Featured

ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ : ಮಹಿಳೆಯರತ್ತ ಕನಿಕರ ತೋರದ ಹಗಲು ದರೋಡೆಯ ಸರಕಾರ : ರಮಾನಾಥ‌ ರೈ -Vishwanews24

ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ : ಮಹಿಳೆಯರತ್ತ ಕನಿಕರ ತೋರದ ಹಗಲು ದರೋಡೆಯ ಸರಕಾರ : ರಮಾನಾಥ‌ ರೈ -Vishwanews24

ಮಂಗಳೂರು,: ಪೆಟ್ರೋಲ್, ಅಡುಗೆ ಅನಿಲ ಏರಿಸಿದ ಕೇಂದ್ರ ಸರಕಾರವು ಕರುಣೆ ಇಲ್ಲದ, ಮಹಿಳೆಯರತ್ತ ಕನಿಕರ ತೋರದ ಹಗಲು ದರೋಡೆಯ ಸರಕಾರ ‌ಎಂದು ಮಾಜೀ ಮಂತ್ರಿ ‌ಬಿ. ರಮಾನಾಥ‌ ರೈ ಅವರು ಕಾಂಗ್ರೆಸ್ ‌ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿದರು.

ಪೆಟ್ರೋಲ್, ಡೀಸೆಲ್ ‌ದರ‌ ಏರಿಕೆಯಿಂದ ಎಲ್ಲ ದಿನಬಳಕೆಯ ವಸ್ತುಗಳ ಬೆಲೆ ಏರಿದ್ದರಿಂದ ಜನಸಾಮಾನ್ಯರ ‌ಬದುಕು ಮೂರಾಬಟ್ಟೆ ಆಗಿದೆ. ಮನಮೋಹನ ಸಿಂಗ್ ‌ಪ್ರಧಾನಿ‌ ಆಗಿದ್ದಾಗ ಅಂತರರಾಷ್ಟ್ರೀಯ ‌ಮಾರುಕಟ್ಟೆಯಲ್ಲಿ ಬ್ಯಾರೆಲ್ ಕಚ್ಚಾ ತೈಲದ‌ ಬೆಲೆ‌ 147 ಡಾಲರ್ ತನಕ‌ ‌ಏರಿದ್ದ ಕಾಲದಲ್ಲೂ ಸರಕಾರ ಬೆಲೆಯನ್ನು ಹತೋಟಿಯಲ್ಲಿ‌ ಇಟ್ಟಿತ್ತು. ಮೋದಿ ಕಾಲದಲ್ಲಿ ಬ್ಯಾರೆಲ್ ದರ 40 ಡಾಲರ್ ಆಚೀಚೆ ಇದ್ದರೂ ಪೆಟ್ರೋಲ್, ಡೀಸೆಲ್‌ ದರ ರೂಪಾಯಿ 100ನ್ನು ಮುಟ್ಟಿದೆ ಎಂದು ರೈ ಟೀಕಿಸಿದರು.

ಫೆ. 22 ರಿಂದ 27ರ ವರೆಗೆ ಹೆಜಮಾಡಿಯಿಂದ – ಶಿರೂರಿನ ವರೆಗೆ 108 ಕಿಮಿಗಳ ‘ಜನಧ್ವನಿ’ ಪಾದಯಾತ್ರೆ : ಅಶೋಕ್ ಕುಮಾರ್ ಕೊಡವೂರು -Vishwanews24

ಕಾಂಗ್ರೆಸ್ ಸರಕಾರವು ಇದ್ದಾಗ ಈ ಮೋದಿ ಮಹಾಶಯ ಬಿಜೆಪಿಯನ್ನು ಗೆಲ್ಲಿಸಿ ಎಲ್ಲ ಬೆಲೆ ಇಳಿಸುತ್ತೇವೆ ಎನ್ನುತ್ತಿದ್ದರು. ಆದರೆ ಮೋದಿ ಪ್ರಧಾನಿ ಆದ ಮೇಲೆ ಎಲ್ಲ ಬೆಲೆ ನೂರಾರು ಪಟ್ಟು ಹೆಚ್ಚಿದೆ. ಇದನ್ನು ಪ್ರಶ್ನಿಸಲು ಯಾರಿಗೂ ಧೈರ್ಯ ಇಲ್ಲ. ಏಕೆಂದರೆ ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ. ಕಾಂಗ್ರೆಸ್ ಸರಕಾರ ಇದ್ದಾಗ ಬೆಲೆ ಏರಿಕೆಯನ್ನು ಎಲ್ಲರೂ ಖಂಡಿಸುತ್ತಿದ್ದರು. ಏಕೆಂದರೆ ಆಗ ನಿಜ ಪ್ರಜಾಪ್ರಭುತ್ವ ಇತ್ತು ಎಂದು ರಮಾನಾಥ‌ ರೈ ಹೇಳಿದರು.

ನಮ್ಮ ಸರಕಾರ ಕೇಂದ್ರದಲ್ಲಿ ಇದ್ದಾಗ ಅಬಕಾರಿ ಸುಂಕ ಇಳಿಸಿದ್ದೆವು. ಇವರು ಏರಿಸುತ್ತಲೇ ಇದ್ದಾರೆ. ಮೋದಿ ಸರಕಾರವು ಬಡವರನ್ನು ನಿರ್ಲಕ್ಷ್ಯ ‌ಮಾಡಿ, ಜನಸಾಮಾನ್ಯರನ್ನು ವಂಚಿಸಿ ಕಾರ್ಪೊರೇಟ್ ಜನರ ಹಿತ ಕಾಯುತ್ತದೆ. ಪೆಟ್ರೋಲ್ ಮೂಲ ಬೆಲೆ ರೂಪಾಯಿ 47 ಇದೆ ಇಷ್ಟು ಏರಿಕೆ ಏಕೆ? ಭಾರತದ ನೆರೆ ದೇಶಗಳಲ್ಲಿ ರೂ. 50ರ ಸುತ್ತಿನಲ್ಲಿ ಇದೆ. ಆದರೆ ಭಾರತದಲ್ಲಿ ಇಷ್ಟು ಏರಿಕೆ ಅಮಾನವೀಯ. ಇದು ಸುಳ್ಳು ಹೇಳುವ ಸರಕಾರ. ಪ್ರಧಾನಿ ಒಬ್ಬರು ಇಷ್ಟು ಸುಳ್ಳು ಹೇಳುವುದು ನಾಚಿಕೆಗೇಡು ಎಂದು ರೈ ಖಂಡಿಸಿದರು.

ಪುತ್ತೂರು: ಸಾಲ ವಸೂಲಿಗಾಗಿ ಮನೆ ಮುಟ್ಟುಗೋಲು ; ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ ಗೆ ಶರಣು -Vishwanews24

ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಕುಮಾರ್, ಜೆ. ಆರ್. ಲೋಬೋ, ಇಬ್ರಾಹಿಂ ಕೋಡಿಜಾಲ್, ವಿಶ್ವಾಸ್‌ ದಾಸ್, ಸದಾಶಿವ ಉಲ್ಲಾಳ ಮೊದಲಾದವರು ಉಪಸ್ಥಿತರಿದ್ದರು

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

1 day ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

1 day ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

1 day ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

1 day ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

2 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

2 days ago