Featured

ಪೊಲೀಸರಿಗೆ ಬಾಡಿ ಕ್ಯಾಮೆರಾ ಕಡ್ಡಾಯ : ಆರಗಜ್ಞಾನೇಂದ್ರ ಆದೇಶ  – Vishwanews24

ಪೊಲೀಸರಿಗೆ ಬಾಡಿ ಕ್ಯಾಮೆರಾ ಕಡ್ಡಾಯ : ಆರಗಜ್ಞಾನೇಂದ್ರ ಆದೇಶ  – Vishwanews24

ಬೆಂಗಳೂರು : ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕೆಲಸ ಮಾಡುವ ಪೊಲೀಸರು ತಮ್ಮ ದೇಹಗಳಿಗೆ ಕ್ಯಾಮರ ಅಳವಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನ ಪರಿಷತ್ ನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಬಾಲಕೃಷ್ಣರಾವ್ ವರದಿ ಪ್ರಕಾರ ಪೊಲೀಸ್ ನೇಮಕಾತಿ ನಡೆಯುತ್ತಿದೆಯೇ ಎಂದಾಗ ಉತ್ತರ ನೀಡಿದ ಸಚಿವರು, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6.10 ಕೋಟಿ ಜನಸಂಖ್ಯೆ ಇದೆ. ಒಟ್ಟು 1,05,864 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದಾರೆ.

ದೇಶದಲ್ಲಿ 568 ಮಂದಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದರೆ, ರಾಜ್ಯದಲ್ಲಿ 577 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾರೆ ಎಂದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಒರಟಾಗಿ ವರ್ತಿಸುತ್ತಾರೆ. ದರ್ಪ ಪ್ರದರ್ಶಿಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತವೆ. ಅದನ್ನು ತಪ್ಪಿಸಲು ಇನ್ನೂ ಮುಂದೆ ಅಪರಾಧ ನಡೆದಾಗ ಸ್ಥಳಕ್ಕೆ ತೆರಳುವ ಪೊಲೀಸ್ ರು ಬಾಡಿ ಕ್ಯಾಮರಾ ಹೊಂದಿರುವುದು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.

ಸಂಚಾರಿ ಪೊಲೀಸರು ಬಾಡಿ ಕ್ಯಾಮರ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದಂತೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಬಾಡಿ ಕ್ಯಾಮರ ಅಳವಡಿಕೊಳ್ಳಬೇಕಿದೆ. ಯಾರಾದರೂ ಬಾಡಿ ಕ್ಯಾಮರ ಅಳವಡಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಟ್ರಾಫಿಕ್ ಪೋ ಲಿಸರ ಜವಾಬ್ದಾರಿಯೂ ಹೆಚ್ಚಾಗಿದೆ. ವ್ಯವಸ್ಥೆಯನ್ನು ಸುಧಾರಿಸುತ್ತಿದ್ದೇವೆ. ಆಕ್ಷೇಪಕ್ಕೆ ಗುರಿಯಾಗಿದ್ದ ಟೋಯಿಂಗ್ ನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ. ಮುಂದೆ ಅದನ್ನು ಬದಲಾವಣೆ ಮಾಡಲು ಹಿರಿಯ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡಿ ಅತ್ಯಾಧುನಿಕ ಜನ ಸ್ನೇಹಿ ಟ್ರಾಫಿಕ್ ವ್ಯವಸ್ಥೆ ತರಲು ಚಿಂತನೆ ನಡೆದಿದೆ. ಇನ್ನೂ ಮುಂದೆ ರಸ್ತೆಯಲ್ಲಿ ಅಡ್ಡ ಹಾಕಿ ನಿಲ್ಲಿಸಿ ತಪಾಸಣೆ ಮಾಡುವುದು, ಕಿರುಕುಳ ನೀಡುವುದು ತಪ್ಪಲಿದೆ ಎಂದರು. ಸ್ಮಾರ್ಟ್ ಸಿಟಿ ಯೋಜನೆಯ ಅನುದಾನ ಬಳಕೆ ಮಾಡಿ ನಗರ ಪ್ರದೇಶದಲ್ಲಿ ಅತ್ಯಾಧುನಿಕ ಕ್ಯಾಮರಗಳನ್ನು ಅಳವಡಿಸಿದ್ದೇವೆ, ಇವು ಕಳ್ಳತನದ ವಾಹನಗಳು ಹಾದು ಹೋದರೆ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡುತ್ತವೆ ಎಂದು ಹೇಳಿದರು. ಐದು ವರ್ಷಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ 35 ಸಾವಿರ ಹುದ್ದೆಗಳು ಖಾಲಿ ಇದ್ದವು.

 

Vishwa News 24

Recent Posts

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ – vishwanews24

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…

16 hours ago

ಮಹಾರಾಷ್ಟ್ರ : ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ- vishwanews24

ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…

16 hours ago

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  – vishwanews24

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…

16 hours ago

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ – vishwanews24

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…

16 hours ago

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ – vishwanews24

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…

17 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

3 days ago