Featured

ಪ್ರತಿನಿತ್ಯ ಮೊಸರು ಸೇವಿಸುತ್ತೀರಾ…?? ಹಾಗಾದರೆ ವೃದ್ಧಿಸಿ ನಿಮ್ಮ ಆರೋಗ್ಯ.. Vishwanews24

ಮೊಸರಿಲ್ಲದೆ ಊಟ ಊಟವೇ ಅಲ್ಲ,ಆರೋಗ್ಯ ದೃಷ್ಟಿಯಿಂದ ಮೊಸರು ಬಹಳ ಉಪಯೋಗಕಾರಿ.ಒಳ್ಳೆಯ ಮೊಸರು ಸಿಗೋದು ತುಂಬಾ ಕಷ್ಟ ಆದರೆ ನಿಮ್ಮ ಮನೆಯಲ್ಲಿನ ಹಿರಿಯರನ್ನು ಕೇಳಿ ನೋಡಿ ಮೊಸರು ಇಲ್ಲದೆ ಎಂದಾದ್ರೂ ಊಟ ಮಾಡಿದ್ರಾ ಅಂತ ಖಂಡಿತ ಇಲ್ಲ ಅಂತ ಹೇಳ್ತಾರೆ.ಅಂದಿನ ದಿನಗಳಲ್ಲಿ ಊಟದಲ್ಲಿ ಮೊಸರು ಇರಲೇಬೇಕು.

ಮೊಸರಿಲ್ಲದೆ ಊಟ ಮಾಡುತ್ತಿರಲಿಲ್ಲ ಆದರೆ ಈಗ ವಾರದಲ್ಲಿ ಎಷ್ಟು ದಿನ ಮೊಸರು ಸೇವಿಸುತ್ತಿದ್ದೇವೆ ?

ಅಷ್ಟಕ್ಕೂ ಮೊಸರಿನೊಂದಿಗೆ ಊಟವನ್ನು ಮುಗಿಸೋದು ನೂರಾರು ವರ್ಷಗಳಿಂದ ಇರುವ ಪದ್ಧತಿ.ಮೊಸರನ್ನು ಬಳಸುವುದರಿಂದ ಆರೋಗ್ಯಕ್ಕೆ ಎಷ್ಟೋ ಅನುಕೂಲಗಳಿವೆ .ಪ್ರತಿದಿನ ಮೊಸರು ತಿಂದರೆ ಅದರಿಂದಾಗುವ ಉಪಯೋಗಗಳನ್ನು ಹೇಳ್ತೀವಿ ಓದಿ.ಮೊಸರಿನಲ್ಲಿ ಕ್ಯಾಲ್ಷಿಯಂ,ವಿಟಮಿನ್ ಡಿ,ಪ್ರೊಟೀನ್,ಗಡ್ ಬ್ಯಾಕ್ಟಿರಿಯಾ ಇರುತ್ತದೆ ಬೇರೆ ಆಹಾರಗಳಿಂದ ವಿಟಮಿನ್ಸ್ ಮತ್ತು ಮಿನರಲ್ಸ್ ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತೆ.ಮೊಸರನ್ನ ಮಜ್ಜಿಗೆ ಮಾಡಿ ಅಥವಾ ಲಸ್ಸಿ ಮಾಡಿ ಕುಡಿಯುವುದರಿಂದ ಹೊಟ್ಟೆಯಲ್ಲಿನ ಶಾಖಾ ಕಡಿಮೆಯಾಗುತ್ತೆ.ಹೊಟ್ಟೆ ನೋಯುತ್ತಿದ್ದರೆ,ಅನೇಕ ಬಾರಿ ಶೌಚಾಲಯಕ್ಕೆ ಹೋಗ್ತಾ ಇದ್ರೆ ಮೊಸರಿಗೆ ಇದಕ್ಕಾಗಿ ಕುಡಿಯಬೇಕು ಮೊಸರಿನಲ್ಲಿ ಈಸೆಬ್ ಗುಲ್ ಹಾಕಿ ಕುಡಿಯಬೇಕು.

ಮೊಸರಿನಲ್ಲಿ ಗಡ್ ಬ್ಯಾಕ್ಟೀರಿಯಾ ಇರೋದ್ರಿಂದ ಕ್ರಿಮಿಗಳ ಜೊತೆಗೆ ಹೋರಾಡುತ್ತೆ.ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ಸಹಾಯ ಮಾಡುತ್ತದೆ.ಯೀಸ್ಟ್ ಇನ್ಫೆಕ್ಷನ್ ನಿಂದ ತೊಂದರೆ ಅನುಭವಿಸುತ್ತಿರುವ ಮಹಿಳೆಯರಿಗೆ ಇದು ಎಷ್ಟೋ ಉಪಯೋಗಕಾರಿ.ಮೊಸರಿನಲ್ಲಿ ಕ್ಯಾಲ್ಷಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮೂಳೆಗಳ ಆರೋಗ್ಯ ಹೆಚ್ಚುತ್ತದೆ.

ಮೊಸರಿನಿಂದ ಆಗುವ ಉಪಯೋಗಗಳು.

