Featured

ಪೊಲೀಸರ ಕೊಲೆಗೆ ಯತ್ನಿಸಿದ್ದು ಎಸ್‌‌ಡಿಪಿಐ ಹಾಗೂ ಪಿಎಫ್‌‌ಐ ಕಾರ್ಯಕರ್ತರು, ಎಲ್ಲಾ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು : ಶರಣ್‌‌ ಪಂಪ್‌‌ವೆಲ್ -Vishwanews24

ಪೊಲೀಸರ ಕೊಲೆಗೆ ಯತ್ನಿಸಿದ್ದು ಎಸ್‌‌ಡಿಪಿಐ ಹಾಗೂ ಪಿಎಫ್‌‌ಐ ಕಾರ್ಯಕರ್ತರು, ಎಲ್ಲಾ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು : ಶರಣ್‌‌ ಪಂಪ್‌‌ವೆಲ್ -Vishwanews24

ಮಂಗಳೂರು: ಕೆಲವು ದಿನಗಳ ಹಿಂದೆ ನಗರದಲ್ಲಿ ಪೊಲೀಸರ ಕೊಲೆಗೆ ಯತ್ನ ನಡೆದಿದ್ದು, ಈ ಘಟನೆಯ ಹಿಂದೆ ಪಿಎಫ್‌‌ಐ ಹಾಗೂ ಎಸ್‌‌ಡಿಪಿಐ ಕೈವಾಡ ಇರುವುದಾಗಿ ಆರೋಪ ಮಾಡಲಾಗಿದೆ.

ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ವಿಶ್ವ ಹಿಂದೂಪರಿಷತ್‌‌‌ ವಿಭಾಗ ಕಾರ್ಯದರ್ಶಿ ಶರಣ್‌‌ ಪಂಪ್‌‌ವೆಲ್‌‌ ಅವರು, “ನಗರದಲ್ಲಿ 2019ರ ಡಿಸೆಂಬರ್‌ನಲ್ಲಿ ನಡೆದ ಗೋಲಿಬಾರ್‌ ಪ್ರಕರಣಕ್ಕೆ ಪ್ರತೀಕಾರ ತೀರಿಸಲು ಪೊಲೀಸರ ಕೊಲೆಗೆ ಯತ್ನಿಸಿದ್ದು ಎಸ್‌‌ಡಿಪಿಐ ಹಾಗೂ ಪಿಎಫ್‌‌ಐ ಕಾರ್ಯಕರ್ತರು. ಬಂಧಿತ ಆರೋಪಿಗಳೆಲ್ಲರೂ ಎಸ್‌‌ಡಿಪಿಐ ಹಾಗೂ ಪಿಎಫ್‌‌ಐ ಸಂಘಟನೆಗೆ ಸೇರಿದವರಾಗಿದ್ದಾರೆ” ಎಂದು ಹೇಳಿದ್ದಾರೆ.

ಶಿವಮೊಗ್ಗ: ಜಲ್ಲಿ ಕ್ರಷರ್‌ ಬಳಿ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಡೈನಾಮೈಟ್ ಸ್ಫೋಟ : 10 ಕಾರ್ಮಿಕರ ಸಾವು

“ಕುದ್ರೋಳಿಯ ನಾಲ್ಕು ಮಂದಿ, ಬಜ್ಪೆ ಹಾಗೂ ಬಂಟ್ವಾಳದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂರು ಸ್ಥಳಗಳೂ ಕೂಡಾ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕೇಂದ್ರಗಳಾಗಿವೆ. ಬಂಟ್ವಾಳ ಅವರ ಮೂಲ ಕೇಂದ್ರವಾದ ಕಾರಣದಿಂದ ಇದು ಯೋಜಿತ ದಾಳಿಯಾಗಿದೆ. ಈ ಕೃತ್ಯಕ್ಕೆ ಪಿಎಫ್‌ಐ ಸಣ್ಣ ಯುವಕರನ್ನು ಬಳಸಿಕೊಂಡಿದೆ. ನೈಟ್‌‌‌‌‌ ರೇವಟ್‌ ಮಾತ್ರೆಯನ್ನು ಈ ಯುವಕರಿಗೆ ಕೊಡಲಾಗಿದ್ದು, ಮಾಯಾ ಗ್ಯಾಂಗ್‌ ಎನ್ನುವ ಹೆಸರಿನಲ್ಲಿ ಈ ಕೃತ್ಯವೆಸಗಿದ್ದಾರೆ” ಎಂದಿದ್ದಾರೆ.

“ಪೊಲೀಸರನ್ನು ಹತ್ಯೆಗೈಯಲು ವ್ಯವಸ್ಥಿತವಾದ ಯೋಜನೆ ಮಾಡಲಾಗಿದೆ. ಆದ್ದರಿಂದ ಪೊಲೀಸ್‌ ಇಲಾಖೆ ಈ ವಿಷಯದ ಬಗ್ಗೆ ಆಳವಾದ ತನಿಖೆ ನಡೆಸಬೇಕಾಗಿದೆ. ಈ ಕೃತ್ಯಕ್ಕೆ ಆರ್ಥಿಕ ಹಾಗೂ ಆಶ್ರಯ ನೀಡಿದವರನ್ನು ಕೂಡಾ ಬಂಧಿಸಬೇಕು. ಇದರಲ್ಲಿ ದ.ಕ ಜಿಲ್ಲೆಯ ಎಸ್‌ಡಿಪಿಐ ಹಾಗೂ ಪಿಎಫ್‌ಐ ನಾಯಕರ ಶೇ.100ರಷ್ಟು ಕೈವಾಡವಿದೆ. ಅವರ ಸೂಚನೆಯಿಲ್ಲದೆ ಈ ಕೃತ್ಯ ನಡೆಸುವುದು ಅಸಾಧ್ಯ. ಎಸ್‌ಡಿಪಿಐ ಹಾಗೂ ಪಿಎಫ್‌ಐ ನಾಯಕರನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ

Vishwa News 24

Recent Posts

ಕಾರ್ಕಳ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:   ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

7 hours ago

ಕಾರ್ಕಳ:  ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – vishwanews24

ಕಾರ್ಕಳ:  ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…

7 hours ago

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ – vishwanews24

ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…

7 hours ago

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ : ನೂತನ ಚಳಿಗಾಲದ ವೇಳಾಪಟ್ಟಿ ಪ್ರಕಟ – vishwanews24

ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…

7 hours ago

ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ : ರಘುಪತಿ ಭಟ್ – vishwanews24

ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ  .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…

12 hours ago

ಉಡುಪಿ: ಕಾಮಗಾರಿ ಹಿನ್ನೆಲೆ ; ಸಂಚಾರಕ್ಕೆ ಬದಲಿ ಮಾರ್ಗ – vishwanews24

ಉಡುಪಿ:  ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ    ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…

12 hours ago