ಮಂಗಳೂರು : ‘ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿ ಸುಳ್ಳು ಕೇಸು ಹಾಕುತ್ತಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಅವರು ಎಸ್‌ಡಿಪಿಐ ಕಚೇರಿಗೆ ದಾಳಿ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದರೂ ಜಿಲ್ಲೆಯಲ್ಲಿ ಪೊಲೀಸ್ ಕಮಿಷನರ್ ಮುಂದಿಟ್ಟುಕೊಂಡು ನಿರಂತರ ದಾಳಿ ಆಗುತ್ತಿದೆ.
ಇವರಿಗೆ ನಿರ್ದೇಶನ ನೀಡಿದವರು ಯಾರು..? ಇಡೀ ದೇಶದಲ್ಲಿ ದ.ಕ ಜಿಲ್ಲೆಯಲ್ಲಿ ಮಾತ್ರ ಇಂತಹ ದಾಳಿಗಳು ಯಾಕೆ ಆಗುತ್ತಿದೆ. ಹಾಗಾದರೆ ಕಮಿಷನರ್ ಕೇವಲ ಇದನ್ನು ಫೇಮಸ್ ಆಗೋಕೆ ಮಾಡ್ತಿದ್ದಾರಾ? ರಾಜಕೀಯ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹೀಗೆ ಮಾಡ್ತಿದ್ದಾರಾ? ಕೂತರೂ ನಿಂತರೂ ಪ್ರೆಸ್‌ಮೀಟ್ ಮಾಡುವ ಕಮಿಷನರ್ ಇದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ. ಎಸ್‌ಡಿಪಿಐ ನ್ನು ರಾಜಕೀಯವಾಗಿ ಎದುರಿಸಲು ನಿಮಗೆ ಧಮ್ ಇಲ್ಲವಾ?’ ಎಂದು ರಾಜ್ಯ ಸಮಿತಿ ಮಾಧ್ಯಮ ಸಂಯೋಜಕ ರಿಯಾಝ್ ಕಡಂಬು ಪ್ರಶ್ನಿಸಿದರು.
ಪದೇ ಪದೇ ದಾಳಿ ಹಾಗೂ ಸಂಘಟನೆಗಳ ಕಚೇರಿಯನ್ನು ಮುಚ್ಚುತ್ತಿರುವ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ‘ಕಚೇರಿಗೆ ಬೀಗ ಹಾಕುವುದು , ರಾತ್ರಿ ವೇಳೆ ದಾಳಿ ಏಕೆ..? ಅಮಾಯಕರನ್ನು ಬಂಧಿಸಲಾಗುತ್ತದೆ. ನಮ್ಮದು ರಾಜಕೀಯ ಪಕ್ಷ. ನಮ್ಮ ಸಂಘಟನೆಯ ಸದುದ್ದೇಶ ಜನರಿಗೆ ತಿಳಿದಿರುವುದರಿಂದ ದಲಿತರು, ಕ್ರೈಸ್ತರು ಎಲ್ಲರೂ ನಮ್ಮ ಸಂಘಟನೆಗೆ ಸೇರುತ್ತಿದ್ದಾರೆ. ಇದನ್ನು ನೋಡಿ ಸಹಿಸಲಾಗದ ಬಿಜೆಪಿ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣಾ ಆಯೋಗವೇ ನಮ್ಮ ಎಸ್‌ಡಿಪಿಐ ಸಂಘಟನೆ ಸಂವಿಧಾನ ತತ್ವಗಳ ಮೂಲಕ ಕೆಲಸ ಮಾಡುತ್ತಿದೆ ಎಂದು ಕ್ಲೀನ್‌ಚಿಟ್ ಕೊಟ್ಟಿರುವಾಗ ದ.ಕ ಜಿಲ್ಲೆಯಲ್ಲಿ ಮಾತ್ರ ಯಾಕೆ ಇಂತಹ ಪ್ರಕ್ರಿಯೆಗಳು ನಡೆಯುತ್ತಿದೆ’ ಎಂದು ಹೇಳಿದರು.
ಮಂಗಳೂರು: ಅಲೆಗಳ ತೀವ್ರತೆಯಿಂದ ಆಯ ತಪ್ಪಿ ಬೋಟ್‌ನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ – Vishwanews24
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…