1.ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನಿಯಮಿತವಾಗಿ ಮೊಸರನ್ನು ಸೇವಿಸುವ ಮೂಲಕ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ ಹಾಗೂ ದೇಹದಲ್ಲಿ ನಿಶಕ್ತಿಯಾಗದಂತೆ ತಡೆಯುತ್ತದೆ. ಹಾಲು ಮೊಸರಾಗುವ ಸಮಯದಲ್ಲಿ ಹಾಲಿನಲ್ಲಿರುವ ಸಕ್ಕರೆಗಳು ಒಡೆದು ಒಂದು ಬಗೆಯ ಆಮ್ಲವಾಗಿ ಪರಿವರ್ತಿತವಾಗುತ್ತದೆ. ಈ ಆಮ್ಲವೇ ಮೊಸರಿನ ಹುಳಿಯಾದ ರುಚಿಗೆ ಕಾರಣವಾಗಿದ್ದು ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೊಸರು ಅತ್ಯುತ್ತಮವಾದ ಆಹಾರವಾಗಿದೆ.

2.ಕರುಳು ಹಾಗೂ ಜಠರದ ತೊಂದರೆಗಳಿಗೆ ರಾಮಬಾಣ ನಿತ್ಯವೂ ಮೊಸರನ್ನು ಆಹಾರದ ಒಂದು ಭಾಗವಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕರುಳು ಹಾಗೂ ಜಠರದ ತೊಂದರೆಗಳು ಆವರಿಸುವ ಸಾಧ್ಯತೆ ಇತರ ವ್ಯಕ್ತಿಗಳಿಗಿಂತ ಕಡಿಮೆ ಇರುತ್ತದೆ. ಒಂದು ವೇಳೆ ಹೊಟ್ಟೆಯೊಳಗೆ ಬಿಸಿಯಾಗಿರುವಂತೆ ಅನ್ನಿಸಿದರೆ ಬಿಳಿ ಅನ್ನಕ್ಕೆ ಮೊಸರು ಕಲಸಿಕೊಂಡು ಸೇವಿಸಬೇಕು

 

3.ಮೂಳೆಗಳ ಆರೋಗ್ಯಕ್ಕೆ ಮೂಳೆಗಳನ್ನು ದೃಢಗೊಳಿಸಲು ಹಾಲಿಗಿಂತಲೂ ಮೊಸರು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ನೇರವಾಗಿ ಪಡೆದುಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಜೇನನ್ನು ಸೇರಿಸಬೇಕಾಗುತ್ತದೆ. ಆದರೆ ಮೊಸರಿನಲ್ಲಿರುವ ಕ್ಯಾಲ್ಸಿಯಂ ಅನ್ನು ಜೇನಿನ ಅಗತ್ಯವಿಲ್ಲದೇ ದೇಹ ಹೀರಿಕೊಳ್ಳಲು ಸಾಧ್ಯ.

4.ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆಲ್ಲಾ ರಾಮಬಾಣ ಮೊಸರಿನ ಸೇವನೆಯಿಂದ ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಗಳಿಂದ ರಕ್ಷಣೆ ದೊರಕುತ್ತದೆ. ಅಲ್ಲದೇ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಈ ಮೂಲಕ ಹೃದಯದ ಬಡಿತದ ವೇಗ ಹಾಗೂ ಒತ್ತಡವನ್ನೂ ನಿಯಂತ್ರಿಸುತ್ತದೆ.

5.ಮೂಲವ್ಯಾಧಿಯ ಸಮಸ್ಯೆಗೆ ಮೂಲವ್ಯಾಧಿಯ ಕಾರಣ ಆಸನಭಾಗದಲ್ಲಿ ಗಂಟುಗಳಾಗಿರುವ (hemoಡಿಡಿhoiಜs) ವ್ಯಕ್ತಿಗಳಿಗೆ ಮೊಸರನ್ನು ನೀರಾಗಿಸಿ ಇದರಲ್ಲಿ ಕೆಲವು ನೆನೆಸಿಟ್ಟ ಪಿಸ್ತಾಗಳನ್ನು ಅರೆದು ಕುಡಿಯುವ ಮೂಲಕ ನೋವಿನಿಂದ ಮುಕ್ತಿ ದೊರಕುತ್ತದೆ.

6.ನಿದ್ರಾಹೀನತೆಯಿಂದ ಬಳಲುವ ವ್ಯಕ್ತಿಗಳಿಗೆ ನಿದ್ರಾಹೀನತೆಯಿಂದ ಬಳಲುವ ವ್ಯಕ್ತಿಗಳು ರಾತ್ರಿ ಮಲಗುವ ಮುನ್ನ ಮೊಸರನ್ನು ಸೇವಿಸಿ ಮಲಗಬೇಕು

7.ಬಾಯಿಯ ಹುಣ್ಣು ಸನಸ್ಯೆಯಿಂದ ಬಳಲುತ್ತಿದ್ದರೆ ಒಂದು ವೇಳೆ ಸತತವಾಗಿ ಬಾಯಿಯ ಹುಣ್ಣು ಅಥವಾ ಮೌಥ್ ಅಲ್ಸರ್ ನಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆದ್ದ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಂಡರೆ ಶೀಘ್ರವೇ ಗುಣವಾಗುತ್ತದೆ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago