ಲಕ್ನೋ: ಹುತಾತ್ಮನಾಗಿರುವ ಯೋಧನ ತಂಗಿಯ ವಿವಾಹವನ್ನು ಅಣ್ಣನ ಸ್ಥಾನದಲ್ಲಿ ನಿಂತು ಯೋಧರೇ ಮುಂದೆ ನಿಂತು ಮಾಡಿಸಿ ಗೆಳೆಯನ ಆಸೆಯನ್ನು ನೆರವೇರಿಸಿದ ಹೃದಯಸ್ಪರ್ಶಿ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ.
2019ರ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಯೋಧ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿಯ ಮದುವೆಯನ್ನು ಖುದ್ದು ಸಿಆರ್‌ಪಿಎಫ್ ಯೋಧರೇ ಸೋದರ ಸ್ಥಾನದಲ್ಲಿ ಮುಂದೆ ನಿಂತು ಮಾಡಿಸಿಕೊಟ್ಟಿದ್ದಾರೆ.
ಮದುವೆಯ ದಿನ ಬೆಳಗ್ಗೆಯೇ ಸಮವಸ್ತ್ರ ಧರಿಸಿದ್ದ ಸಿಆರ್‌ಪಿಎಫ್ ಯೋಧರ ದಂಡೊಂದು ವಧುವನ್ನು ಮಂಟಪಕ್ಕೆ ಕರೆತರುವ ಮೂಲಕ ಸಹೋದರನನ್ನು ಕಳೆದುಕೊಂಡಿರುವ ಭಾವನೆ ಈ ಮದುಮಗಳಿಗೆ ಬರದಂತೆ ನೋಡಿಕೊಂಡರು. ಖುದ್ದು ಮುಂದೆ ನಿಂತು ಎಲ್ಲ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಿ ವಿವಾಹ ಕಾರ್ಯವನ್ನು ನಡೆಸಿಕೊಟ್ಟರು.
‘ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಸಹೋದರರಾಗಿ ಸಿಆರ್‌ಪಿಎಫ್ ಯೋಧರು ಪಾಲ್ಗೊಂಡಿದ್ದರು’ ಎಂಬ ಶೀರ್ಷಿಕೆ ಇರುವ ಮದುವೆ ಫೋಟೋಗಳನ್ನು ಸಿಆರ್‌ಪಿಎಫ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಶೇರ್ ಮಾಡಿದೆ.
ಯೋಧರ ಈ ಕಾರ್ಯವನ್ನು ಕಂಡು ಸಿಂಗ್ ಅವರ ಪಾಲಕರು ಭಾವುಕರಾದರು. ‘ನನ್ನ ಮಗ ಈಗ ಈ ಜಗತ್ತಿನಲ್ಲಿಲ್ಲ. ಆದರೆ ಈ ಎಲ್ಲಾ ಯೋಧರ ರೂಪದಲ್ಲಿ ನಾವು ಅನೇಕ ಮಕ್ಕಳನ್ನು ನಾವು ಹೊಂದಿದ್ದೇವೆ ಎನಿಸುತ್ತಿದೆ. ಕಷ್ಟ, ಸುಖದ ಸಂದರ್ಭದಲ್ಲಿ ಎಲ್ಲರೂ ನಮ್ಮೊಟ್ಟಿಗಿರುತ್ತಾರೆ’ ಎಂದು ಸಿಂಗ್ ಅವರ ತಂದೆ ನುಡಿದಿದ್ದಾರೆ.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…