ರಾಜ್ಯ ನ್ಯೂಸ್

ಪೆಟ್ರೋಲ್ ದರ ಈಗ ಇಳಿಸಿದ್ದು ಯಾಕೆ: ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳ್ತಾರೆ ಓದಿ

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಸ್ಥಿರವಾಗಿಲ್ಲ ಎನ್ನುವ ವಿಷಯವನ್ನು ಡೈವರ್ಟ್ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ಡಾಲರ್ಸ್ ಕಾಲೋನಿಯ ಬಿಎಸ್‍ವೈ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಆಂತರಿಕ ಕಚ್ಚಾಟವು ಗೊತ್ತಾಗಬಾರದೆನ್ನುವ ಉದ್ದೇಶದಿಂದ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲೆ ಪ್ರತಿ ಲೀಟರ್‍ಗೆ 2 ರೂಪಾಯಿ ಇಳಿಕೆ ಮಾಡಿದ್ದಾರೆ. ಒಂದು ವೇಳೆ ಇವರು ಮಾಡುವುದಾದರೆ ಕನಿಷ್ಟ 10 ರೂಪಾಯಿಯನ್ನು ಇಳಿಕೆ ಮಾಡಬೇಕಾಗಿತ್ತು. ತಮ್ಮಲ್ಲಿನ ಆಂತರಿಕ ಕಿತ್ತಾಟವನ್ನು ಮರೆಮಾಚಲು ಕಿಂಗ್‍ಪಿನ್ ಎನ್ನುವ ಏನೇನೋ ಕಥೆ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಸಿಎಂ ಕುಮಾರಸ್ವಾಮಿಯವರಿಗೆ ತಾಕತ್ ಇದ್ದರೆ ಅವರು ಮಾಡಿರುವ ಆರೋಪಕ್ಕೆ ಸಂಬಂಧಪಟ್ಟವರನ್ನು ಶೀಘ್ರವೇ ಬಂಧಿಸಲಿ. ನಾವು ಬರೀ ರಾಜಕಾರಣ ಮಾಡಿದರೆ ನಮ್ಮ ಕ್ಷೇತ್ರದ ಜನ ನಮ್ಮನ್ನ ಕ್ಷಮಿಸುವುದಿಲ್ಲ. ಹೀಗಾಗಿ ನಾವು ಮೊದಲು ನಮ್ಮ ಕ್ಷೇತ್ರಗಳ ಅಭಿವೃದ್ಧಿಯ ಕಡೆ ಗಮನ ನೀಡುತ್ತೇವೆ ಎಂದು ಹೇಳಿದರು

ಬಿಎಸ್‍ವೈ ನಿವಾಸಕ್ಕೆ ಸಂಕೇಶ್ವರ್, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದ್ದು, ಪ್ರಸಕ್ತ ರಾಜ್ಯ ರಾಜಕೀಯ ಬೆಳವಣಿಗೆಗಳ ಚರ್ಚೆ ನಡೆಸಿದ್ದಾರೆ. ಅಲ್ಲದೇ ಚರ್ಚೆಯ ಬಳಿಕ ಯಡಿಯೂರಪ್ಪನವರು ಕೈ ನೋವಿನ ಚಿಕಿತ್ಸೆ ಪಡೆಯಲು ಜಿಂದಾಲ್ ಆಸ್ಪತ್ರೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಜಾಹಿರಾತು: ಪಂಡೀತ್ ಸುದರ್ಶನ್ ಭಟ್

Vishwa News 24

Recent Posts

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

33 minutes ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

43 minutes ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

55 minutes ago

ತುಮಕೂರು: LIC ಹಣದ ಆಸೆಗೆ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ – vishwanews24

ತುಮಕೂರು: LIC ಹಣದ ಆಸೆಗೆ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ ತುಮಕೂರು : ಎಲ್‌ಐಸಿ ಪಾಲಿಸಿಯಿಂದ ಸಿಗುವ 30…

1 hour ago

ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಗೆಲುವು : ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ – vishwanews24

ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಗೆಲುವು : ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ ಲಂಡನ್…

2 hours ago

ಮಂಗಳೂರು/ಉಡುಪಿ: ಐವನ್ ಡಿಸೋಜಾ ರಿಗೆ ಸಚಿವ ಸ್ಥಾನ ನೀಡುವಂತೆ ಬಿ ಕೆ ಹರಿಪ್ರಸಾದ್ ಗೆ ಕಥೊಲಿಕ್ ಸಭಾ ಮನವಿ – vishwanews24

ಮಂಗಳೂರು/ಉಡುಪಿ: ಐವನ್ ಡಿಸೋಜಾ ರಿಗೆ ಸಚಿವ ಸ್ಥಾನ ನೀಡುವಂತೆ ಬಿ ಕೆ ಹರಿಪ್ರಸಾದ್ ಗೆ ಕಥೊಲಿಕ್ ಸಭಾ ಮನವಿ ಮಂಗಳೂರು/ಉಡುಪಿ:…

2 hours ago