Featured

ಪ್ರಜ್ವಲ್ ಪೆನ್‍ಡ್ರೈವ್ ಕೇಸ್- ಕುಟುಂಬದ ಹೆಸರು ಯಾಕೆ ತರ್ತೀರಾ ; ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು: ಹೆಚ್‍ಡಿಕೆ ಕಿಡಿ – Vishwanews24

ಪ್ರಜ್ವಲ್ ಪೆನ್‍ಡ್ರೈವ್ ಕೇಸ್- ಕುಟುಂಬದ ಹೆಸರು ಯಾಕೆ ತರ್ತೀರಾ ; ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು: ಹೆಚ್‍ಡಿಕೆ ಕಿಡಿ

ಶಿವಮೊಗ್ಗ: ಲೋಕಸಭಾ ಚುನಾವಣೆಯ ಬೆನ್ನಲ್ಲೇ ರಾಜ್ಯದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‍ಡ್ರೈವ್ ಭಾರೀ ಸುದ್ದಿಯಲ್ಲಿದೆ. ಈ ಸಂಬಂಧ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ  ಪ್ರತಿಕ್ರಿಯಿಸಿ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಪ್ರಕರಣದಲ್ಲಿ ಕುಟುಂಬದ ಹೆಸರು ಯಾಕೆ ತರ್ತಿರಾ ಎಂದು ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಎಸ್ ಐಟಿ ರಚನೆ ಮಾಡಿದ್ದಾರೆ. ಈ ನೆಲದ ಕಾನೂನಿನಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಇಲ್ಲಿ ವ್ಯಕ್ತಿ ಬಗ್ಗೆ ಚರ್ಚೆ ಮಾಡಿ, ಕುಟುಂಬದ ಹೆಸರು ಏಕೆ ತರುತ್ತೀರಾ?, ದೇವೇಗೌಡರು, ಕುಮಾರಸ್ವಾಮಿ ಅಂತಾ ಹೆಸರು ಏಕೆ ತರುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ತಪ್ಪುಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ನಾನು ಯಾರನ್ನು ವಹಿಸಿಕೊಳ್ಳುತ್ತಿಲ್ಲ. ಎಫ್‍ಐಆರ್ ಹಾಕಿದ್ದಾರೆ, ಎಸ್‍ಐಟಿ ರಚನೆ ಆಗಿದೆ ತನಿಖೆ ನಡೆದು ಸತ್ಯಾಂಶ ಹೊರಗೆ ಬರಲಿ. ನಮ್ಮ ಗಮನಕ್ಕೆ ಬಂದಿದ್ದರೆ ಮುಜುಗರ ತಪ್ಪಿಸಬಹುದಿತ್ತು. ಪ್ರತಿನಿತ್ಯ ಯಾರು ಎಲ್ಲಿ ಹೋಗ್ತಾರೆ ಬರುತ್ತಾರೆ ಅಂತಾ ಕಾಯಲು ಆಗುತ್ತಾ ಎಂದು ಹೆಚ್‍ಡಿಕೆ ಗರಂ ಆಗಿದ್ದಾರೆ.

ಈ ಹಗರಣದಿಂದ ನನಗಷ್ಟೇ ಮುಜುಗರವಾಗೋದಿಲ್ಲ, ಇಡೀ ಸಮಾಜಕ್ಕೆ ಮುಜುಗರವಾಗುತ್ತದೆ ಎಂದು ಹೇಳಿದ ಅವರು ಇದರಲ್ಲಿ ಯಾರನ್ನೂ ವಹಿಸಿಕೊಳ್ಳಲು ಹೋಗಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದರು.

ಎಫ್.ಐ.ಆರ್ ಆಗಿದೆ, ಸತ್ಯಾಂಶ ಹೊರಬರಲಿ. ಎಸ್ ಐಟಿ ತನಿಖೆ ಮಾಡಿ ವರದಿಯನ್ನು ನೀಡಲಿ. ಹಾಸನದಲ್ಲಿ ಪೆನ್ ಡ್ರೈವ್ ಬಿಟ್ಟವರು ಯಾರು? ಪೆನ್ ಡ್ರೈವ್ ಹಿಂದೆ ಯಾರಿದ್ದಾರೆ ಗೊತ್ತಾಗಲಿ ಎಂದು ಹೇಳಿದರು.

Vishwa News 24

Recent Posts

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ – vishwanews24

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…

12 hours ago

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ – vishwanews24

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…

12 hours ago

ದೇಣಿಗೆ ಕಳ್ಳತನ ವಿವಾದ: ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ – vishwanews24

ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…

13 hours ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ – vishwanews24

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ  ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…

13 hours ago

ರಾಮ ಮಂದಿರ ದೇಣಿಗೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್‌ ಎಚ್ಚರಿಕೆ – vishwanews24

ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್‌ ಲಕ್ನೋ: ರಾಮಭಕ್ತರ…

13 hours ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

15 hours ago