿಯಲು ಯೋಧರು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ. ಗುರುವಾರದ ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾರ್ವಜನಿಕ ಸಮಾರಂಭಗಳಲ್ಲಿ ಯೋಧರನ್ನು ಹತ್ಯೆಗೈದ ಉಗ್ರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶಪಥ ಮಾಡಿದ್ದರು.

 

Vishwa News 24

Recent Posts

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  – vishwanews24

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…

8 minutes ago

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ – vishwanews24

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…

25 minutes ago

ಬ್ರಹ್ಮಾವರ : ಭೀಕರ ರಸ್ತೆ ಅಪಘಾತ ; ಖ್ಯಾತ ಹುಲಿ ವೇಷ ಕಲಾವಿದ ಸಾವು – vishwanews24

ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…

39 minutes ago

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? – vishwanews24

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? ಕ್ಯಾಲಿಫೋರ್ನಿಯಾ :…

2 hours ago

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ – vishwanews24

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ ಬೆಂಗಳೂರು: ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ…

2 hours ago

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ – vishwanews24

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ  - ಫಲ್ಗುಣಿ ನದಿಯಲ್ಲಿ ಶೋಧ…

2 hours ago