ನಮ್ಮ ಧರ್ಮಾಚರಣೆಯಲ್ಲಿ ನಾವು ಪ್ರಥಮ ಆದ್ಯತೆ ನೀಡುವುದು ಭಗವಂತನಿಗೆ, ಆದ್ದರಿಂದ ಭಗವಂತನನ್ನು ಒಲಿಸಿಕೊಳ್ಳಲು ಹಲವು ರೀತಿಯ ಪೂಜೆಗಳು, ಹೋಮಗಳು, ಪ್ರತಿ ದೇವರಿಗೂ ಹಬ್ಬಗಳು ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತೇವೆ, ಹಾಗೂ ಈ ಕಾರ್ಯಗಳಿಗೆ ಅಥವಾ ಪೂಜೆಗಳಿಗೆ ನಾವು ಪವಿತ್ರವೆಂದು ಭಾವಿಸುವುದು ಹಾಗೂ ಬಳಸುವುದು ತೆಂಗಿನಕಾಯಿ.
ನಾವು ಮುಖ್ಯವಾಗಿ ದೇವರಿಗೆ ನೀಡುವ ನೇವೇದ್ಯ, ಅದರಲ್ಲೂ ಒಂದು ತೆಂಗಿನಕಾಯಿ ಹಿಂದೆ ಹಲವು ಸಾಂಪ್ರದಾಯಿಕ ಅರ್ಥಗಳಿವೆ ಇದರ ಬಗ್ಗೆಯೂ ಇಂದು ನಾವು ಸಂಪೂರ್ಣವಾಗಿ ತೆಗೆದುಕೊಳ್ಳೋಣ.
ಹಿಂದೂ ಧರ್ಮದಲ್ಲಿ ದೇವರ ಪೂಜೆ ವೇಳೆ ತೆಂಗಿನ ಕಾಯಿ ಒಡೆಯುವ ಪದ್ಧತಿಯಿದೆ. ಅನೇಕ ಬಾರಿ ಒಡೆದ ತೆಂಗಿನಕಾಯಿ ಹಾಳಾಗಿರುತ್ತದೆ.
ಪೂಜೆ ನಂತ್ರ ಹಾಳಾದ ತೆಂಗಿನಕಾಯಿ ನೀಡಿದ ಅಂಗಡಿ ಮಾಲೀಕನಿಗೆ ಕೆಲವರು ಬೈದ್ರೆ ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ತೆಂಗಿನಕಾಯಿ ಹಾಳಾಗಲು ಕಾರಣವೇನು? ಇದು ಅಶುಭ ಫಲ ನೀಡುತ್ತಾ? ಇದು ಮುಂದೆ ಬರಲಿರುವ ಕಷ್ಟದ ಮುನ್ಸೂಚನೆಯಾ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ.
ಪೂಜೆ ವೇಳೆ ಒಡೆದ ತೆಂಗಿನಕಾಯಿ ಹಾಳಾಗಿದ್ರೆ ಎಲ್ಲ ಬಾರಿ ಇದು ಅಶುಭ ಸಂಕೇತವಲ್ಲ. ತೆಂಗಿನಕಾಯಿಯನ್ನು ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಲಕ್ಷ್ಮಿ ಆರಾಧನೆ ವೇಳೆ ತೆಂಗಿನಕಾಯಿ ಒಡೆಯಲಾಗುತ್ತದೆ. ಒಡೆದ ತೆಂಗಿನಕಾಯಿ ಹಾಳಾಗಿದ್ದರೆ ಇದನ್ನು ಶುಭ ಸಂಕೇತ ಎನ್ನಲಾಗುತ್ತದೆ.
ಒಡೆದ ತೆಂಗಿನಕಾಯಿ ಹಾಳಾಗಿದ್ದು, ಅದನ್ನು ಶುಭವೆನ್ನಲು ವಿಶೇಷ ಕಾರಣವಿದೆ. ದೇವರಿಗೆ ನೀವು ಅರ್ಪಣೆ ಮಾಡಿದ ತೆಂಗಿನಕಾಯಿಯನ್ನು ದೇವರು ಸ್ವೀಕರಿಸಿದ್ದಾನೆ. ನಿಮ್ಮ ಪೂಜೆಗೆ ತೃಪ್ತಿಗೊಂಡಿದ್ದಾನೆ. ಶೀಘ್ರವೇ ನಿಮ್ಮೆಲ್ಲ ಆಸೆ ಈಡೇರಲಿದೆ ಎಂದರ್ಥ. ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ಮಾಡಿ ತೆಂಗಿನಕಾಯಿ ಒಡೆದಾಗ ತೆಂಗಿನಕಾಯಿ ಹಾಳಾಗಿದ್ದರೆ ನಿಮ್ಮ ಪ್ರಾರ್ಥನೆ ದೇವರಿಗೆ ಕೇಳಿದೆ ಎಂದು ಅರ್ಥೈಸಿಕೊಳ್ಳಿ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…