Featured

ಪ್ಯಾನ್-ಆಧಾರ್ ಜೋಡಣೆ – ಜೂನ್ 30ಕ್ಕೆ ವಿಸ್ತರಣೆ : VishwaNews24

ಪ್ಯಾನ್-ಆಧಾರ್ ಜೋಡಣೆ – ಜೂನ್ 30ಕ್ಕೆ ವಿಸ್ತರಣೆ

ನವದೆಹಲಿ: ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ವಿಧಿಸಲಾಗಿದ್ದ ಗಡುವನ್ನು ಆದಾಯ ತೆರಿಗೆ ಇಲಾಖೆ ಇದೀಗ ಜೂನ್ 30ರವರೆಗೆ ವಿಸ್ತರಿಸಿದೆ. ಗಡುವು ಅವಧಿಗೆ ಮೂರು ದಿನ ಇರುವಾಗ ಮತ್ತೆ ಅವಧಿ ವಿಸ್ತರಣೆಯಾಗಿದೆ.

1000 ರೂ. ಶುಲ್ಕದೊಂದಿಗೆ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಮಾರ್ಚ್ 31ರ ಗಡುವು ನೀಡಲಾಗಿತ್ತು. ಜೋಡಣೆಗೆ ಕೊನೆಯ ದಿನ ಸಮೀಪಿಸುತ್ತಿದ್ದಂತೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಸೈಬರ್ ಸೆಂಟರ್‌ಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಇದರಿಂದ ಸೈಬರ್ ಸೆಂಟರ್‌ಗಳಲ್ಲಿಯೂ ಸರ್ವರ್ ಡೌನ್ ಸಹಿತ ಹಲವು ಸಮಸ್ಯೆ ತಲೆದೋರಿದೆ. ಇದೀಗ ಮತ್ತೆ ಗಡುವು ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಮಂಗಳವಾರ ಟ್ವೀಟ್ ಮಾಡಿದೆ.

 

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಕೇಂದ್ರಗಳಿಗೆ ಆಗಮಿಸುತ್ತಿರುವುದರಿಂದ ಬಹುತೇಕ ಸೈಬರ್ ಕೇಂದ್ರಗಳು ಇದನ್ನೂ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು 1 ಸಾವಿರ ಶುಲ್ಕದೊಂದಿಗೆ ಹೆಚ್ಚುವರಿಯಾಗಿ 200, 500 ರೂ.ಗಳನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

 

 

Vishwa News 24

Recent Posts

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ – vishwanews24

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…

2 days ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

2 days ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

3 days ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

3 days ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

3 days ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

3 days ago