ಮೀರತ್: ಮುಸ್ಲಿಮರ ಮತಗಳು ವಿಭಜನೆಯಾಗದಿರಲಿ, ಮುಸ್ಲಿಮರೆಲ್ಲರೂ ಬಿಎಸ್‌ಪಿ-ಎಸ್‌ಪಿ ಮೈತ್ರಿಯನ್ನು ಬೆಂಬಲಿಸಿ ಎಂದು ಬಹಿರಂಗವಾಗಿಯೇ ಕೋಮು ಧ್ರುವೀಕರಣಕ್ಕೆ ಕರೆ ನೀಡಿದ ಮಾಯಾವತಿ ಅವರ ಹೇಳಿಕೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.
‘ಸಹಾರಣ್‌ಪುರದಲ್ಲಿ ನಿನ್ನೆ ಮಾಯಾವತಿ ಮಾತಾಡಿರುವುದನ್ನು ನೀವು ಕೇಳಿರಲೇಬೇಕು. ನಾವು (ಮಹಾಘಟಬಂಧನ್) ಮುಸ್ಲಿಮರ ಮತಗಳನ್ನು ಪಡೆದರೆ, ಉಳಿದವರ ಬೆಂಬಲ ಅಗತ್ಯವಿಲ್ಲ ಎಂದು ಮಾಯಾವತಿ ಹೇಳಿದ್ದರು. ನಾನೂ ಸಹ ಅದೇ ರೀತಿ ಹೇಳಬಯಸುತ್ತೇನೆ, ಕಾಂಗ್ರೆಸ್, ಎಸ್‌ಪಿ, ಬಿಎಸ್ಪಿಗಳು ಆಲಿಯಲ್ಲಿ ನಂಬಿಕೆ ಇರಿಸಿದ್ದರೆ ನಾವು ಬಜರಂಗಬಲಿಯಲ್ಲಿ ನಂಬಿಕೆ ಹೊಂದಿದ್ದೇವೆ’ ಎಂದು ಮೀರತ್‌ನಲ್ಲಿ ಮಂಗಳವಾರ ನಡೆದ ರ‍್ಯಾಲಿಯಲ್ಲಿ ಯೋಗಿ ಹೇಳಿದರು.
ಬಿಎಸ್‌ಪಿ ವರಿಷ್ಠೆ ಮಾಯಾವತಿ ಮುಸ್ಲಿಂ ಮತ ಸೆಳೆಯಲು ದಲಿತರ ಭಾವನೆಯೊಂದಿಗೆ ಆಟವಾಡುತ್ತಿದ್ದಾರೆ. ಮುಸ್ಲಿಂ ಸಮುದಾಯ ಮತ್ತು ದಲಿತರು ಒಗ್ಗಟ್ಟಾಗಿರಲು ಯಾವತ್ತೂ ಸಾಧ್ಯವಿಲ್ಲ. ಮುಸ್ಲಿಮರು ವಿರೋಧ ಪಕ್ಷಗಳಿಗೆ ಮಾತ್ರ ಮತ ಹಾಕಬೇಕೆಂದು ಮಾಯಾವತಿ ಹೇಳಿದ್ದಾರೆ. ಈ ಮಾತಿನ ಅರ್ಥ ಏನು? ಹಾಗಿದ್ದರೆ ಹಿಂದೂಗಳಿಗೆ ಬಿಜೆಪಿಗೆ ಓಟು ಹಾಕದೆ ಬೇರೆ ದಾರಿಯಿಲ್ಲ ಎಂದು ಮಾಯಾವತಿ ವಿರುದ್ಧ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
‘ಈ ಪಕ್ಷಗಳು ಬಜರಂಗಬಲಿಯ ಅನುಯಾಯಿಗಳನ್ನು ಎಂದೂ ಸಹಿಸಿಕೊಳ್ಳುವುದಿಲ್ಲ ಎಂಬುನ್ನು ಸ್ಪಷ್ಟವಾಗಿಯೇ ಸಾರಿವೆ. ಹೀಗಾಗಿಯೇ ಅವರು ‘ಆಲಿ ಆಲಿ’ ಎಂದು ವೇದಿಕೆಯ ಮೇಲಿನಿಂದ ಪದೇ ಪದೇ ಹೇಳುತ್ತ ದೇಶಾದ್ಯಂತ ಹಸಿರು ವೈರಸ್ ಅನ್ನು ಹಬ್ಬಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…