Featured

ಪುಲ್ವಾಮಾ ಹುತಾತ್ಮ ಯೋಧನ ತಂಗಿಯ ವಿವಾಹ : ಅಣ್ಣನ ಸ್ಥಾನ ತುಂಬಿದ ಯೋಧರು – VIshwanews24

ಪುಲ್ವಾಮಾ ಹುತಾತ್ಮ ಯೋಧನ ತಂಗಿಯ ವಿವಾಹ : ಅಣ್ಣನ ಸ್ಥಾನದ ತುಂಬಿದ ಯೋಧರು – VIshwanews24

ಲಕ್ನೋ: ಹುತಾತ್ಮನಾಗಿರುವ ಯೋಧನ ತಂಗಿಯ ವಿವಾಹವನ್ನು ಅಣ್ಣನ ಸ್ಥಾನದಲ್ಲಿ ನಿಂತು ಯೋಧರೇ ಮುಂದೆ ನಿಂತು ಮಾಡಿಸಿ ಗೆಳೆಯನ ಆಸೆಯನ್ನು ನೆರವೇರಿಸಿದ ಹೃದಯಸ್ಪರ್ಶಿ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ.

2019ರ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ ಹುತಾತ್ಮರಾದ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ಸಹೋದರಿಯ ಮದುವೆಯನ್ನು ಖುದ್ದು ಸಿಆರ್‌ಪಿಎಫ್‌ ಯೋಧರೇ ಸೋದರ ಸ್ಥಾನದಲ್ಲಿ ಮುಂದೆ ನಿಂತು ಮಾಡಿಸಿಕೊಟ್ಟಿದ್ದಾರೆ.

ಮದುವೆಯ ದಿನ ಬೆಳಗ್ಗೆಯೇ ಸಮವಸ್ತ್ರ ಧರಿಸಿದ್ದ ಸಿಆರ್‌ಪಿಎಫ್ ಯೋಧರ ದಂಡೊಂದು ವಧುವನ್ನು ಮಂಟಪಕ್ಕೆ ಕರೆತರುವ ಮೂಲಕ ಸಹೋದರನನ್ನು ಕಳೆದುಕೊಂಡಿರುವ ಭಾವನೆ ಈ ಮದುಮಗಳಿಗೆ ಬರದಂತೆ ನೋಡಿಕೊಂಡರು. ಖುದ್ದು ಮುಂದೆ ನಿಂತು ಎಲ್ಲ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಿ ವಿವಾಹ ಕಾರ್ಯವನ್ನು ನಡೆಸಿಕೊಟ್ಟರು.

‘ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್‌ ಸಿಂಗ್‌ ಅವರ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಸಹೋದರರಾಗಿ ಸಿಆರ್‌ಪಿಎಫ್‌ ಯೋಧರು ಪಾಲ್ಗೊಂಡಿದ್ದರು’ ಎಂಬ ಶೀರ್ಷಿಕೆ ಇರುವ ಮದುವೆ ಫೋಟೋಗಳನ್ನು ಸಿಆರ್‌ಪಿಎಫ್‌ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಶೇರ್‌ ಮಾಡಿದೆ.

ಯೋಧರ ಈ ಕಾರ್ಯವನ್ನು ಕಂಡು ಸಿಂಗ್‌ ಅವರ ಪಾಲಕರು ಭಾವುಕರಾದರು. ‘ನನ್ನ ಮಗ ಈಗ ಈ ಜಗತ್ತಿನಲ್ಲಿಲ್ಲ. ಆದರೆ ಈ ಎಲ್ಲಾ ಯೋಧರ ರೂಪದಲ್ಲಿ ನಾವು ಅನೇಕ ಮಕ್ಕಳನ್ನು ನಾವು ಹೊಂದಿದ್ದೇವೆ ಎನಿಸುತ್ತಿದೆ. ಕಷ್ಟ, ಸುಖದ ಸಂದರ್ಭದಲ್ಲಿ ಎಲ್ಲರೂ ನಮ್ಮೊಟ್ಟಿಗಿರುತ್ತಾರೆ’ ಎಂದು ಸಿಂಗ್‌ ಅವರ ತಂದೆ ನುಡಿದಿದ್ದಾರೆ.

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

10 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

11 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

12 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

12 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

12 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

12 hours ago