ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಫೋಟೋ ಹಾಗೂ ವೀಡಿಯೋಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಒಳಗೆ ಇರುವ ವೀಡಿಯೋ ಹಾಗೂ ಫೋಟೋಗಳು ಅಸಲಿಯಾ? ನಕಲಿಯಾ? ಅನ್ನೋದು ಗೊತ್ತಾಗಬೇಕಿದೆ. ಚುನಾವಣೆಗಾಗಿ ಈ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಇರುವವರು ಅವರೇನಾ ಅಥವಾ ಬೇರೆ ಅವರ ಫೋಟೋ ಅಂಟಿಸಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಅನುಮಾನ ಹೊರಹಾಕಿದ್ದಾರೆ.
ಸೋಶಿಯಲ್ ಮೀಡಿಯಾಕ್ಕೆ ವೀಡಿಯೋ ಬಿಟ್ಟ ಪುಣ್ಯಾತ್ಮರು ಮಹಿಳೆಯರ ಮುಖ ಬ್ಲರ್ ಮಾಡಬೇಕಿತ್ತು. ಇದರಿಂದ ಆ ಮಹಿಳೆಯ ಮಾನ ಮರ್ಯಾದೆ ಕುಟುಂಬದ ಮರ್ಯಾದೆ ಉಳಿಯುತಿತ್ತು. ಈ ಪ್ರಕರಣದಲ್ಲಿ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ಸಿಎಂ ಡಿಸಿಎಂ ಯಾವ ಅಧಿಕಾರಿಗಳಿಗೆ ಯಾವ ಸೂಚನೆ ಕೊಟ್ಟಿದ್ದಾರೆ?. ಯಾರ ಜೊತೆ ಸಭೆಗಳನ್ನು ಮಾಡಿದ್ದಾರೆ ಎಂದು ಹೆಚ್‍ಡಿಕೆ ಪ್ರಶ್ನೆ ಮಾಡಿದ್ದಾರೆ.
ಎಲ್ಲಾ ಮಾಹಿತಿ ನನ್ನ ಬಳಿ ಇದೆ. ಅವರ ಅಕ್ಕ-ಪಕ್ಕ ಇದ್ದವರೇ ಮಾಹಿತಿ ನೀಡಿದ್ದಾರೆ. ಅವರ ಬಳಿ ಇರುವವರು ನಮ್ಮ ಅಭಿಮಾನಿಗಳಿದ್ದಾರೆ. ಫೋನ್ ಟ್ಯಾಪಿಂಗ್ ಅನುಮಾನ ಅಲ್ಲ ಅದು ಪಕ್ಕಾ ಮಾಹಿತಿ ಎಂದು ಮೈಸೂರಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಗಾಂಧಿ ಜಯಂತಿ ಆಚರಣೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ…
ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್…
ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ ಅ.3ರಿಂದ ಧಾರ್ಮಿಕ ಕಾರ್ಯಕ್ರಮಗಳ ಚಾಲನೆ.. ವರ್ಷಪೂರ್ತಿ ಗೋಸೇವೆ, ಅನ್ನದಾನ, ಆರೋಗ್ಯ–ಶಿಕ್ಷಣ ಸೇವೆ…
ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…
ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…
ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…