ಪೋಷಕರನ್ನು ಕಳೆದು ಅನಾಥವಾಗಿದ್ದ ಬಾಲಕಿಯನ್ನು ತಮ್ಮ ಮಗಳಂತೆ ಸಾಕಿ ಹಿಂದೂ ಯುವಕನೊಂದಿಗೆ ಮದುವೆ ಮಾಡಿದ ಮುಸ್ಲಿಂ ದಂಪತಿ -Vishwanews24

ಕಾಸರಗೋಡು : ಚಿಕ್ಕಂದಿನಿಂದಲೇ ಪೋಷಕರನ್ನು ಕಳೆದು ಅನಾಥವಾಗಿದ್ದ ಹಿಂದೂ ಬಾಲಕಿಗೆ ತಮ್ಮ ಮಗಳಂತೆ ಸಾಕಿ ಸಲಹಿದವರು ಕೆ.ಅಬ್ದುಲ್ಲಾ – ಖದೀಜಾ ದಂಪತಿ . ಕೊನೆಗೂ ತಮ್ಮ ಸ್ವಂತ ಮಗಳಂತೆ ವಿವಾಹವನ್ನು ಹಿಂದೂ ಯುವಕನ ಜೊತೆಯೇ ನೆರವೇರಿಸಿಕೊಡುವ ಮೂಲಕ ಸೌಹಾರ್ಧತೆಯ ಸಂದೇಶವನ್ನು ತೋರಿಸಿಕೊಟ್ಟಿದ್ದಾರೆ.

ಹನ್ನೆರಡು ವರ್ಷಗಳ ಹಿಂದೆ, ತನ್ನ ಹತ್ತನೇ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥಳಾದ ರಾಜೇಶ್ವರಿ ಯನ್ನು ಮಗಳಾಗಿ ಸ್ವೀಕರಿಸಿದ ಎ.ಅಬ್ದುಲ್ಲಾ ಮತ್ತು ಕದೀಜಾ ತಮ್ಮ ಸ್ವಂತ ಮಗಳಂತೆ ಸಾಕಿ,ಸಲಹಿ, ಸಕಲ ಖರ್ಚುಗಳನ್ನೂ ತಾವೇ ಭರಿಸಿ ಅವಳನ್ನು ಯೋಗ್ಯ ವರನಿಗೆ ಹಿಂದೂ ಧರ್ಮದ ಸಂಪ್ರದಾಯಗಳ ಪ್ರಕಾರ ವಿವಾಹ ನಡೆಸಿಕೊಟ್ಟಿದ್ದಾರೆ.

ಈಗ ರಾಜೇಶ್ವರಿಗೆ 22 ವರ್ಷ . ಅಬ್ದುಲ್ಲ-ಖದೀಜಾ ದಂಪತಿಯ ಸಾಕು ಪುತ್ರಿ ತಂಜಾವೂರು ನಿವಾಸಿಯಾದ ರಾಜೇಶ್ವರಿ 7 ವರ್ಷ ಪ್ರಾಯವಿದ್ದಾಗ ಇಲ್ಲಿಗೆ ತಲುಪಿದ್ದರು. ಆಕೆಗೆ 10 ವರ್ಷವಾದಾಗ ತಂದೆ- ತಾಯಿ ನಿಧನ ಹೊಂದಿದ್ದರು. ತಂದೆ – ತಾಯಿ ತೀರಿಕೊಂಡಿರುವುದಾಗಿ ಈ ಸಂದರ್ಭದಲ್ಲಿ ತಿಳಿದುಬಂದಿದ್ದು , ಇದರಿಂದ ಈ ಬಾಲಕಿಯನ್ನು ಅಬ್ದುಲ್ಲಾ ರವರ ಕುಟುಂಬದವರು ತಮ್ಮ ಮಗಳಂತೆ ಪೋಷಣೆ ಮಾಡಿದ್ದರು . ಅಬ್ದುಲ್ಲಾರ ಮೂವರು ಮಕ್ಕಳ ಜೊತೆ ಈಕೆ ಇನ್ನೊಬ್ಬಳು ಮಗಳೆಂದು ಗುರುತಿಸಿಕೊಂಡಳು . ಈಗ 22 ವರ್ಷ ಪ್ರಾಯ ಆಗುತ್ತಲೇ ಅಬ್ದುಲ್ಲರು ವಿವಾಹದ ಬಗ್ಗೆ ಚಿಂತನೆ ನಡೆಸಿದರು. ರಾಜೇಶ್ವರಿ ಮತ್ತು ಅಬ್ದುಲ್ಲಾರಿಗೆ ಇಷ್ಟಗೊಂಡ ವರನನ್ನು ಹುಡುಕಿದರು. ಕೊನೆಗೆ ಕಾಞ೦ಗಾಡ್ ಪುದಿಯ ಕೋಟದ ಬಾಲಚಂದ್ರನ್ – ಜಯಂತಿ ದಂಪತಿ ಪುತ್ರ ವಿಷ್ಣುಪ್ರಸಾದ್ ಜೊತೆ ವಿವಾಹಕ್ಕೆ ತೀರ್ಮಾನಿಸಲಾಯಿತು .

ಕ್ಷೇತ್ರದ ಮುಖ್ಯ ತಂತ್ರಿಯವರ ನೇತೃತ್ವದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರಾಜೇಶ್ವರಿ ಸಂಬಂಧಿಕರಾಗಿ ಅಬ್ದುಲ್ಲಾ-ಕದೀಜಾ ದಂಪತಿಗಳು, ವರ ವಿಷ್ಣುಪ್ರಸಾದ್‌ರವರ ಪೋಷಕರು , ಸಂಬಂಧಿಕರು , ಹಿತೈಷಿಗಳು ಪಾಲ್ಗೊಂಡಿದ್ದರು.

 

Vishwa News 24

Recent Posts

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

5 minutes ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

16 minutes ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

20 minutes ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

4 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

4 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

4 hours ago